Sunday, December 22, 2024

75 ನೇ ‘ಅಮೃತೋತ್ಸವದ ನಡಿಗೆ’ ಅಭಿಯಾನ: ಪವರ್ ಟಿವಿಗೆ ಧನ್ಯವಾದ ಹೇಳಿದ ಹೆಚ್​ಡಿಕೆ.!

ಬೆಂಗಳೂರು: ದೇಶದಲ್ಲೆಡೆ ಅಗಸ್ಟ್​ 15 ರಂದು ಅಮೃತ ಮಹೋತ್ಸವ ಹಿನ್ನಲೆಯಲ್ಲಿ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರಿಗೆ ಪವರ್ ಟಿವಿ ವಾಹಿನಿಯ ಸಂಪಾದಕೀಯ ಸಲಹೆಗಾರರಾದ ರವೀಂದ್ರ ರೇಷ್ಮೆ ಹಾಗೂ ಹಿರಿಯ ನಿರೂಪಕಿ ಸಿಂಧೂರ ಅವರು ರಾಷ್ಟ್ರ ಧ್ವಜವನ್ನು ಸಾಂಕೇತಿಕವಾಗಿ ನೀಡಿ ಗೌರವಿಸಲಾಯಿತು.

ಈ ಕುರಿತು ಟ್ವೀಟ್ ಮಾಡಿದ ಹೆಚ್​ಡಿಕೆ, ಅಮೃತ ಮಹೋತ್ಸವದ ಅಂಗವಾಗಿ ತ್ರಿವರ್ಣ ಧ್ವಜ ನೀಡಿರುವುದು ಅತ್ಯಂತ ಅರ್ಥಪೂರ್ಣ ಹಾಗೂ ವಿಶೇಷವಾಗಿದೆ. ಹೆಮ್ಮೆಯ ತಿರಂಗವನ್ನು ನೀಡಿದ ಪವರ್ ಟಿವಿ ವಾಹಿನಿಗೆ ಧನ್ಯವಾದ ಅರ್ಪಿಸಿದ್ದಾರೆ.

75 ‘ಸ್ವತಂತ್ರ ಜನತಂತ್ರ’ ಕಾರ್ಯಕ್ರಮದ ಹೆಸರಿನಲ್ಲಿ ಪವರ್ ಟೀವಿ ವಾಹಿನಿಯು ನಾಡಿಗೆ ಹಾಗೂ ದೇಶದ ಪ್ರಗತಿಗೆ ಕೊಡುಗೆ ನೀಡಿರುವ ಜನನಾಯಕರನ್ನು ಗುರುತಿಸಿ ರಾಷ್ಟ್ರಧ್ವಜದ ಮೂಲಕ ಗೌರವಿಸುತ್ತಿದೆ.

RELATED ARTICLES

Related Articles

TRENDING ARTICLES