Saturday, January 11, 2025

ಸಿದ್ದಗಂಗಾ ಮಠದಲ್ಲಿ ರಾರಾಜಿಸಿದ ಕೇಸರಿ, ಬಿಳಿ, ಹಸಿರು

ತುಮಕೂರು : ಈ ಬಾರಿಯ 75 ನೇ ಸ್ವಾತಂತ್ರ್ಯೋವದ ಅಮೃತ ಮಹೋತ್ಸವ ಆಚರಣೆ ಹಿನ್ನೆಲೆಯಲ್ಲಿ ತುಮಕೂರಿನ ಕ್ಯಾತಸಂದ್ರದಲ್ಲಿರುವ ಪ್ರಸಿದ್ದ ಪುಣ್ಯ ಕ್ಷೇತ್ರ ಸಿದ್ದಗಂಗಾ ಮಠದಲ್ಲಿ ಕೇಸರಿ, ಬಿಳಿ, ಹಸಿರು ಬಣ್ಣಗಳು ರಾರಾಜಿಸಿವೆ.

ಮಠದಲ್ಲಿ ಜೋಡಿಸಲಾದ ವಿದ್ಯುತ್ ದೀಪಾಲಂಕಾರದಲ್ಲಿ ತ್ರಿವರ್ಣ ಧ್ವಜದ ಮೂರು ಬಣ್ಣಗಳಿಂದ ಶ್ರೀ ಮಠದ ಸಂಸ್ಕೃತ ಪಾಠಶಾಲೆ ಹಾಗೂ ಶ್ರೀಗಳ ಗದ್ದುಗೆಯು ಕಂಗೊಳಿಸಿದೆ. ನಿನ್ನೇ ಸಂಜೆಯಿಂದ ಮಠದಲ್ಲಿ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣದ ವಿದ್ಯುತ್ ದೀಪಾಲಂಕಾರವನ್ನು ತುಮಕೂರಿನ ಕ್ಯಾತಸಂದ್ರದಲ್ಲಿರುವ ಸಿದ್ದಗಂಗಾ ಮಠ‌ದಲ್ಲಿ ಅಳವಡಿಸಲಾಗಿತ್ತು. ನಿನ್ನೆಯಿಂದ ಮೂರು ದಿನಗಳ‌ ಕಾಲ ಸಿದ್ದಗಂಗಾ ಮಠದಲ್ಲಿ ಕೇಸರಿ, ಬಿಳಿ, ಹಸಿರು ಬಣ್ಣಗಳು ಕಂಗೊಳಿಸಲಿದೆ. ನಿತ್ಯವು ಮಠಕ್ಕೆ ಬರುವ ಭಕ್ತರು ಹಾಗೂ ಪ್ರವಾಸಿಗರಿಗೆ ಮಠದಲ್ಲಿನ ತ್ರಿವರ್ಣ ಧ್ವಜದ ಬಣ್ಣ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆ.

RELATED ARTICLES

Related Articles

TRENDING ARTICLES