Wednesday, January 22, 2025

ದೇಶಭಕ್ತಿಗೆ ಮಾದರಿಯಾದ ಶಾಸಕ ಹೆಚ್​.ಹಾಲಪ್ಪ

ಬೆಂಗಳೂರು : ಈ ದೃಶ್ಯವನ್ನು ಕಣ್ತುಂಬಿ ಕೊಳ್ಳುವುದೇ ಒಂದು ಸಂಭ್ರಮ. ಹೀಗೆ ಭಾರತ್ ಮಾತಾಕೀ ಜೈ ಹರ್ ಘರ್ ತಿರಂಗಾ. ಎಂದು ಘೋಷಣೆ ಕೂಗುತ್ತಿರುವ ವಿದ್ಯಾರ್ಥಿಗಳು, ಶಾಸಕ ಹರತಾಳು ಹಾಲಪ್ಪನವರ ಕಾರ್ಯವನ್ನು ಶ್ಲಾಘಿಸುತ್ತಿದ್ದಾರೆ.ಹೌದು, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶಾಸಕ ಹರತಾಳು ಹಾಲಪ್ಪ ಅವರ ಕ್ಷೇತ್ರದಲ್ಲಿ, ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಹಾಗೂ ಶಾಲೆಗಳ ವಿದ್ಯಾರ್ಥಿಗಳ ಕೈಯಲ್ಲಿ ಸಾವಿರಾರು ರಾಷ್ಟ್ರಧ್ವಜಗಳು ಏಕ ಕಾಲದಲ್ಲಿ ರಾರಾಜಿಸಿದವು.

ಅಂದ ಹಾಗೆ, 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರ, ಹರ್ ಘರ್ ತಿರಂಗಾ ಎಂಬ ಘೋಷ ವಾಕ್ಯದಡಿ ಅಭಿಯಾನ ನಡೆಸುತ್ತಿದ್ದು, ಪ್ರತಿ ಧ್ವಜಕ್ಕೆ 25 ರೂ.ನಂತೆ ದರ ನಿಗದಿ ಮಾಡಿದೆ.ಆದರೆ,ಪ್ರತೀ ವ್ಯಕ್ತಿಗೂ ಅಮೃತ ಮಹೋತ್ಸವದ ಸಂದೇಶ ತಲುಪಬೇಕೆಂಬ ಉದ್ದೇಶದಿಂದ ಸಾಗರದ BJP ಶಾಸಕ ಹರತಾಳು ಹಾಲಪ್ಪ ತಮ್ಮ ಖರ್ಚಿನಲ್ಲೇ, ಕ್ಷೇತ್ರದಾದ್ಯಂತ ಸುಮಾರು 77 ಸಾವಿರ ತ್ರಿವರ್ಣ ಧ್ವಜಗಳನ್ನು ತಯಾರಿಸಿ ಪ್ರತಿ ಮನೆ ಮನೆಗೂ ನೀಡುತ್ತಿದ್ದಾರೆ.

ಇನ್ನು, ಪ್ರಧಾನಿ ಮೋದಿಯವರ ಕರೆ ಹಿನ್ನೆಲೆಯಲ್ಲಿ ಎಲ್ಲೆಡೆ ಹರ್ ಘರ್ ತಿರಂಗಾ ಅಭಿಯಾನ ನಡೆಸಲಾಗುತ್ತಿದ್ದು, ಈ ಅಭಿಯಾನವನ್ನು, ಸಾಗರ ಕ್ಷೇತ್ರ ವ್ಯಾಪ್ತಿಯಲ್ಲಿ ಅತ್ಯಂತ ಶ್ರದ್ಧಾಭಕ್ತಿಯಿಂದ ಕೈಗೊಳ್ಳಲಾಗಿದೆ. ಜು. 31ರಿಂದ ನಿರಂತರವಾಗಿ ಧ್ವಜವನ್ನು ಸಿದ್ದಪಡಿಸಲಾಗಿದ್ದು, ಪ್ರತಿದಿನ 7ಸಾವಿರದಂತೆ 11 ದಿನಗಳ ಕಾಲ 77 ಸಾವಿರ ಧ್ವಜವನ್ನು ಸಿದ್ದಪಡಿಸಲಾಗಿದೆ. ಧ್ವಜ ಸಿದ್ದಪಡಿಸುವ ಕೆಲಸದಲ್ಲಿ ಪಕ್ಷಾತೀತವಾಗಿ ಎಲ್ಲರೂ ಪಾಲ್ಗೊಂಡಿದ್ದು, ಸಂಘಸಂಸ್ಥೆಗಳ ಸಹಕಾರ ಹೆಚ್ಚಿನದ್ದಾಗಿದ್ದು, ನಿನ್ನೆಯಿಂದ ಶಾಲಾ-ಕಾಲೇಜುಗಳಲ್ಲಿ ಧ್ವಜವನ್ನು ವಿತರಣೆ ಮಾಡಲಾಗುತ್ತಿದೆ.

ಅದರಂತೆ, ಈ ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಸಂತಸದ ವಿಚಾರವಾದರೆ, ಎಲ್ಲೆಡೆ ಧ್ವಜಗಳನ್ನು ಮನೆ ಮನೆಗೆ ನೀಡುವುದೇ ಒಂದು ಸಾಹಸವಾಗಿರುವಾಗ, ಸಾಗರ ಕ್ಷೇತ್ರದ ಶಾಸಕರಾದ ಹರತಾಳು ಹಾಲಪ್ಪನವರು, ಬಹಳ ಆಸಕ್ತಿ ವಹಿಸಿ, ತಾವೇ ನಿಂತು ಸ್ವಂತ ಹಣದಲ್ಲಿ ಧ್ವಜಗಳನ್ನು ತಯಾರಿಸಿ, ನೀಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ.

ಒಟ್ಟಾರೆ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ತ್ಯಾಗ, ಬಲಿದಾನಗೈದವರನ್ನು ವಿದ್ಯಾರ್ಥಿ ಸಮೂಹ, ಸದಾ ಸ್ಮರಿಸಿಕೊಳ್ಳಬೇಕೆಂಬ ಮಹದಾಸೆ ಶಾಸಕ ಹರತಾಳು ಹಾಲಪ್ಪನವರದ್ದಾಗಿದ್ದು, ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಧ್ವಜ ಸಂಹಿತೆ ಸಡಿಲಿಸಲಾಗಿದೆ. ಈ ಅಭಿಯಾನದಲ್ಲಿ, ಹರತಾಳು ಹಾಲಪ್ಪನವರು ಕೇವಲ ಸಾಗರದಲ್ಲಷ್ಟೇ ಮಾದರಿಯಾಗದೇ, ಇಡೀ ದೇಶದಲ್ಲಿ ಮಾದರಿಯಾಗಿರುವುದು ಅಭಿನಂದನಾರ್ಹ.

ಮೋಹನಕೃಷ್ಣ, ಪವರ್ ಟಿ.ವಿ., ಶಿವಮೊಗ್ಗ

RELATED ARTICLES

Related Articles

TRENDING ARTICLES