Monday, December 23, 2024

BBMP ಮಾಜಿ ಉಪಮೇಯರ್ ಆತ್ಮಹತ್ಯೆ ಬೆದರಿಕೆ

ಬೆಂಗಳೂರು : ಮಾಜಿ ಉಪಮೇಯರ್​​ಗೆ ಗಂಡನಿಂದ ವಂಚನೆ, ಹಲ್ಲೆಯಾಗಿರುವ ಆರೋಪ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಬೆದರಿಕೆ ಹಾಕಿದ್ದಾರೆ.

ಫೇಸ್​​ಬುಕ್​​ನಲ್ಲಿ ವಿಡಿಯೋ ಮಾಡಿ ಪ್ರಧಾನಮಂತ್ರಿ ನರೇಂದ್ರ ಮೊದಿಗೆ ಪತಿಯ ವಿರುದ್ಧ ದೂರು ಸಲ್ಲಿಸಲಾಗಿದೆ. ಮಾಜಿ ಉಪಮೇಯರ್ ಶಹತಾಜ್ ಖಾನಂ ಅವರು ಫೇಸ್​​ಬುಕ್ ವಿಡಿಯೋ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ತಲಾಕ್ ನೀಡಿದ್ದಾಗಿ ಹೇಳಿ ಜೊತೆಗಿರಲು, ಸಂಸಾರ ಮಾಡಲು ಪತಿ ನಿರಾಕಾರಿಸಿದ್ದಾರೆ ಎಂದು ಆರೋಪ ಮಾಡಲಾಗಿದೆ.

ಇನ್ನು, ಪತಿ ಅನ್ವರ್, 2011ರಲ್ಲಿ ತಲಾಕ್ ನೀಡಿದ್ದರು. ಆದರೆ ಪತ್ನಿ ಮಾಜಿ ಉಪಮೇಯರ್ ಶಹತಾಜ್ ಆ ತಲಾಕ್ ಪ್ರಶ್ನಿಸಿ ಕೊರ್ಟ್ ಮೊರೆ ಹೊಗಿದ್ದರು. ಇತ್ತೀಚಿಗೆ ತಲಾಕ್ ವಿರುದ್ಧ ಕೋರ್ಟ್​ನಲ್ಲಿ ಶಹತಾಜ್ ಗೆದ್ದಿದ್ದರು. ಬಳಿಕ ಮೇಡಳ್ಳಿಯ ಗಂಡನ ಮನೆಗೆ ತೆರಳಿದ್ದರು. ಈ ವೇಳೆ ಪೊಲೀಸರು ಆಕೆಗೆ ಸಹಾಯ ಮಾಡೋದಾಗಿ ಹೇಳಿ ನಂತರ ದಬ್ಬಾಳಿಕೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಕೆ.ಆರ್.ಪುರಂ ಇನ್ಸ್​​ಪೆಕ್ಟರ್, ಮಹಿಳಾ ಸಬ್ ಇನ್ಸ್​​ಪೆಕ್ಟರ್ ವಿರುದ್ಧ ಈ ಆರೋಪ ಕೇಳಿಬಂದಿದೆ. 15 ನಿಮಿಷದ ಫೇಸ್​​ಬುಕ್ ಲೈವ್ ವಿಡಿಯೋ ಆರೋಪದಲ್ಲಿ ತನಗಾದ ಅನ್ಯಾಯದ ವಿರುದ್ಧ ನ್ಯಾಯ ನೀಡುವಂತೆ ಮಾಜಿ ಉಪಮೇಯರ್ ಶಹತಾಜ್ ಕೋರಿದ್ದಾರೆ.

RELATED ARTICLES

Related Articles

TRENDING ARTICLES