ವಿಜಯಪುರ: ಅಗಸ್ಟ್ 15 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಜನ ಸ್ವಯಂ ಪ್ರೇರಣೆಯಿಂದ ಭಾಗಿಯಾಗುತ್ತಿದ್ದಾರೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಶ್ವಾಸ ವ್ಯಕ್ತಪಡಿಸಿದರು.
ಸಿಎಂ ಬಸವರಾಜ್ ಬೊಮ್ಮಾಯಿ ಅವರ ಜಾಹೀರಾತುವಿನಲ್ಲಿ ನೆಹರು ಬಿಟ್ಟಿರುವ ಕುರಿತು ಮಾತನಾಡಿ, ಸ್ವಾತಂತ್ರ್ಯ ಸಂದರ್ಭದಲ್ಲಿ ಯಾವ ಯಾವ ಮಹನಿಯರು ದೇಶಕ್ಕಾಗಿ ಹೋರಾಡಿದ್ದಾರೆ ಎಂದು ಅನ್ನೋದು ಗೊತ್ತಾಗುತ್ತದೆ. ನೆಹರು ಸ್ವಾತಂತ್ರ್ಯ ಹೋರಾಟ ಮಾಡಿದ್ದಾರಾ ಎಂದು ಯತ್ನಾಳ್ ಪ್ರಶ್ನಿಸಿದ್ದಾರೆ.
ಮಹಾತ್ಮ ಗಾಂಧಿ ಅವರು ಪುಣ್ಯದಿಂದ ನೆಹರು ಪ್ರಧಾನಿಯಾದರು. ನೆಹರು ಪ್ರಧಾನಿಯಾಗಿದನ್ನು ಬಿಟ್ಟರೆ ಅವರ ಕೊಡುಗೆ ಏನೂ ಇಲ್ಲ. ಗಾಂಧಿಜಿ ಏನು ಹೇಳಿದ್ರು..? ಸ್ವಾತಂತ್ರ್ಯ ಬಂದ ಮೇಲೆ ಕಾಂಗ್ರೆಸ್ ವಿಸರ್ಜನೆ ಮಾಡುವಂತೆ ಹೇಳಿದ್ದರು. ಇಡೀ ದೇಶಕ್ಕೆ ಸ್ವಾತಂತ್ರ್ಯ ನಾವು ಕೊಡಿಸಿದ್ದೇವಿ ಎಂದು ಕಾಂಗ್ರೆಸ್ ದೇಶವನ್ನು ಲೂಟಿ ಮಾಡಿದೆ. ಕಾಂಗ್ರೆಸ್ ವಿಸರ್ಜನೆ ಮಾಡುವಂತೆ ಗಾಂಧಿಜಿ ಹೇಳಿದ್ದರು, ಮೊದಲು ಅದನ್ನು ಪಾಲಿಸಲಿ. ಕಾಂಗ್ರೆಸ್ ನಾಯಕರಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟಾಂಗ್ ನೀಡಿದರು.
ಪ್ರಿಯಾಂಕ ಖರ್ಗೆ ಮಂಚ-ಲಂಚದ ಹೇಳಿಕೆ ವಿಚಾರ ಮಾತನಾಡಿ, ಪಾಪ ಖರ್ಗೆ ಹಾಗೇ ಮಾತನಾಡಬಾರದು, ಅವರೇನು ಸಾಚಾ ಇದ್ದಾರಾ.? ಕಾಂಗ್ರೆಸ್ ನವರು ಸಾಚಾ ಇದ್ದಾರಾ.? ಅವರದ್ದು ಬಹಳ ಇವೆ, ನಾಲಿಗೆ ಬಿಗಿ ಹಿಡಿದು ಮಾತನಾಡಲಿ. ಮುಂದೆ ಖರ್ಗೆ ಅವರಿಗೆ ಭವಿಷ್ಯ ಇದೆ, ಈ ರೀತಿ ಮಾತನಾಡಿದರೆ ಅವರದ್ದು ಹೊರಗೆ ಬರುತ್ತೆ ಎಂದು ಯತ್ನಾಳ್ ಹೇಳಿದ್ದಾರೆ.