ಬೆಂಗಳೂರು : ಜನರ ಜೀವನಾಡಿ ಅಂದರೆ ಅದು ಬಿಎಂಟಿಸಿ. ನಿತ್ಯ 30 ಲಕ್ಷ ಮಂದಿ ಬಿಎಂಟಿಸಿ ಬಸ್ಗಳಲ್ಲಿ ಓಡಾಡುತ್ತಾರೆ. ಆದ್ರೆ, ಕಳೆದ ಹಲವು ವರ್ಷಗಳಿಂದ ಬಿಎಂಟಿಸಿ ಆರ್ಥಿಕ ಪರಿಸ್ಥಿತಿ ಚನ್ನಾಗಿಲ್ಲ. ಆದ್ರೂ ನಗರದಲ್ಲಿ 25 ವರ್ಷಗಳಿಂದ ನಿರಂತರ ಸೇವೆಯನ್ನು ನೀಡ್ತಾ ಬಂದಿರೋ ನಿಗಮ, 75ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಒಂದು ದಿನ ಪೂರ್ತಿ ಬೆಂಗಳೂರಿಗರು ಬಿಎಂಟಿಸಿಯಲ್ಲಿ ಎಲ್ಲಿಂದ ಎಲ್ಲಿಗೆ ಬೇಕಾದರೂ ಉಚಿತವಾಗಿ ಸಂಚಾರ ಮಾಡಬಹುದು. ಯಾವುದೇ ಹಣ ಪಾವತಿ ಮಾಡಬೇಕಿಲ್ಲ.
ಬೆಂಗಳೂರಿನಲ್ಲಿ ಬಿಎಂಟಿಸಿ 6,400 ಬಸ್ಗಳು ಸಂಚಾರ ಮಾಡುತ್ತಿವೆ. ಏರ್ಪೋರ್ಟ್, ಕಾಡುಗೋಡಿ, ಬನ್ನೇರುಘಟ್ಟ, ಹೆಬ್ಬಾಳ ಸೇರಿದಂತೆ ಹಲವೆಡೆ ವೋಲ್ವೋ ಬಸ್ಗಳು ಕೂಡ ಸಂಚಾರ ಮಾಡುತ್ತಿವೆ. ಈ ಎಲ್ಲಾ ಎಸಿ ಹಾಗೂ ನಾನ್ ಎಸಿ ಯಾವುದೇ ಬಸ್ ಆದ್ರೂ ಕೂಡ ಇಡೀ ದಿನ ಉಚಿತವಾಗಿ ಓಡಾಡಬಹುದು.
ಬಿಎಂಟಿಸಿಯ ಒಂದು ದಿನದ ಆದಾಯ 3.5 ಕೋಟಿಯಷ್ಟು ಇದೆ. ಆ ಇಡೀ ಆದಾಯವನ್ನ ಸಾರ್ವಜನಿಕರ ಉಚಿತ ಸೇವೆಗೆ ಮೀಸಲಿಟ್ಟಿದೆ.. ಉಚಿತ ಸಂಚಾರ ವಿಚಾರಕ್ಕೆ ಸರ್ಕಾರ ಈಗಾಗಲೇ ಒಪ್ಪಿದ್ದು, ಪ್ರತಿ ಪ್ರಯಾಣಿಕರು ಇದರ ಲಾಭಪಡೆಯಬೇಕಾಗಿ ನಿಗಮ ವಿನಂತಿ ಮಾಡಿದೆ.
ಒಟ್ಟಿನಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮದ ಜೊತೆಗೆ ಬಿಎಂಟಿಸಿ ರಜತ ಮಹೋತ್ಸವ ಸಂಭ್ರಮವು ಜೋರಾಗಿದೆ. ಬಿಎಂಟಿಸಿಯಲ್ಲಿಯೂ ಸಂಭ್ರಮ ಕಳೆಗಟ್ಟಿದೆ. ಹೀಗಾಗಿ ಬಸ್ ಸಂಚಾರ ಉಚಿತವಾಗಲಿದ್ದು, ಜನ ಎಷ್ಟರ ಮಟ್ಟಿಗೆ ಇದನ್ನು ಸದುಪಯೋಗ ಪಡಿಸಿಕೊಳ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.
ಕೃಷ್ಣಮೂರ್ತಿ, ಪವರ್ ಟಿವಿ, ಬೆಂಗಳೂರು