Wednesday, January 22, 2025

ಮೋದಿ ಕರೆಯಂತೆ ಡಿಪಿ ಚೇಂಜ್ ಮಾಡಿದ ಮಾಜಿ ಕೂಲ್ ಕ್ಯಾಪ್ಟನ್.!

ನವದೆಹಲಿ: ಅಗಸ್ಟ್​-15 ರಂದು ಪ್ರಧಾನಿ ನರೇಂದ್ರ ಮೋದಿಯವರ ಕರೆ ನೀಡಿದಂತೆ ಜನರು ತಮ್ಮ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಡಿಪಿ ಬದಲಾಯಿಸುತ್ತಿದ್ದಾರೆ. ಅದರಂತೆ ಮಾಜಿ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಹಾಗೂ ಕ್ಯಾಪ್ಟನ್ ರೋಹಿತ್ ಶರ್ಮಾ ತಮ್ಮ ಡಿಪಿ ಬದಲಾಯಿಸಿದ್ದಾರೆ.

ಕಳೆದೆರಡು ವರ್ಷಗಳಿಂದ ಡಿಪಿ ಬದಲಾಯಿಸದ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ತಿರಂಗವನ್ನ ಡಿಪಿಯನ್ನಾಗಿಸಿ ಭಾರತೀಯನಾಗಿರುವುದೇ ನನ್ನ ಅದೃಷ್ಟ ಎಂದು ಬರೆದುಕೊಂಡಿದ್ದಾರೆ. ಈ ಬರಹಕ್ಕೆ ಅಭಿಮಾನಿಗಳು ಫುಲ್ ಖುಷ್​ ಆಗಿದ್ದಾರೆ.

ಧೋನಿ ಸಾಮಾಜಿಕ ಜಾಲತಾಣದಲ್ಲಿ ಅಷ್ಟೊಂದು ಸಕ್ರಿಯವಾಗಿಲ್ಲ. ಇನ್‌ಸ್ಟಾಗ್ರಾಂನಲ್ಲಿಯೂ ಕಳೆದೆರಡು ವರ್ಷಗಳಿಂದ ಡಿಪಿಯನ್ನೇ ಬದಲಾಯಿಸದ ಧೋನಿ ಇದೇ ಮೊದಲ ಬಾರಿಗೆ ರಾಷ್ಟ್ರಧ್ವಜವನ್ನು ಡಿಪಿಯಾಗಿ ಬದಲಾಯಿಸಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂ ನಲ್ಲಿ ಅಧಿಕ ಅಭಿಮಾನಿಗಳನ್ನು ಹೊಂದಿರುವ ಧೋನಿಯವರು ಬರೆದ ಸಾಲುಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

RELATED ARTICLES

Related Articles

TRENDING ARTICLES