Thursday, December 19, 2024

ಮದ್ಯದ ಅಮಲಿನಲ್ಲಿ ಕ್ಷಣಾರ್ಧದಲ್ಲಿ ವಾಹನಗಳನ್ನ ಎಸ್ಕೇಪ್ ಮಾಡ್ತಿದ್ದ ಆರೋಪಿ ಅಂದರ್​

ಬೆಂಗಳೂರು: ಬೆಂಗಳೂರಲ್ಲಿ ಕುಡಿದ ಮತ್ತಿನಲ್ಲಿ ಬೈಕು, ಕಾರು, ಆಟೋ ಸೇರಿದಂತೆ ಹಲವಾರು ಬಗೆಯ ವಾಹನಗಳನ್ನು ಕ್ಷಣಮಾತ್ರದಲ್ಲಿ ಕದ್ದು ಪರಾರಿಯಾಗುತ್ತಿದ್ದವರನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.

ನದೀಂ ಅಹಮದ್ ಹಾಗೂ ಗುಲಾಂ ಹುಸೇನ್ ಬಂಧಿತ ಆರೋಪಿಗಳಾಗಿದ್ದು, ಕದ್ದ ವಾಹನದ ನಂಬರ್ ಪ್ಲೇಟ್ ಬದಲಿಸುತ್ತಿದ್ದ ಆರೋಪಿಗಳು ಸಿಕ್ಕಷ್ಟು ಹಣಕ್ಕೆ ಮಾರುತ್ತಿದ್ದರು. ಮದ್ಯದ ನಶೆಯಲ್ಲಿ ಯಾವ ವಾಹನ ಕಂಡರೂ ಕ್ಷಣಮಾತ್ರದಲ್ಲಿ ಎಗರಿಸುತ್ತಿದ್ದರು ಈ ಆರೋಪಿಗಳು.

ನಗರದ ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ, ಹುಳಿಮಾವು, ಚಂದ್ರಾಲೇಔಟ್ ವ್ಯಾಪ್ತಿಯಲ್ಲಿ ಇವರು ಕಳ್ಳತನ ಮಾಡಿದ್ದರು. ಬಂಧಿತರಿಂದ 2 ಆಟೋ, ಒಂದು ಕಾರು ಮತ್ತು 6 ಬೈಕ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಹಿಂದೊಮ್ಮೆ ಇವರು ಜೈಲಿಗೆ ಹೋಗಿ ಬಂದಿದ್ದರು. ಆದರೆ ಹಿಂದುರುಗಿದ ನಂತರ ಮತ್ತೆ ಅದೇ ಕೃತ್ಯ ಮುಂದುವರೆಸಿದ್ದರು. ಮತ್ತೋರ್ವ ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

RELATED ARTICLES

Related Articles

TRENDING ARTICLES