Monday, December 23, 2024

ಸೂತಕದ ಮನೆಯಲ್ಲಿ ದೇಶ ಪ್ರೇಮ ಮೆರೆದ ಸೈನಿಕ.!

ಶಿವಮೊಗ್ಗ: ಮನೆಯಲ್ಲಿ ಶವವಿದ್ದರೂ ಕೂಡ, ರಾಷ್ಟ್ರಧ್ವಜ ಹಾರಿಸುವ ಮೂಲಕ ಇಲ್ಲಿನ ನಾಗರೀಕನೊಬ್ಬ ದೇಶ ಪ್ರೇಮ ಮೆರೆದಿರುವ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದಲ್ಲಿ ನಡೆದಿದೆ.

ಆನಂದಪುರದ ಅಶೋಕ ರಸ್ತೆಯ ನಿವಾಸಿ ಸಾಮಾಜಿಕ ಕಾರ್ಯಕರ್ತ ರಂಗನಾಥ್ ರವರ ತಾಯಿ ರಾಧಮ್ಮ ಇಂದು ಬೆಳಿಗ್ಗೆ ಅನಾರೋಗ್ಯದಿಂದ ನಿಧನರಾಗಿದ್ದರು. ಆದರೆ, ಇಂದು ಹರ್ ಘರ್ ತಿರಂಗಾ ಅಭಿಯಾನದ ಹಿನ್ನಲೆಯಲ್ಲಿ ತನ್ನ ತಾಯಿಯ ಶವ ಮನೆಯಲ್ಲಿದ್ದರೂ ಕೂಡ ರಾಧಮ್ಮನ ಪುತ್ರ ತ್ರಿವರ್ಣ ಧ್ವಜವನ್ನು ಹಾರಿಸಿ ರಾಷ್ಟ್ರ ಪ್ರೇಮ ಮೆರೆತಿದ್ದಾರೆ.

ಆನಂದಪುರದಲ್ಲಿ ಕಳೆದ 3 ದಿನಗಳ ಹಿಂದೆ ಸ್ಥಳೀಯ ನಿವಾಸಿ ನಾಗರಾಜ ಶೆಟ್ಟಿ ಅನಾರೋಗ್ಯದಿಂದ ಮರಣ ಹೊಂದಿದ್ದರು. ಇವರ ಮಗ ಸಂದೀಪ್ ಶೆಟ್ಟಿ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ತಂದೆಯ ಅಂತ್ಯಕ್ರಿಯೆಗಾಗಿ ಆಗಮಿಸಿದ್ದಾರೆ. ಸಂದೀಪ್ ಶೆಟ್ಟಿ 75ನೇ ಸ್ವಾತಂತ್ರ್ಯ ದಿನಚಾರಣೆ ಅಂಗವಾಗಿ ಅಮೃತಾ ಮಹೋತ್ಸವ ಕಾರ್ಯಕ್ರಮದಲ್ಲಿ ಹರ್ ಘರ್ ತಿರಂಗಾ ಅಭಿಯಾನದ ಹಿನ್ನೆಲೆಯಲ್ಲಿ, ತನ್ನ ಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸುವುದರ ಮೂಲಕ ರಾಷ್ಟ್ರಪ್ರೇಮಕ್ಕೆ ಸಾಕ್ಷಿಯಾದರು.

ಅದೇರೀತಿ, ಇತ್ತೀಚೆಗೆ ಸುರಿದ ನಿರಂತರ ಮಳೆಗೆ ಮನೆ ಮುರಿದು ಬಿದ್ದಿದ್ದರೂ, ಹರ್ ಘರ್ ತಿರಂಗಾ ಅಭಿಯಾನದ ಹಿನ್ನಲೆಯಲ್ಲಿ, ಆಚಾಪುರದ ಫಾತಿಮಾ ಬಿ ಎಂಬುವವರು, ರಾಷ್ಟ್ರಧ್ವಜ ಹಾರಿಸುವ ಮೂಲಕ ರಾಷ್ಟ್ರಭಕ್ತಿ ಮೆರೆದಿದ್ದರು.

RELATED ARTICLES

Related Articles

TRENDING ARTICLES