Sunday, January 19, 2025

ಸೋನಿಯಾ ಗಾಂಧಿಗೆ ಎರಡನೇ ಬಾರಿಗೆ ಕೋವಿಡ್ ಪಾಸಿಟಿವ್.!

ನವದೆಹಲಿ: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಎರಡು ತಿಂಗಳ ನಂತರ ಮತ್ತೊಮ್ಮೆ ಕೊರೊನಾ ಧೃಢಪಟ್ಟಿದೆ.

ನ್ಯಾಷನಲ್ ಹೆರಾಲ್ಡ್ ನ ಅಕ್ರಮ ಹಣ ವರ್ಗಾವಣೆಯಲ್ಲಿ ಸೋನಿಯಾ ಗಾಂಧಿ ಅವರನ್ನ ವಿಚಾರಣೆಗೆ ಜೂನ್‌ನಲ್ಲಿ ನೋಟಿಸ್ ನೀಡಿತ್ತು. ಈ ವೇಳೆ ಸೋನಿಯಾ ಗಾಂಧಿಗೆ ಅವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈಗ ಮತ್ತೊಮ್ಮೆ ಕೊರೊನಾ ಒಕ್ಕರಿಸಿದೆ ಎಂದು ಸಂಸದ ಜೈರಾಮ್ ರಮೇಶ್ ಅವರು ಟ್ವೀಟ್ ಮಾಡಿದ್ದಾರೆ.

ಸದ್ಯ ಅವರ ಆರೋಗ್ಯವಾಗಿದ್ದು, ಪ್ರೋಟೋಕಾಲ್‌ಗಳ ಪ್ರಕಾರ ಅವರು ಪ್ರತ್ಯೇಕವಾಗಿ ಇದ್ದಾರೆ. ಸೋನಿಯಾ ಗಾಂಧಿ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಟ್ವೀಟ್ ಮಾಡಿದೆ.

RELATED ARTICLES

Related Articles

TRENDING ARTICLES