Thursday, December 19, 2024

ಪ್ರೀತಿಸಿದ ಮಹಿಳೆ ಜೊತೆ ಮಠ ಬಿಟ್ಟು ಎಸ್ಕೇಪ್‌ ಆದ ಸ್ವಾಮೀಜಿ

ರಾಮನಗರ : ಪ್ರೀತಿಸಿದ ಮಹಿಳೆ ಜೊತೆ ಮಠ ಬಿಟ್ಟು ಎಸ್ಕೇಪ್‌ ಆದ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಸೋಲೂರಿನಲ್ಲಿ ನಡೆದಿದೆ.

ಸೋಲೂರಿನ ಗದ್ದುಗೆ ಮಠದ ಶಿವಮಹಂತಸ್ವಾಮಿ ಹರೀಶ್‌ ಪರಾರಿಯಾಗಿದ್ದಾರೆ. ಕಳೆದ ಎರಡು ವರ್ಷದ ಹಿಂದೆ ಪಟ್ಟಾಭಿಷೇಕ ಸ್ವೀಕರಿಸಿದ್ದ ಸ್ವಾಮೀಜಿ. ಪತ್ರ ಬರೆದಿಟ್ಟು ಮಠ ತೊರೆದು ಮಹಿಳೆ ಜೊತೆ ಓಡಿ ಹೋದ ಸ್ವಾಮೀಜಿ ಮಠ ಬಿಟ್ಟು ನಾನು ಹೋಗ್ತಿದ್ದೇನೆ, ನನ್ನನ್ನ ಹುಡುಕುವ ಪ್ರಯತ್ನ ಮಾಡ್ಬೇಡಿ ಹೀಗಂತ ಶಿವಮಹಂತಸ್ವಾಮಿ ಪತ್ರ ಬರೆದಿಟ್ಟು ಮಠ ಬಿಟ್ಟು ನಿನ್ನೆ ರಾತ್ರಿ ಪರಾರಿಯಾಗಿದ್ದಾರೆ.

ಇನ್ನು, ಈ ಹಿಂದೆ ಕಂಬಾಳು ಮಠದಲ್ಲಿರುವಾಗ ಯುವತಿಯೊಂದಿಗೆ ಪ್ರೇಮಾಂಕುರವಾಗಿತ್ತು. ಸದ್ಯ ಅದೇ ಹುಡುಗಿ ಜೊತೆ ಸ್ವಾಮೀಜಿ ಓಡಿ ಹೋಗಿರುವ ಸಾಧ್ಯತೆ ಇದ್ದು, ಇನ್ನೂ ಆ ಯುವತಿಗೂ ಕಳೆದ ಒಂದೂವರೆ ತಿಂಗಳ ಇದೆಯಷ್ಟೇ ಮದುವೆಯಾಗಿತ್ತು. ಸದ್ಯ ವಿವಾಹಿತ ಮಹಿಳೆ ಜೊತೆ ಸ್ವಾಮೀಜಿ ಹೋಗಿರುವ ಅನುಮಾನ ಉಂಟಾಗಿದ್ದು, ಕೂದುರು ಪೋಲೀಸ್ ಠಾಣೆಯಲ್ಲಿ ಸ್ವಾಮೀಜಿ ನಾಪತ್ತೆ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES