Monday, December 23, 2024

ಮಾನ್ಸೂನ್ ರಾಗ ಪೋಸ್ಟ್​ಪೋನ್​ಗೆ ಕಾರಣವೇನು..?

ಮುಂದಿನ ವಾರ ತೆರೆಗಪ್ಪಳಿಸೋಕೆ ಸಜ್ಜಾಗಿದ್ದ ಮಾನ್ಸೂನ್ ರಾಗದ ರಿಲೀಸ್ ಡೇಟ್ ಪೋಸ್ಟ್​ಪೋನ್ ಆಗಿದೆ. ಅರೇ ಡಾಲಿ- ರಚಿತಾ ರಾಮ್​ರಂತಹ ಬಿಗ್ ಸ್ಟಾರ್ಸ್​ ಸಿನಿಮಾಗೇ ರಿಲೀಸ್ ತೊಡಕಾ ಅಂತ ಹುಬ್ಬೇರಿಸಬೇಡಿ. ಇಷ್ಟಕ್ಕೂ ಸ್ಯಾಂಪಲ್ಸ್​ನಿಂದ ಧೂಳೆಬ್ಬಿಸಿದ್ದ ಮಾನ್ಸೂನ್ ರಾಗಕ್ಕೆ ಏನಾಗಿದೆ ಅಂತೀರಾ..? ನೀವೇ ಓದಿ.

  • ಆಗಸ್ಟ್ 19ಕ್ಕೆ ಬರ್ತಿಲ್ಲ ‘ಮಾನ್ಸೂನ್ ರಾಗ’ ದೃಶ್ಯಕಾವ್ಯ..!
  • ಏನಾಯ್ತು ಡಾಲಿ ಧನು – ರಚಿತಾ ರಾಮ್ ಸಿನಿಮಾಗೆ..?
  • ನಿರ್ಮಾಪಕ ಎ.ಆರ್ ವಿಖ್ಯಾತ್ ಹೇಳಿದ್ದೇನು ಗೊತ್ತಾ..?

ಕರುನಾಡಿನಾದ್ಯಂತ ನೈರುತ್ಯ ಮಾನ್ಸೂನ್​ ಬಿಡದೇ ಸುರೀತಾ ರೈತರ ನಿದ್ದೆಗೆಡಿಸಿದರೆ, ಇತ್ತ ಸ್ಯಾಂಡಲ್​ವುಡ್​​​ನ ಬಹುನಿರೀಕ್ಷಿತ ಸಿನಿಮಾ ಮಾನ್ಸೂನ್​ ರಾಗದ ಎಫೆಕ್ಟ್​​​ ಸಿನಿಪ್ರೇಮಿಗಳ  ನಿದ್ದೆಗೆಡಿಸಿತ್ತು. ಡಾಲಿ ಧನಂಜಯ ಹಾಗೂ ಡಿಂಪಲ್​ ಕ್ವೀನ್ ರಚ್ಚು​ ಕಾಂಬಿನೇಷನ್​​​ ಸಿಲ್ವರ್​​ ಮೇಲೆ ಕಮಾಲ್​​ ಮಾಡಲಿದ್ದಾರೆ ಅನ್ನೋ ಸುದ್ದಿ ಗಲ್ಲಿಯಿಂದ ದಿಲ್ಲಿವರೆಗೂ ಹಬ್ಬಿತ್ತು. ಯೆಸ್​​.. ಕಟ್ಟೆ ಮುಂಬೈಯಲ್ಲಿ ಗುಡುಗ್ತಾ ಇದ್ದಾನೆ ಅಂತಾ ಬೆಚ್ಚಿಬೀಳಿಸಿದ್ದ ಮಾನ್ಸೂನ್​ ಚಿತ್ರತಂಡ ಸಿನಿಮಾದ ಮೇಲಿನ ಕುತೂಹಲವನ್ನು ದುಪ್ಪಟ್ಟು ಮಾಡಿತ್ತು. ಆದ್ರೆ, ಇದೀಗ ಚಿತ್ರತಂಡದಿಂದ ಶಾಕಿಂಗ್​ ನ್ಯೂಸ್​ ಹೊರಬಿದ್ದಿದ್ದು ಫ್ಯಾನ್ಸ್​ಗೆ ಸಿಕ್ಕಾಪಟ್ಟೆ ನಿರಾಶೆಯಾಗಿದೆ.

ರೆಟ್ರೋ ಸ್ಟೈಲ್​​ನಲ್ಲಿ ಮಾನ್ಸೂನ್​ ರಾಗ ಸಿನಿಮಾ ಆಗಸ್ಟ್​ 19ಕ್ಕೆ ತೆರೆಗೆ ಬರಲಿದೆ ಅನ್ನೋ ಸುದ್ದಿ ಪ್ರೇಕ್ಷಕರ ದಿಲ್​​ ಖುಷ್​ ಮಾಡಿತ್ತು. ಇನ್ನೇನು ಡಾಲಿ ಅಣ್ಣನ ಕಟೌಟ್​ಗೆ ಹಾಲಿನ ಅಭಿಷೇಕ ಮಾಡಿ, ಕಟೌಟ್​​ಗಳಿಗೆ ಹೂವಿನ ಅಲಂಕಾರ ಮಾಡಿ ಅದ್ಧೂರಿಯಾಗಿ ವೆಲ್ಕಮ್​ ಮಾಡಬೇಕು ಅಂದುಕೊಂಡಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಸಿನಿಮಾ ರಿಲೀಸ್​ ಡೇಟ್​ ಅನೌನ್ಸ್​ ಮಾಡಿದ್ದನ್ನು ಮತ್ತೆ ವಾಪಾಸ್​ ತೆಗೆದುಕೊಂಡಿದೆ. ಟೆಕ್ನಿಕಲ್​ ಸಮಸ್ಯೆಗಳಿಂದ ಸಿನಿಮಾ ರಿಲೀಸ್​ ಕೊಂಚ ಲೇಟ್​ ಆಗಲಿದೆಯಂತೆ.

ರಚಿತಾ ರಾಮ್​ ಗ್ಲಾಮರಸ್​ ರೋಲ್​ ಮೂಲಕ ಹಾಟ್​ ಹಾಟ್​​ ಆಗಿ ಕಾಣಿಸಿದ್ದು, ಟ್ರೈಲರ್​ಗೆ ಸಿನಿಪ್ರಿಯರು ಥ್ರಿಲ್​ ಆಗಿದ್ದಾರೆ. ಮ್ಯೂಸಿಕಲ್​​ ಹಿಟ್​​​ ಸಿನಿಮಾವಾಗಿರೋದ್ರಿಂದ ಎಲ್ಲಾ ಹಾಡುಗಳು ಸಿಕ್ಕಾಪಟ್ಟೆ ಹಿಟ್ ಆಗಿವೆ. ಇದ್ರ ಜತೆಯಲ್ಲಿ ಡಾಲಿ ಮಾಸ್​​ ಅಂಡ್​ ರೊಮ್ಯಾಂಟಿಕ್​ ಶೇಡ್​ಗಳಲ್ಲಿ ಕಾಣಿಸಿಕೊಂಡಿದ್ದು ವಿಭಿನ್ನ ಕಥೆ ಹೇಳೋ ತವಕದಲ್ಲಿದ್ದಾರೆ. ಆದ್ರೆ, ಇದೀಗ ಸಿನಿಮಾದ ಪೋಸ್ಟ್​ ಪ್ರೊಡಕ್ಷನ್​​ ಕೆಲಸಗಳಲ್ಲಿ ತಾಂತ್ರಿಕ ತೊಂದರೆಗಳಿಂದ ರಿಲೀಸ್​ ಡೇಟ್​ ಪೋಸ್ಟ್​ ಪೋನ್​ ಆಗ್ತಿದೆ. ಇದ್ರಿಂದ ಇಷ್ಟು ದಿನಗಳಿಂದ ಕರ್ನಾಟಕದಾದ್ಯಂತ ಕಟೌಟ್​ ಹಾಕಿ ಬಿಗ್​ ಪ್ಲಾನ್​ ಮಾಡಿಕೊಂಡಿದ್ದ ಡಾಲಿ ಫ್ಯಾನ್ಸ್​​​ಗೆ ಸಹಜವಾಗಿ ನಿರಾಶೆಯಾಗಿದೆ.

ಲೈಂಗಿಕ ಕಾರ್ಯಕರ್ತೆಯಾಗಿ ರಚ್ಚು ಮಿಂಚಿದ್ರೆ, ಆಟಿಟ್ಯೂಡ್​ ಕ್ವೀನ್​ ಆಗಿ ಯಶಾ ಶಿವಕುಮಾರ್​ ಎಲ್ಲರ ಹೃದಯ ಗೆಲ್ಲಲಿದ್ದಾರೆ. ಪುಷ್ಪಕ ವಿಮಾನ ಸಿನಿಮಾ ನಿರ್ದೇಶನ ಮಾಡಿದ್ದ ಎಸ್​​. ರವೀಂದ್ರನಾಥ್​ ನಿರ್ದೇಶನದಲ್ಲಿ ಮ್ಯಾಜಿಕ್​ ಮಾಡೋಕೆ ಸಜ್ಜಾಗಿದ್ದ ಮಾನ್ಸೂನ್​ ರಾಗ ಸ್ಯಾಡ್​ ನ್ಯೂಸ್​ನಿಂದ ಕಟ್ಟೆ ಅಬ್ಬರಿಸೋದು ಸ್ವಲ್ಪ ತಡವಾಗಲಿದೆ.

ಇತ್ತೀಚೆಗೆ ಮಾನ್ಸೂನ್​ ರಾಗ ತಂಡ ಪ್ರೊಮೋಷನಲ್​ ಸಾಂಗ್​ ಕೂಡ ಶೂಟ್​ ಮಾಡಿತ್ತು. ಇದ್ರಲ್ಲಿ ಸ್ಯಾರಿ ತೊಟ್ಟು ರಚ್ಚು ಡ್ಯಾನ್ಸ್​ ಮಾಡಿದ್ರೆ, ರಚ್ಚು ಕೆನ್ನೆ ಹಿಡಿದು ಡಾಲಿ ಧನಂಜಯ ಮುದ್ದು ಮಾಡ್ತಾ ಸ್ಟೆಪ್ ಹಾಕಿದ್ರು. ಇದೀಗ ಎಲ್ಲವೂ ಉಲ್ಟಾ ಪಲ್ಟಾ ಆಗಿದ್ದು, ಸಿನಿಮಾ ರಿಲೀಸ್​ ಪೋಸ್ಟ್​​​ಪೋನ್​ ಆಗಿದೆ.

ಅಂತೂ ಆಗಸ್ಟ್ 19 ಕ್ಕೆ ಮಾನ್ಸುನ್​ ರಾಗ ಸಿನಿಮಾ ಬರ್ತಿಲ್ಲ. ಮಾರ್ಫಿಕ್ ಎಂಬ ತಂತ್ರಜ್ಞಾನ ಅಳವಡಿಸಿ ಕೊಳ್ಳುವ ಕಾರಣ ರಿಲೀಸ್ ಡೇಟ್ ಸದ್ಯ ಮುಂದೂಡಲಾಗಿದೆಯಂತೆ.ಈ ತಂತ್ರಜ್ಞಾನ ನೋಢುಗರಿಗೆ ಹೊಸ ಫೀಲ್​ ಕೊಡಲಿದೆಯಂತೆ. ಇದ್ರಿಂದ ಪ್ರೇಕ್ಷಕರಿಗೆ 3ಡಿ ವಿಷನ್​ ಫೀಲ್​ ಆಗಲಿದೆ. ಇನ್ನೂ ಈ ಟೆಕ್ನಾಲಜಿಯನ್ನು ಆರ್​ಆರ್​ಆರ್​ ಚಿತ್ರತಂಡ ಅಳವಡಿಸಿಕೊಂಡಿತ್ತು. ಇದ್ರ ಜತೆಯಲ್ಲಿ ರಿರೆಕಾರ್ಡಿಂಗ್​​ ಫೈನಲ್​ ಆಗದೇ ಇರೋ ಕಾರಣ ಸಿನಿಮಾ ರಿಲೀಸ್​ ಡೇಟ್​ ಪೋಸ್ಟ್​​​ ಪೋನ್​ ಆಗಿದೆ. ಎಲ್ಲಾ ಕೆಲಸ ಕಂಪ್ಲೀಟ್ ಮಾಡಿಕೊಂಡು ಶೀಘ್ರದಲ್ಲೇ ಹೊಸ ಡೇಟ್ ಅನೌನ್ಸ್ ಮಾಡಲಿದೆ ಚಿತ್ರತಂಡ.

ವಿ. ಆರ್​ ವಿಖ್ಯಾತ್​​​ ನಿರ್ಮಾಣ, ಎಸ್​.ರವೀಂದ್ರನಾಥ್​ ನಿರ್ದೇಶನದಲ್ಲಿ ಸಿನಿಮಾ ಮೇಕಿಂಗ್​​ ಅದ್ಭುತವಾಗಿದೆಯಂತೆ. ಎಸ್​. ಕೆ ರಾವ್​ ಕ್ಯಾಮೆರಾ ಕೈ ಚಳಕ ಕಣ್ಣಿಗೆ ಒತ್ತಲಿದೆ. ಅನೂಪ್​ ಸೀಳಿನ್​ ಮ್ಯೂಸಿಕ್ ಕಂಪೋಸ್​ ಹೀಗಾಗ್ಲೇ ಸಿಕ್ಸರ್​ ಬಾರಿಸಿದೆ. ಎನಿವೇ ಆಗಸ್ಟ್​​ 19ಕ್ಕೆ ತೆರೆಗೆ ಬರಲಿರೋ ಸಿನಿಮಾ ರಿಲೀಸ್​ ಡೇಟ್​​ ಮುಹೂರ್ತ ಯಾವಾಗ ಕೂಡಿ ಬರಲಿದೆ ಅನ್ನೋದನ್ನು ಕಾದು ನೋಡಬೇಕಾಗಿದೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯುರೋ, ಪವರ್ ಟಿವಿ

RELATED ARTICLES

Related Articles

TRENDING ARTICLES