Thursday, January 23, 2025

ಧವಸ ಧಾನ್ಯಗಳಿಂದ ಆಕರ್ಷಕ ತ್ರಿವರ್ಣ ಧ್ವಜ ರಚಿಸಿದ ಕಲಾವಿದ

ಮಂಗಳೂರು : ಜಿಲ್ಲೆಯ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ 75ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಅತ್ಯಂತ ವಿಶಿಷ್ಟವಾಗಿ ತ್ರಿವರ್ಣ ಧ್ವಜವನ್ನು ರಚಿಸಲಾಗಿದೆ.

ದೇವಸ್ಥಾನದ ಮುಂದಿನ ಅಂಗಣದಲ್ಲಿ ಧವಸ ಧಾನ್ಯಗಳನ್ನಷ್ಟೇ ಬಳಸಿಕೊಂಡು ಆಕರ್ಷಕ ತ್ರಿವರ್ಣ ರಚಿಸಿದ್ದು ನೋಡುಗರ ಗಮನ ಸೆಳೆದಿದೆ. ಕಲಾವಿದ ಮತ್ತು ಛಾಯಾಗ್ರಾಹಕ ಪುನಿಕ್ ಶೆಟ್ಟಿ ನೇತೃತ್ವದಲ್ಲಿ ಕ್ಷೇತ್ರದ ಸಿಬ್ಬಂದಿ ಮತ್ತು ಗುರು ಬೆಳದಿಂಗಳು ಸಂಸ್ಥೆಯ ಸದಸ್ಯರು ಸೇರಿ 18 ಗಂಟೆಗಳ ಪರಿಶ್ರಮದಿಂದ ಆಕರ್ಷಕ ತ್ರಿವರ್ಣ ರಚಿಸಿದ್ದಾರೆ.

ಯಾವುದೇ ಬಣ್ಣಗಳನ್ನು ಬಳಸದೆ ಕೇವಲ ಧಾನ್ಯ, ತರಕಾರಿ ಮತ್ತು ಹೂಗಳನ್ನಷ್ಟೇ ಬಳಸ್ಕೊಂಡು ತ್ರಿವರ್ಣದ ಆಕರ್ಷಣೆ ಮೂಡಿಸಿದ್ದು ವಿಶೇಷ. ಒಟ್ಟು 900 ಕೆ.ಜಿ ಧಾನ್ಯ, 100 ಕೆ.ಜಿ ತರಕಾರಿ, 38 ಅಡಿ ವೃತ್ತ, 54 ಕಲಶ, 108 ಬಾಳೆಎಲೆ, 500 ವೀಳ್ಯದೆಲೆ, 100 ಕೆ.ಜಿ ಬೆಳ್ತಿಗೆ ಅಕ್ಕಿಯನ್ನು ಬಳಸಿ ಈ ತ್ರಿವರ್ಣ ಧ್ವಜ ತಯಾರಿಸಲಾಗಿದೆ.

38 ಅಡಿ ವ್ಯಾಸದ ವೃತ್ತದಲ್ಲಿ ಹೆಸರು ಬೇಳೆಯನ್ನು ಹಸಿರು ಬಣ್ಣಕ್ಕೆ ಬಳಸಿದರೆ, ಬಿಳಿ ಬಣ್ಣವನ್ನು ಸೂಚಿಸಲು ಸಾಗುವನ್ನು ಬಳಸಲಾಗಿದೆ. ಕೇಸರಿ ಬಣ್ಣ ಸೂಚಿಸಲು ಕಡ್ಲೆ ಬೇಳೆಯನ್ನು ಉಪಯೋಗಿಸಲಾಗಿದೆ. ಅದರ ಸುತ್ತಲೂ ಬಾಳೆ ಎಲೆಯಲ್ಲಿ ಕಲಶಗಳನ್ನಿಟ್ಟು ವೀಳ್ಯದೆಲೆ ಮತ್ತು ಅಡಿಕೆ ಇರಿಸಲಾಗಿದೆ. ದೇವಸ್ಥಾನದ ಆವರಣ ಆಗಿರುವುದರಿಂದ ಧಾರ್ಮಿಕತೆಯ ಟಚ್ ಕೊಡಲಾಗಿದ್ದು ಜನರ ಆಕರ್ಷಣೆಗೆ ಕಾರಣವಾಗಿದೆ.

RELATED ARTICLES

Related Articles

TRENDING ARTICLES