ಬೆಂಗಳೂರು: ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಸಮೀಪದ ಹುಲ್ಲಹಳ್ಳಿಗೆ ಇಂದು ವಿದೇಶಾಂಗ ಸಚಿವ ಜಯಶಂಕರ್ ಭೇಟಿ ನೀಡಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ಸಮೀಪದಲ್ಲಿ ಸರ್ಕಾರಿ ಅಧಿಕಾರಿಗಳ ಜೊತೆ ಮಾತುಕತೆ ಸಭೆಯನ್ನು ಏರ್ಪಾಡು ಮಾಡಲಾಗಿತ್ತು. ಈ ಸಭೆಯ ನಂತರ ಉಲ್ಲಹಳ್ಳಿಯ ಬಿಜೆಪಿ ಆಕಾಂಕ್ಷಿ ಅಭ್ಯರ್ಥಿಯಾದ ಶ್ರೀನಿವಾಸ್ ಅವರ ಮನೆಗೆ ಭೇಟಿ ನೀಡಿದ ಕೇಂದ್ರ ಸಚಿವ ಆನೇಕಲ್ ಹಾಗೂ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮುಖಂಡರ ಜೊತೆ ಮಾತುಕತೆ ನಡೆಸಿದ್ದಾರೆ.
ಮಾಧ್ಯಮಗಳಿಗೆ ಮಾತನಾಡಿದ ಕೇಂದ್ರ ಸಚಿವ ಎಸ್ ಜಯಶಂಕರ್ ಇಡೀ ಪ್ರಪಂಚ ಸೇರಿದಂತೆ ಭಾರತದಲ್ಲಿ ಸಹ ನಾನು ಸುತ್ತಾಟ ನಡೆಸುತ್ತಿದ್ದೇನೆ ಎಲ್ಲಾ ವಿಚಾರಗಳನ್ನು ತಿಳಿದು ಎಲ್ಲರಿಗೂ ವಿಚಾರ ವಿನಿಮಯವನ್ನು ಮಾಡುತ್ತಿದ್ದೇನೆ ಮೋದಿ ಸರ್ಕಾರದ್ದು ಎರಡು ಪ್ರಮುಖ ಧ್ಯೇಯಗಳು ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಎಲ್ಲೂ ಸಹ ನಿಲ್ಲುವುದಿಲ್ಲ ಜೊತೆಗೆ ಸಾಮಾಜಿಕ ನ್ಯಾಯ ಹಾಗೂ ಆರ್ಥಿಕ ಭದ್ರತೆ ಕುರಿತು ಎಲ್ಲೆಡೆ ಜಾಗೃತಿಯನ್ನು ಮೂಡಿಸುವುದು ಪ್ರಮುಖ ಉದ್ದೇಶವಾಗಿದೆ.
ಇದನ್ನು ದೇಶದಾದ್ಯಂತ ಮಾಡುತ್ತಿದ್ದೇವೆ ಜೊತೆಗೆ ಒಬ್ಬ ಕಾರ್ಯಕರ್ತನ ಮನೆಯಲ್ಲಿ ಕಾಲ ಕಳೆದಿದ್ದು ನಮಗೆ ಸಾಕಷ್ಟು ಖುಷಿ ತಂದಿದೆ ಎಂದು ಕೇಂದ್ರ ಸಚಿವ ಜಯಶಂಕರ್ ತಿಳಿಸಿದ್ದಾರೆ