Monday, December 23, 2024

ತಾಲಿಬಾನ್‌ ಸಂಪರ್ಕ ಹೊಂದಿದ್ದ ಉಗ್ರ ಅರೆಸ್ಟ್‌

ಪ್ರವಾದಿ ಮಹಮದ್ದರ ವಿರುದ್ಧ ಮಾತಾಡಿ ಬಿಜೆಪಿಯಿಂದ ಅಮಾನತ್ತಾಗಿದ್ರು ನೂಪುರ್ ಶರ್ಮಾ. ಆದ್ರೆ, ಆ ಘಟನೆ ಆದ್ಮೇಲೆ, ನೂಪುರ್ ಶರ್ಮಾ ಅವರ ಹತ್ಯೆಗಾಗಿ ಜೈಶ್ ಎ ಮೊಹಮ್ಮದ್ ಸಂಘಟನೆಯಿಂದ ನಿಯೋಜನೆಯಾಗಿದ್ದ ಉಗ್ರಗಾಮಿಯೊಬ್ಬನನ್ನು ಉತ್ತರ ಪ್ರದೇಶದ ಭಯೋತ್ಪಾದನ ನಿಗ್ರಹ ದಳ ಬಂಧಿಸಿದೆ.

ಬಂಧಿತ ಉಗ್ರನನ್ನು ಮುಹಮ್ಮದ್ ನದೀಮ್ ಎಂದು ಗುರುತಿಸಲಾಗಿದೆ. ಈತ ಪಾಕಿಸ್ತಾನದ ಉಗ್ರಗಾಮಿ ಸಂಘಟನೆಗಳಾದ ಜೆಇಎಂ ಮತ್ತು ತೆಹ್ರೀಕ್– ಇ– ತಾಲಿಬಾನ್ ಪಾಕಿಸ್ತಾನ ಯೊಂದಿಗೆ ನೇರ ಸಂಪರ್ಕದಲ್ಲಿದ್ದ ಎಂದು ಎಟಿಎಸ್ ತಿಳಿಸಿದೆ. ನೂಪುರ್ ಶರ್ಮಾ ಅವರನ್ನು ಹತ್ಯೆ ಮಾಡುವ ಕೆಲಸವನ್ನು ನದೀಮ್ಗೆ ವಹಿಸಲಾಗಿತ್ತು ಎಂದು ಎಟಿಎಸ್​​ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES