Thursday, January 23, 2025

ವಿಶ್ವ ಚಾಂಪಿಯನ್‌ಶಿಪ್​ನಿಂದ ಸಿಂಧು ಔಟ್..!

ಇತ್ತೀಚಿಗೆ ಮುಗಿದ ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ, ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ದೇಶಕ್ಕಾಗಿ ಸ್ಮರಣೀಯ ಚಿನ್ನದ ಪದಕವನ್ನು ಗೆದ್ದು ಇತಿಹಾಸ ನಿರ್ಮಿಸಿದ್ದರು.

ಜೊತೆಗೆ ಸಿಂಧು ಈ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಮಹಿಳೆಯರ ಸಿಂಗಲ್ಸ್​ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆಯನ್ನು ಮಾಡಿದ್ದರು. ಆದರೆ ಸಿಂಧು ಈಗ ಈ ಚಿನ್ನದ ಪದಕದ ಗೆಲುವಿನ ಬಾರವನ್ನು ಹೊರಬೇಕಾಗಿದೆ. ಚಿನ್ನ ಗೆಲ್ಲುವ ಯತ್ನದಲ್ಲಿ, ಗಾಯದ ನಡುವೆಯೂ ಸಿಂಧು ಫೈನಲ್ ಆಡಿದ್ದರು. ಆದರೆ ಈಗ ಈ ಗಾಯವು ಗಂಭೀರವಾಗಿದ್ದು, ಈ ಕಾರಣದಿಂದಾಗಿ ಅವರು ಈ ತಿಂಗಳು ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ನಿಂದ ಹಿಂದೆ ಸರಿದಿದ್ದಾರೆ.

BWF ವಿಶ್ವ ಚಾಂಪಿಯನ್‌ಶಿಪ್ ಜಪಾನ್‌ನ ರಾಜಧಾನಿ ಟೋಕಿಯೊದಲ್ಲಿ ಆಗಸ್ಟ್ 22 ರಿಂದ ಆಗಸ್ಟ್ 28 ರವರೆಗೆ ನಡೆಯಲಿದ್ದು, ಮಾಜಿ ಮಹಿಳಾ ಸಿಂಗಲ್ಸ್ ಚಾಂಪಿಯನ್ ಸಿಂಧು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ.

RELATED ARTICLES

Related Articles

TRENDING ARTICLES