Wednesday, January 8, 2025

ಜಂಬೂ ಸವಾರಿ ಮೆರವಣಿಗೆ: ನಾಲ್ಕೂವರೆ ಕಿಲೋಮೀಟರ್ ಸಾಗಿದ ತಾಲೀಮು

ಮೈಸೂರು : ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗಾಗಿ ಗಜಪಡೆಯ ತಾಲೀಮು ಇಂದಿನಿಂದ ಆರಂಭವಾಗಿದೆ.

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಮೆರವಣಿಗೆಗೆ ತಾಲೀಮು ಮೂಲಕ ಗಜಪಡೆಯನ್ನು ಸನ್ನದ್ಧಗೊಳಿಸುವ ಕಾರ್ಯ ಇಂದಿನಿಂದ ಆರಂಭವಾಯಿತು. ಮೈಸೂರು ಅರಮನೆಯಲ್ಲಿ ಇಂದು ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ತಾಲೀಮಿಗೆ ಚಾಲನೆ ನೀಡಲಾಯಿತು.

ಮೈಸೂರು ಅರಮನೆಯಿಂದ ಆರಂಭವಾದ ತಾಲೀಮು ಚಾಮರಾಜ ಒಡೆಯರ್ ಸರ್ಕಲ್, ಆಲ್ಬರ್ಟ್ ವಿಕ್ಟರ್ ರೋಡ್, ಕೆ.ಆರ್.ಸರ್ಕಲ್,ಬಂಬೂ ಬಜಾರ್, ಹೈವೆ ಸರ್ಕಲ್ ಮೂಲಕ ಬನ್ನಿಮಂಟಪ ತಲುಪಿತು. ಹೀಗೆ ನಾಲ್ಕೂವರೆ ಕಿಲೋಮೀಟರ್ ಸಾಗಿದ ಗಜಪಡೆ ಮತ್ತೆ ಮೈಸೂರು ಅರಮನೆಯ ಆನೆ ಶಿಬಿರ ಸೇರಿತು.

ಆನೆಗಳು ಸಾಗುವ ರಸ್ತೆಯನ್ನು ಒನ್ ವೇ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಆಗಿತ್ತು. ಆನೆಗಳು ಸಾಗುವ ದೃಶ್ಯವನ್ನು ರಸ್ತೆಯ ಇಕ್ಕೆಲಗಳಲ್ಲಿ ನಿಂತ ಜನರು ಕುತೂಹಲದಿಂದ ವೀಕ್ಷಿಸಿದರು. ಕೊರೊನಾ ಹಿನ್ನೆಲೆ ಕಳೆದ ಎರಡು ವರ್ಷಗಳ ಕಾಲ ಸರಳ ದಸರಾ ಆಚರಣೆ ಕಾರಣ ಗಜಪಡೆಗೆ ಅರಮನೆ ಒಳಗೆ ತಾಲೀಮು ನಡೆಸಲಾಗಿತ್ತು. ಆದರೆ ಈ ಬಾರಿ ಅದ್ದೂರಿ ದಸರಾ ಹಿನ್ನೆಲೆ ಗಜಪಡೆ ತಾಲೀಮು ಬನ್ನಿಮಂಟಪದ ತನಕ ಸಾಗುತ್ತಿದೆ.

RELATED ARTICLES

Related Articles

TRENDING ARTICLES