Wednesday, January 22, 2025

ಗಾಳಿಪಟ 2 ಪವರ್ ಟಿವಿ ರೇಟಿಂಗ್: 3/5

ಭಟ್ರ ಗಾಳಿಪಟ ಮುಗಿಲೆತ್ತರಕ್ಕೆ ಹಾರಿದ್ದಾಯ್ತು. ಬಾನ ಮೋಡಗಳ ನಡುವೆ ಮಿಂಚಿನ ಹಾರಾಟ ನಡೆಸುತ್ತಿರೋ ಸಿನಿಮಾಗೆ ಪ್ರೇಕ್ಷಕ ಕೂಡ ಓಕೆ ಅಂದಾಯ್ತು. ಇದು ಬಗೆಹರಿಯದ ಹಾಡು. ಪ್ರಾಣ ಸ್ನೇಹಿತರ ಪಾಡು. ಅಂತೂ ರಾಜ್ಯಾದ್ಯಂತ ಗೋಲ್ಡನ್​ ಗಣಿ ಗ್ಯಾಂಗ್​ಗೆ ರೆಡ್​ ಕಾರ್ಪೆಟ್​ ವೆಲ್ಕಮ್​ ಸಿಕ್ಕಿದ್ದು ಹೌಸ್​​​ಫುಲ್​ ಪ್ರದರ್ಶನ ಕಾಣ್ತಿದೆ. ಗಾಳಿಪಟ- 2 ಚಿತ್ರ ಹೇಗಿದೆ..? ಚಿತ್ರಪ್ರೇಮಿಗಳು ಏನಂತಾರೆ..? ಚಿತ್ರದ ಪ್ಲಸ್ ಪಾಯಿಂಟ್​​ ಏನು..? ಮೈನಸ್ ಪಾಯಿಂಟ್​​​​​ ಏನು..? ಭಟ್ರ ಕೈರುಚಿ ಹೇಗಿದೆ..? ನೀವೇ ಓದಿ.

  • ಹೇಗಿದೆ ಗಣಿ-ಭಟ್ರ ಬಹು ನಿರೀಕ್ಷಿತ ಗೋಲ್ಡನ್ ಗಾಳಿಪಟ..?
  • ಭಟ್ರ ಕೈರುಚಿಯನ್ನ ಬಾಯಿ ಚಪ್ಪರಿಸಿ ಸವಿದ ಕ್ರೇಜಿ ಫ್ಯಾನ್ಸ್​​..!

ಸಂಕಟ, ಸಂತಸದ ನಡುವೆ ಪ್ರಾಣ ಸ್ನೇಹಿತರ ಪಾಡನ್ನು ತೆರೆಯ ಮೇಲೆ ತರುವ ಪ್ರಯತ್ನವನ್ನು ನಿರ್ದೇಶಕ ಯೋಗರಾಜ್​ ಭಟ್​ ಮಾಡಿದ್ದಾರೆ. ಭಟ್ರ ಕೈ ರುಚಿಯ ಸಿನಿಮಾಗಳಿಗೆ ಪ್ರೇಕ್ಷಕನ ನಿರೀಕ್ಷೆಯ ಮಟ್ಟ ಕೂಡ ಎತ್ತರವಾದದ್ದು. ಇನ್ನು ಗಾಳಿಪಟ- 2 ಸಿನಿಮಾ ಅಂದ್ರೆ ಮರು ಮಾತೇ ಇಲ್ಲ. ಬ್ಲಾಕ್​ ಬಸ್ಟರ್​ ಹಿಟ್​ ಸಿನಿಮಾ ಗಾಳಿಪಟ ಮನದ ಮುಗಿಲಿನ ಮೊಹಬ್ಬತ್​​ ಕ್ಯಾಪ್ಶನ್​ ಅಡಿಯಲ್ಲಿ ಕರುನಾಡಿನ ಪ್ರೇಕ್ಷಕರನ್ನು ನಕ್ಕು ನಗಿಸಿತ್ತು. ಪ್ರೀತಿಯ ಭಾವತೀರದಲ್ಲಿ ಕಣ್ಣೀರಾಕಿಸಿತ್ತು. ಇದೀಗ ಅದರ ಸೀಕ್ವೆಲ್​​ ಮೊದಲ ದಿನವೇ ಧೂಳೆಬ್ಬಿಸ್ತಾ ಇದೆ. ಎಲ್ಲಾ ಥಿಯೇಟರ್​​ಗಳಲ್ಲೂ ಗ್ರ್ಯಾಂಡ್​ ಆಗಿ ಸ್ವಾಗತ ಮಾಡಲಾಗಿದೆ.

ಮುಗಿಲ್​ ಪೇಟೆ ಪ್ಯಾರ್​ ಕಹಾನಿ ಇನ್ನೂ ನೂರು ಕಾಲ ಕಳೆದರೂ ಮಾಸದ ಸವಿ ನೆನಪು. ಅದೇ ಫ್ಲೇವರ್​ನಲ್ಲಿ ಗಾಳಿಪಟ-2 ರಾಜ್ಯಾದ್ಯಂತ ಅಬ್ಬರಿಸ್ತಾ ಇದೆ. ಫಸ್ಟ್​​ ಡೇ ರೆಸ್ಪಾನ್ಸ್​ ನೋಡಿ ಭಟ್ರೇ ತಮಟೆ ಹೊಡೆದು ಡ್ಯಾನ್ಸ್​ ಮಾಡಿದ್ದಾರೆ. ಇದು ಸಂಕಟದ ಕಥೆ, ಕಾಲೇಜು ಬಿಟ್ಟವರ ಪ್ರೇಮದ ವ್ಯಥೆ. ಯೆಸ್​​.. ಭಟ್ರು ಯಾವ ಕಥೆ ಚಾಯ್ಸ್​ ಮಾಡಿದ್ದಾರೆ. ಗಣಿ, ದಿಗ್ಗಿ, ಪವನ್​​ ಕುಮಾರ್​ ರೋಲ್​ ಏನು..? ಅನಂತ್​ ನಾಗ್​ ಮೇಷ್ಟು ಏನ್​ ಪಾಠ ಹೇಳ್ತಾರೆ.? ಬ್ಯೂಟಿಫುಲ್​ ಚೆಲುವೆಯರ ಮ್ಯಾಜಿಕ್​​ ಎಷ್ಟು ಮೋಡಿ ಮಾಡಿದೆ? ತೆರೆ ಮರೆಯ ನೋವು, ನಲಿವು, ಕಥೆಯ ಮೇಲಿನ ಒಲವಿಗೆ ಸಿಕ್ಕ ಗೆಲುವಿಗೆ ಇಲ್ಲಿದೆ ಉತ್ತರ.

ಚಿತ್ರ:  ಗಾಳಿಪಟ-2

ನಿರ್ದೇಶನ: ​​​ಯೋಗರಾಜ್​​ ಭಟ್​​

ನಿರ್ಮಾಣ: ಎಮ್​. ರಮೇಶ್​ ರೆಡ್ಡಿ

ಸಂಗೀತ: ​​ಅರ್ಜುನ್​ ಜನ್ಯ

ಸಿನಿಮಾಟೋಗ್ರಫಿ: ಸಂತೋಷ್​ ರೈ ಪತಾಜೆ

ತಾರಾಗಣ: ಗೋಲ್ಡನ್​ ಸ್ಟಾರ್​ ಗಣೇಶ್​, ದಿಗಂತ್​​, ಪವನ್​​ ಕುಮಾರ್​​, ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ, ಸಂಯುಕ್ತ ಮೆನನ್​​, ಅನಂತ್​ ನಾಗ್​​, ರಂಗಾಯಣ ರಘು, ಸುಧಾ ಬೆಳವಾಡಿ ಮುಂತಾದವರು.

ಗಾಳಿಪಟ-2 ಸ್ಟೋರಿಲೈನ್​​:

ಅದೊಂದು ಮಲೆನಾಡಿನ ಹಸಿರನ್ನೇ ಮೈಮೇಲೆ ಬೆಚ್ಚಗೆ ಹೊದ್ದುಕೊಂಡ ಊರು. ಹೆಸರು ನೀರು ಕೋಟೆ. ಹೆಸರಿಗೆ ತಕ್ಕಂತೆ 24 ಗಂಟೆಯೂ ರಣ ಭೀಕರ ಮಳೆ ಸುರಿಯೋ ಸ್ಥಳ. ತೆರೆಯ ಮೇಲೆ ಮಳೆ ಸುರೀತಿದ್ರೆ, ಕೈಯಲ್ಲಿ ಚಹಾ, ಬಾಯಲ್ಲಿ ಬಜ್ಜಿ ಇದ್ರೆ ಅದ್ರ ಮಜಾನೆ ಬೇರೆ ಅನ್ನಿಸುತ್ತೆ. ಸಿನಿಮಾ ಟೇಕ್​ ಆಫ್​ ಆಗೋದೆ ಈ ಸುಂದರ ಸ್ಥಳದಿಂದ. ಕೇಶಿರಾಜರ ಶಬ್ಧಮಣಿ ದರ್ಪಣಕ್ಕೆ ಕಂಗಾಲಾದ ಕಾಲೇಜು ಯುವಕ ಗಣಿಗೆ ಪಾಸಾಗಲೇಬೇಕಾದ ಅನಿವಾರ್ಯತೆ. ಇನ್ನು ಪ್ರೇಯಸಿಗಾಗಿ ಕಾಲೇಜು ಸೇರಿದ ದಿಗಂತ್​​​, ಟೀಚರ್​ ಮೇಲೆ ಪವನ್​​ ಕುಮಾರ್​​ಗೆ ಲೇಲೇ… ಲೇಲೇ… ಹಗಲುಕನಸು.

ಫಸ್ಟ್​ ಆಫ್​​ನಲ್ಲಿ ಅರ್ಜುನ್​ ಜನ್ಯಾಗೆ ಫುಲ್​ ಕೆಲಸ ಕೊಟ್ಟಂತಿದೆ. ಹಾಡುಗಳಲ್ಲೇ  ಪ್ರಾಣ ಸ್ನೇಹಿತರ ಪ್ರೇಮ ಕಹಾನಿ ಟ್ರಾವೆಲ್​ ಆಗುತ್ತೆ. ನಾನ್​ಸ್ಟಾಪ್​​ ಕಾಮಿಡಿ, ತರಲೆ, ತಮಾಷೆ, ಪ್ರೀತಿಯ ಮಳೆಯಲ್ಲಿ ನೆಂದ ಪ್ರೇಕ್ಷಕನಿಗೆ ನೊಂದ ಜೀವಗಳ ಇಂಟರ್​ವೆಲ್​ ಶಾಕ್​ ಕೊಡುತ್ತೆ. ಸುಗಮವಾಗಿ ಯಾವ ಅಡೆತಡೆ ಇಲ್ಲದೇ ಹಾರಾಡುತ್ತಿದ್ದ ಗಾಳಿಪಟಕ್ಕೆ ಎಮೋಷನಲ್​ ವಿರಾಮ.

ಕಾಲೇಜಿನಿಂದ ಡಿಬಾರ್ ಆಗೋ ಗಣಿ, ಮಳೆ ಹೊಡೆತಕ್ಕೆ ಛಾವಣಿ ಕುಸಿದು ಆಸ್ಪತ್ರೆ ಸೇರೋ ಮೇಷ್ಟ್ರು…ಎಲ್ಲವೂ ಕಥೆಗೆ ಶಾಕಿಂಗ್​ ಯೂ ಟರ್ನ್​ ಕೊಡುತ್ತೆ. ಪಾಪ್​​ ಕಾರ್ನ್​ ಸವಿದು ಸೆಕೆಂಡ್​ ಆಫ್​ ನೋಡಲು ಕೂತವರಿಗೆ ಜರ್ಮನಿ ಹಿಮ ದರ್ಶನವಾಗಲಿದೆ. ಗಾಳಿಪಟದ ಇಡೀ ಗ್ಯಾಂಗ್ ಜರ್ಮಿನಿಗೆ ಶಿಫ್ಟ್​ ಆಗಿದ್ಯಾಕೆ..? ದಿಗ್ಗಿ ಬೆತ್ತಲಾಗೋದ್ಯಾಕೆ..? ಪವನ್​ ಅತ್ತು ಅತ್ತು ಸೊರಗೋದ್ಯಾಕೆ ಅನ್ನೋದೆ ಇಲ್ಲಿನ ಸಸ್ಪೆನ್ಸ್​​. ಇದಕ್ಕೆ ನಮ್ ಬಳಿ ಉತ್ತರವಿಲ್ಲ. ಖಂಡಿತ ನೀವ್​ ಥಿಯೇಟರ್​ಗೆ ಹೋಗಿ ತಿಳಿಯಬೇಕು.

ಗಾಳಿಪಟ-2 ಕಲಾವಿದರ ನಟನೆ:

ಉಡಾಫೆ ಹುಡುಗರಾದ ಗಣಿ, ದಿಗ್ಗಿ, ಪವನ್​ ತರಲೆ ತಮಾಷೆಗೆ ಫುಲ್​​ ಮಾರ್ಕ್ಸ್​ ಕೊಡಬೇಕು. ಭಟ್ರ ಸಂಭಾಷಣೆ ಇಷ್ಟ ಪಡುವವರಿಗೆ ಈ ಸಿನಿಮಾ ಮ್ಯಾಗ್ನೆಟ್​​ಗಿಂತ ಹೆಚ್ಚು ಆಕರ್ಷಣೆ  ಮಾಡಲಿದೆ. ನಿಮ್ಮನ್ನು ಅತ್ತ ಇತ್ತ ಹೊರಳದಂತೆ, ಕಣ್ಣು ಮಿಟುಕಿಸದಂತೆ ಕೊನೆಯವರೆಗೂ ಸಿನಿಮಾ ಸೀಟಲ್ಲಿ ಕೂರಿಸಲಿದೆ. ಅಲ್ಲಲ್ಲಿ ಬರುವ ಡೈಲಾಗ್​ಗಳು ಹೊಟ್ಟೆ ಒಳಗೆ ಚಿಟ್ಟೆ ಬಿಟ್ಟರೆ, ಭಾವನೆಗಳ ಆಟದಲ್ಲಿ ಮನಸ್ಸು ಒದ್ದೆಯಾಗಲಿದೆ.

ದಿಗ್ಗಿಯ ತುಂಟತನ ಇಲ್ಲೂ ರಿಪೀಟ್​ ಆಗಿದೆ. ಪಟ್​ ಅಂತಾ ಲವ್​​ ಆಗೋ ಗಣಿ ಇಲ್ಲಿಯೂ ಮಾತಿನಲ್ಲೇ ಕೂತವರನ್ನು ನಕ್ಕು ಸುಸ್ತಾಗಿಸಿದ್ದಾರೆ. ಪವನ್​ ಕುಮಾರ್​ ಟೀಚರ್​ ಲವ್​ ಸ್ಟೋರಿಯಂತೂ ಅಸಹಾಯಕತೆಯ ಪರಮಾವಧಿಯಲ್ಲಿ ನಿಲ್ಲುತ್ತದೆ. ಪವನ್​ ಮುಖ ನೋಡಿದ್ರೆ ಸಾಕು ನಗು ತರಿಸುವ ಪಾತ್ರವದು. ನಾಯಕಿಯರು ಸಂಪೂರ್ಣ ಸಿನಿಮಾ ಆವರಿಸಿ ಕಲರ್​ ತುಂಬಿದ್ದಾರೆ. ಅವ್ರ ಒನಪು ವಯ್ಯಾರ, ಬಿಂಕ ಬಿನ್ನಾಣಕ್ಕೆ ಸರಿಸಾಟಿ ಯಾರೂ ಇಲ್ಲ.

ಪೋಷಕ ಪಾತ್ರದಲ್ಲಿ ರಂಗಾಯಣ ರಘು ಅವ್ರ ನಗೆ ಪಟಾಕಿಯ ಕಿಕ್ಕು ಮಸ್ತ್​ ಆಗಿದೆ. ಇಲ್ಲೂ ಪೊಲಿಟಿಕಲ್​ ಇಮೇಜ್​​ನಲ್ಲಿ ರಂಗಾಯಣ ರಘು ಪಂಚಿಂಗ್​ ಡೈಲಾಗ್​ ಮೂಲಕ ಬೌಲ್​ ಟು ಬೌಲ್​ ಸಿಕ್ಸರ್​ ಬಾರಿಸಿದ್ದಾರೆ. ಅನಂತ್​ನಾಗ್​ ಮೇಷ್ಟ್ರ ರೋಲ್​​​ ಚಿತ್ರದ ಮೈನ್​ ಹೈಲೈಟ್​​. ಕ್ಲೈಮ್ಯಾಕ್ಸ್​ವರೆಗೂ ಅನಂತ್​​​ ನಾಗ್​ ಅವ್ರ ಅನುಭವದ ನಟನೆಗೆ ಪ್ರೇಕ್ಷಕ ಫುಲ್ ಫಿದಾ ಆಗಿದ್ದಾನೆ.

ಗಾಳಿಪಟ-2 ಚಿತ್ರದ ಪ್ಲಸ್ ಪಾಯಿಂಟ್ಸ್

  • ಮಲೆನಾಡ ಹಸಿರ ಸಿರಿ
  • ಮಳೆಯ ಕಂಪು
  • ಫಸ್ಟ್​ ಕ್ಲಾಸ್​ ಕಾಮಿಡಿ
  • ಬ್ಯೂಟಿಫುಲ್​​ ಲೊಕೇಷನ್ಸ್​
  • ಎಮೋಷನಲ್​ ಕ್ಲೈಮ್ಯಾಕ್ಸ್​​
  • ಭಟ್ರ ಫಿಲಾಸಫಿ
  • ಗಣಿ ಎಕ್ಸ್​​​​ಪ್ರೆಷನ್ಸ್​​​​​​
  • ನಟಿಯರ ಬಿಂದಾಸ್​ ಆ್ಯಕ್ಟಿಂಗ್​
  • ಅರ್ಜುನ್​ ಜನ್ಯ ಸಂಗೀತ ಸುಧೆ

ಗಾಳಿಪಟ-2 ಮೈನಸ್ ಪಾಯಿಂಟ್ಸ್ :

ಸಂಕಟದ ಕಥೆಯೊಳಗೆ ಸಾಗುತ್ತಾ ಅಲ್ಲಲ್ಲಿ ಜಾರಿಬಿಡುವ ಕಥೆ ಅಟೆನ್ಷನ್​​​​ ಕಾಪಾಡಿಕೊಳ್ಳುವಲ್ಲಿ ಕೆಲವು ಕಡೆ ಎಡವಿದೆ. ಫಸ್ಟ್​ ಆಫ್​​ ಸ್ಪೀಡ್​​ ಸೆಕೆಂಡ್​ ಆಫ್​​ನಲ್ಲಿಲ್ಲ. ಭಟ್ರು ತಲೆಗೆ ಇನ್ನೂ ಕೆಲಸ ಕೊಟ್ಟಿಲ್ಲ. ಕಾಮಿಡಿ ಪಂಚ್​ಗಳು ಕೆಲವು ಕಡೆ ಭಟ್ರು ತೂಕವನ್ನು ಮರೆಸುತ್ತವೆ. ಕಥೆಗೆ ಉಸಿರಿದೆ. ಆದ್ರೆ ಜೀವ ಇನ್ನೂ ತುಂಬಬೇಕಿತ್ತು. ಇಷ್ಟು ಹೊರತುಪಡಿಸಿದ್ರೆ ಸಿನಿಮಾ ಸೂಪರ್​ ಡೂಪರ್​​​. ವಂಡರ್​​​​​ಫುಲ್​​​. ಮಸ್ತ್​ ಮಜಾ ಕಹಾನಿ.

ಗಾಳಿಪಟ-2 ಫೈನಲ್ ಸ್ಟೇಟ್​ಮೆಂಟ್:

ಟಿಪಿಕಲ್​ ಕಥೆಯ ಮೂಲಕ ನಗೆಗುಳಿಗೆ ಕೊಟ್ಟ ಭಟ್ರು ಲವಲವಿಕೆಯ ಮೂಲಕ ತಾಜಾ ಕಥೆ ಕೊಟ್ಟಿದ್ದಾರೆ. ಸೀರಿಯಸ್​ ಇಲ್ಲದ ನಟನ ಕಣ್ಣಲ್ಲಿ ಕಣ್ಣೀರಾಕಿಸುವ ದೃಶ್ಯಗಳು ಇಂಪ್ರೆಸ್ಸಿವ್ ಆಗಿವೆ. ಅಭಿನಯದಲ್ಲಿ ಎಲ್ಲರಿಗು ಮ್ಯಾನ್​ ಆಫ್​ ದಿ ಮ್ಯಾಚ್​ ಅವಾರ್ಡ್ ಸಿಗಲಿದೆ. ಬಿಕ್ಕಿ ಬಿಕ್ಕಿ ಅತ್ತರೆ ನಾವ್​ ಜವಾಬ್ದಾರರಲ್ಲ. ಕಾಮಿಡಿ ರಿಲೀಫ್​ ಕೊಟ್ಟರೆ ನಮ್ಮ ಮೇಲೆ ಬೇಸರವಾಗಬೇಡಿ. ರಮೇಶ್​ ರೆಡ್ಡಿ ಕೊಟ್ಟಿರುವ ಕುದುರೆಯನ್ನು ಸರಿಯಾಗಿ ಏರಿರುವ ಎಲ್ಲಾ ಕಲಾವಿದರಿಗೆ ನಿರ್ಮಾಪಕರ ಕಡೆಯಿಂದ ಗೌರವವೂ ಸಲ್ಲಬೇಕು. ಫೈನಲೀ ಸಿನಿಮಾ ಎಲ್ಲರ ಮೆಚ್ಚುಗೆಗೆ ಪಾತ್ರವಾಗೋದಂತೂ ಸತ್ಯ​​.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES