Monday, December 23, 2024

ನಾಳೆ 9 ನೇ ಬಾರಿಗೆ ಧ್ವಜಾರೋಹಣ ಮಾಡಲಿರುವ ನರೇಂದ್ರ ಮೋದಿ.!

ನವದೆಹಲಿ: ನಾಳೆ 75ನೇ ವರ್ಷದ ಸ್ವಾತಂತ್ರ್ಯೋತ್ಸವ ಸಂಭ್ರಮ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಕೆಂಪು ಕೋಟೆಯಲ್ಲಿ ಸತತ 9 ನೇ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಧ್ವಜಾರೋಹಣ ಮಾಡಿ ಭಾಷಣ ಮಾಡಲಿದ್ದಾರೆ.

ಭಾಷಣಕ್ಕೂ ಮೊದಲು ತಮ್ಮ ಅಧಿಕೃತ ನಿವಾಸದ ಮೂಲಕ ಲೋಕ ಕಲ್ಯಾಣ್ ಮಾರ್ಗನಿಂದ ನಾಳೆ ಬೆಳಗ್ಗೆ 7 ಗಂಟೆಗೆ ರಾಜ್ ಘಾಟ್ ನಲ್ಲಿರುವ ಮಹಾತ್ಮ ಗಾಂಧೀಜಿ ಸಮಾಧಿಗೆ ತೆರಳಿ ಪುಷ್ಪಾರ್ಚನೆ ಮಾಡಲಿದ್ದಾರೆ.

ಬಳಿಕ ನಾಳೆ ಬಳಿಗ್ಗೆ 7:20ಕ್ಕೆ ಕೆಂಪು ಕೋಟೆಯ ಲಾಹೋರಿ ದ್ವಾರದ ಮೂಲಕ ಕೆಂಪು ಕೋಟೆಗೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ಈ ವೇಳೆ ಪ್ರಧಾನಿಗಳನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಿಡಿಎಸ್ ಮತ್ತು ಮೂರು ರಕ್ಷಣಾ ಪಡೆಯ ಮುಖ್ಯಸ್ಥರು ಸ್ವಾಗತಿಸಲಿದ್ದಾರೆ.

ಬೆಳಿಗ್ಗೆ 7:25ಕ್ಕೆ ಲೆಫ್ಟಿನೆಂಟ್​​ ನೇತೃತ್ವದಲ್ಲಿ ಪ್ರಧಾನಿ ಮೋದಿಗೆ ಗಾರ್ಡ್​ ಆಫ್​ ಹಾನರ್ ಸಲ್ಲಿಸಲಾಗುವುದು. ನಂತರ 7:28ಕ್ಕೆ ಪ್ರಧಾನಿ ನರೇಂದ್ರ ಮೋದಿ ವೇದಿಕೆಗೆ ಆಗಮಿಸಿ, 7:29ಕ್ಕೆ ಪ್ರಧಾನಿ ನರೇಂದ್ರ ಮೋದಿಯಿಂದ ಧ್ವಜಾರೋಹಣ ಮಾಡಿ 7:30ಕ್ಕೆ ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಕಾಮನ್ ವೆಲ್ತ್ ಗೇಮ್ಸ್ ಪದಕ ವಿಜೇತರು ಮತ್ತು ಸ್ಪರ್ಧಿಗಳು ಸೇರಿದಂತೆ ಈ ಕಾರ್ಯಕ್ರಮಕ್ಕೆ ಒಟ್ಟು ಏಳು ಸಾವಿರ ಗಣ್ಯರಿಗೆ ಆಹ್ವಾನ ನೀಡಲಾಗಿದೆ.

RELATED ARTICLES

Related Articles

TRENDING ARTICLES