Thursday, January 23, 2025

ಭಯೋತ್ಪಾದಕರ ಪ್ಲಾನ್ ವಿಫಲಗೊಳಿಸಿದ ಪಂಜಾಬ್ ಪೊಲೀಸರು

ನವದೆಹಲಿ: ಅಗಸ್ಟ್​  15 ರಂದು ನಾಳೆ 75 ನೇ ಸ್ವಾತಂತ್ರ್ಯ ದಿನಾಚರಣೆಗೆ ಭಯೋತ್ಪಾದಕ ಕೃತ್ಯ ಎಸಗಲು ರೆಡಿಯಾಗಿದ್ದ ಶಂಕಿತರನ್ನ ಪ್ಲಾನ್ ನ್ನ ಪಂಜಾಬ್ ಪೊಲೀಸರು ಇಂದು ವಿಫಲಗೊಳಿಸಿದ್ದಾರೆ.

ದೆಹಲಿ ಪೊಲೀಸರ ಸಹಾಯದಿಂದ ಪಂಜಾಬ್ ಪೊಲೀಸರು ಪಾಕಿಸ್ತಾನ-ಐಎಸ್ಐ ಬೆಂಬಲಿತ ಭಯೋತ್ಪಾದಕ ಗುಂಪುವನ್ನ ಭೇದಿಸಿದ್ದಾರೆ. ಪಂಜಾಬ್ ಪೊಲೀಸರ ಅಧಿಕೃತ ಟ್ವೀಟರ್ ಪ್ರಕಾರ, ಒಟ್ಟು ನಾಲ್ಕು ಶಂಕಿತ ಭಯೋತ್ಪಾದಕರನ್ನ ಬಂಧಿಸಲಾಗಿದೆ.

3 ಹ್ಯಾಂಡ್-ಗ್ರೆನೇಡ್‌ಗಳು, 1 ಐಇಡಿ, ಎರಡು ಪಿಸ್ತೂಲ್‌ಗಳು ಮತ್ತು 40 ಲೈವ್ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆಗಸ್ಟ್ 9 ರಂದು ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ ಬಲ್ವಿಂದರ್ ಸಿಂಗ್ ಸಂಧು ಹತ್ಯೆಯ ಪ್ರಮುಖ ಆರೋಪಿಯನ್ನು ಪಂಜಾಬ್ ಪೊಲೀಸರು ಬಂಧಿಸಿದ ನಂತರ, ಸ್ವಾತಂತ್ರ್ಯ ದಿನಾಚರಣೆಯನ್ನು ಅಡ್ಡಿಪಡಿಸುವ ಮತ್ತೊಂದು ಸಂಚನ್ನು ವಿಫಲಗೊಳಿಸಿದ್ದಾರೆ.

ಆರೋಪಿಯನ್ನು ಪಂಜಾಬ್‌ನ ತರ್ನ್ ತರಣ್ ಸಾಹಿಬ್‌ನ ಗುರ್ವಿಂದರ್ ಸಿಂಗ್ ಅಲಿಯಾಸ್ ಬಾಬಾ ಅಲಿಯಾಸ್ ರಾಜ ಎಂದು ಗುರುತಿಸಲಾಗಿದೆ. ಆತನ ವಶದಿಂದ ಸ್ಫೋಟಕಗಳನ್ನು ಸಹ ವಶಪಡಿಸಿಕೊಳ್ಳಲಾಗಿದ್ದು, ಆರಂಭಿಕ ವರದಿಗಳ ಪ್ರಕಾರ, ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪಂಜಾಬ್‌ನಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕದಡಲು ಆರೋಪಿಗಳು ಸಂಚು ರೂಪಿಸಿದ್ದರು ಎಂದು ಡಿಜಿಪಿ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES