Sunday, January 19, 2025

ಆಗಸ್ಟ್ 15ಕ್ಕೆ ‘ಶಿವನೆದೆಯಲಿ ಲೀಲಾಳ ರಸಮಂಜರಿ’

ಹೊಂಬಾಳೆ ಫಿಲಂಸ್​ನಲ್ಲಿ ರಿಷಬ್ ಶೆಟ್ರ ಸಿಂಗಾರ ಸಿರಿ

ಕಾಂತಾರ ಚಿತ್ರದ ಆಲ್ಬಮ್​ನಿಂದ ಸಿಂಗಾರ ಸಿರಿಯೆ ಅನ್ನೋ ಚೊಚ್ಚಲ ಹಾಡು ಅನಾವರಣಗೊಳ್ಳೋ ದಿನಾಂಕ ನಿಗದಿ ಆಗಿದೆ. ಪ್ರತಿಷ್ಠಿತ ಹೊಂಬಾಳೆ ಫಿಲಂಸ್ ಬ್ಯಾನರ್​ನಡಿ ತಯಾರಾಗಿರೋ ಕಾಂತಾರ ಚಿತ್ರ ಕನ್ನಡ ಚಿತ್ರರಂಗದ ಮಟ್ಟಿಗೆ ಮತ್ತೊಂದು ವಿನೂತನ ಪ್ರಯತ್ನವಾಗಲಿದ್ದು, ಟೀಸರ್​ನಿಂದ ಎಲ್ಲರನ್ನ ಮಂತ್ರಮುಗ್ಧಗೊಳಿಸಿತ್ತು. ಇದೀಗ ಶಿವನೆದೆಯಲ್ಲಿ ಲೀಲಾಳ ರಸಮಂಜರಿ ಕಾರ್ಯಕ್ರಮ ಶುರು ಮಾಡೋಕೆ ಕಾತರಗೊಂಡಿದೆ ಟೀಂ.

ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರೋ ಚಿತ್ರ ಇದಾಗಿದ್ದು, ಪ್ರಕೃತಿ ಹಾಗೂ ಮನುಷ್ಯನ ನಡುವಿನ ಸಂಬಂಧವನ್ನು ತೆರೆಗೆ ತರೋ ಕಥಾನಕ ಇದಾಗಲಿದೆ. ಕಿಶೋರ್, ಅಚ್ಯುತ್ ಕುಮಾರ್ ಕೂಡ ಮುಖ್ಯ ಭೂಮಿಕೆಯಲ್ಲಿದ್ದು, ಇದೇ ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ವಿಶೇಷ ಆಲ್ಬಮ್​ನ ಮೊದಲ ಸಾಂಗ್ ಲಾಂಚ್ ಆಗಲಿದೆ.

RELATED ARTICLES

Related Articles

TRENDING ARTICLES