ಕಾರವಾರ : ದೇಶದಾದ್ಯಂತ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆ ಮಾಡಿದೆ, ದೇಶದಲ್ಲಿನ ಐತಿಹಾಸಿಕ ಸ್ಥಳಗಳು ಸ್ಮಾರಕಗಳು ಆಕರ್ಷಕವಾಗಿ ಕಂಗೊಳಿಸುತ್ತಿವೆ. ಉತ್ತರಕನ್ನಡ ಜಿಲ್ಲೆಯ ಕುಮಟ ತಾಲೂಕಿನ ಐತಿಹಾಸಿಕ ಮಿರ್ಜಾನ ಕೋಟೆಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು ಕೋಟೆ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.
ಸ್ವಾತಂತ್ರ್ಯ ಹೋರಾಟದಲ್ಲಿ ಉತ್ತರಕನ್ನಡ ಕನ್ನಡ ಜಿಲ್ಲೆಯ ಪಾತ್ರಕೂಡ ಬಹುದೊಡ್ಡದು, ಬ್ರಿಟಿಷರನ್ನ ದೇಶದಿಂದ ತೋಲಗಿಸಲು ಜಿಲ್ಲೆಯಲ್ಲಿಯೂ ಸಹ ಸಾಕಷ್ಟು ಹೋರಾಟಗಳು ನಡೆದಿದೆ.ಉಪ್ಪಿನ ಸತ್ಯಾಗ್ರಹ ಸೇರಿದಂತೆ ಅನೇಕ ಹೋರಾಟಗಳು ಜಿಲ್ಲೆಯಲ್ಲಿ ನಡೆದಿದೆ. ದೇಶದ ಹಿರಿಮೆ,ಗರಿಮೆ, ಎತ್ತಿಹಿಡಿಯುವ ಕೋಟೆ, ಐಸಿಹಾಸಿಕ ಸ್ಥಳಗಳು ಇದೀಗೂ ಕೆಲವು ಕಡೆಗಳಲ್ಲಿ ನೋಡ ಸಿಗುತ್ತಿದೆ. ರಾಜ್ಯದಲ್ಲಿರುವ ಕೆಲವೇ ಕೆಲವು ಕೋಟೆಗಳಲ್ಲಿ ಮಿರ್ಜಾನ ಕೋಟೆಕೂಡ ಒಂದು, ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಉತ್ತರಕನ್ನಡ ಜಿಲ್ಲೆಯ ಮಿರ್ಜಾನ ಕೋಟೆ ಇದೀಗ ತ್ರೀವರ್ಣ ವಿದ್ಯುತ್ ದೀಪದಿಂದ ಝಗಮಗಿಸುತ್ತಿದೆ. ತ್ರಿವರ್ಣದ ಎಫೆಕ್ಟ್ ಬರುವ ರೀತಿಯಲ್ಲಿ ಕೋಟೆಗೆ ವಿಶೇಷ ವಿದ್ಯುತ್ ದೀಪಾಲಕಾರ ಮಾಡಲಾಗಿದೆ. ಇದನ್ನ ನೋಡೋದಕ್ಕೆ ಅಂತಾನೆ ಸಾವಿರಾರು ಸಂಖ್ಯೆಯಲ್ಲಿ ಜನರು ನಿತ್ಯವು ಇಲ್ಲಿಗೆ ಹರಿದು ಬರತ್ತಿದ್ದಾರೆ.
75ನೇ ಸ್ವಾತಂತ್ರ್ಯೋತ್ಸವನ್ನ ವಿಜೃಂಭಣೆಯಿಂದ ಆಚರಿಸಬೇಕು ಎಂದು ಕರೆ ನೀಡಿರುವ ಪ್ರಧಾನಿ ಮೋದಿ ಹರ್ ಘರ ತೀರಂಗಾ ಎಂದು ಘೋಷಣೆ ಮಾಡಿದ್ದು, ಈ ಹಿನ್ನಲೆಯಲ್ಲಿ ಐತಿಹಾಸಿಕ ಮಿರ್ಜಾನ ಕೋಟೆ ಇದೀಗ ತ್ರಿವರ್ಣ ಬಣ್ಣಗಳಿಂದ ಕಂಗೊಳಿಸ್ತಾ ಇದೆ.
ಅಮೃತ ಮಹೋತ್ಸವ ಹಿನ್ನಲೆಯಲ್ಲಿ ಉತ್ತಮವಾಗಿ ಜಿಲ್ಲೆಯ ಮಿರ್ಜಾನ ಕೋಟೆ ಕಂಗೊಳಿಸುತ್ತಾ ಇದ್ದು, ಮುಂದಿನ ದಿನದಲ್ಲಿ ಮಿರ್ಜಾನ ಕೋಟೆಯ ಇತಿಹಾಸದ ಬಗ್ಗೆ ಇಂದಿನ ಯುವ ಪಿಳಿಗೆಗೆ ಕೋಟೆಯ ಕುರಿತಾಗಿ ಪರಿಚಯಿಸುವ ಕಾರ್ಯವಾಗಬೇಕಿದೆ