Sunday, December 22, 2024

405 ಅಡಿ ಧ್ವಜಸ್ತಂಭ ಏರಿದ ಜ್ಯೋತಿರಾಜ್

ಬಳ್ಳಾರಿ : ಚಿತ್ರದುರ್ಗ ಮೂಲದ ಕೋತಿರಾಜ ಖ್ಯಾತಿಯ ಜ್ಯೋತಿರಾಜ್ ಹೊಸಪೇಟೆಯಲ್ಲಿ ಸ್ಥಾಪನೆ ಆಗಿರುವ 405 ಅಡಿ ಎತ್ತರದ ಧ್ವಜಸ್ತಂಭ ಏರಿ ಸೈ ಎನಿಸಿಕೊಂಡಿದ್ದಾರೆ.

ಧ್ವಜಸ್ತಂಭ ಏರಿದ ಜ್ಯೋತಿರಾಜ್ ಅವರು ಧ್ವಜಸ್ತಂಭದಲ್ಲಿನ ನೆಟ್ಟುಗಳನ್ನು ಫಿಟ್ ಮಾಡಿದ್ದಾರೆ. ಜತೆಗೆ ಧ್ವಜಸ್ತ೦ಭದಲ್ಲಿ ಧ್ವಜ ಸ್ಥಳವನ್ನೂ ಫಿಟ್ಟಿಂಗ್ ಮಾಡಿದ್ದಾರೆ. ಈ ಮೂಲಕ 405 ಅಡಿ ಧ್ವಜಸ್ತಂಭ ಏರಿದ ಸಾಧನೆ ಮಾಡಿದ್ದಾರೆ.

ಇನ್ನು, ಧ್ವಜಸ್ತಂಭ ದಲ್ಲಿ ಹಗ್ಗ ಕೂಡ ಸುತ್ತಿಕೊಂಡಿತ್ತು. ಅದನ್ನು ಸರಿಪಡಿಸಿರುವೆ. ಮೇಲೇರಿ ಕೆಲಸ ಮಾಡಿರುವೆ. ಆಜಾದಿ ಕಾ ಅಮೃತ ಮಹೋತ್ಸವದಲ್ಲಿ ಈ ಕಾರ್ಯಮಾಡಿದ ಖುಷಿ ಇದೆ ಎಂದು ಜ್ಯೋತಿರಾಜ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES