Wednesday, January 22, 2025

ಡೊಳ್ಳು, ವಾದ್ಯಗಳ ಸಮ್ಮುಖದಲ್ಲಿ ಬೆಳ್ಳಿ ಕಾಲುಂಗುರ ಆರಂಭ

ಮೂವತ್ತು ವರ್ಷಗಳ ಹಿಂದೆ ಸ್ಯಾಂಡಲ್​ವುಡ್​​ ಸಿನಿರಸಿಕರ ಹೃದಯ ಗೆದ್ದಿದ್ದ ಬೆಳ್ಳಿ ಕಾಲುಂಗುರ ಹೊಸ ಅವತಾರದಲ್ಲಿ ಬರ್ತಿದೆ. ಅಂದು ನಟಿ ಮಾಲಾಶ್ರೀ ಹರಿಸಿದ ಮಿಂಚನ್ನು ದೊಡ್ಮನೆಯ ಕುಡಿ ಧನ್ಯಾ ರಾಮ್​ಕುಮಾರ್​ ರಿಪೀಟ್ ಮಾಡ್ತಿದ್ದಾರೆ. ಸಿನಿಪ್ರಿಯರ ಮೆಚ್ಚಿನ ಸಿನಿಮಾ ಮತ್ತೆ ಬರ್ತಿದೆ ಅನ್ನೋ ಸುದ್ದಿ ಕೇಳಿ ಸಿನಿಪ್ರಿಯರು ಥ್ರಿಲ್ ಆಗಿದ್ದಾರೆ.

  • ಅಣ್ಣಾವ್ರ ಮೊಮ್ಮಗಳಿಗೆ ‘ಬೆಳ್ಳಿ ಕಾಲುಂಗುರ’ದ ಕೊಡುಗೆ
  • ಧನ್ಯಾ ಚಿತ್ರಕ್ಕೆ ಕ್ಲಾಪ್​ ​ಮಾಡಿದ ಮಾಜಿ CM ಸಿದ್ಧರಾಮಯ್ಯ ​​

1992ರಲ್ಲಿ ರಿಲೀಸ್​ ಆಗಿದ್ದ ಮಾಲಾಶ್ರೀ, ಸುನೀಲ್​ ಕಾಂಬಿನೇಷನ್​ ಸಿನಿಮಾ ಬೆಳ್ಳಿ ಕಾಲುಂಗುರ. ಈ ಹಿಟ್​ ಜೋಡಿಯ ಸಿನಿಮಾ ನೋಡಿದ ಪ್ರೇಕ್ಷಕ ಭಾವಪರವಶನಾಗಿ ಬಿಕ್ಕಿ ಬಿಕ್ಕಿ ಅತ್ತಿದ್ದ, ಚಿತ್ರ ದೊಡ್ಡಮಟ್ಟದ ಸಕ್ಸಸ್ ಕಂಡಿತ್ತು. ಇದೀಗ ಇದೇ ಟೈಟಲ್​​ನಲ್ಲಿ ಹೊಸ ಸಿನಿಮಾ ಸೆಟ್ಟೇರಿದೆ. ಈ ಮೂಲಕ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿರುವ ಬೆಳ್ಳಿ ಕಾಲುಂಗುರ ನ್ಯೂ ವರ್ಷನ್​ ಅಭಿಮಾನಿಗಳಿಗೆ ಖುಷಿ ತಂದಿದೆ.

ಹೆಚ್​. ವಾಸು ನಿರ್ದೆಶನ, ಹಾಗೂ ಸಾ.ರಾ.ಗೋವಿಂದು ನಿರ್ಮಾಣದಲ್ಲಿ ಸಿನಿಮಾ ಮುಹೂರ್ತ ಅದ್ಧೂರಿಯಾಗಿ ನೆರವೇರಿದೆ. ವಿಶೇಷ ಅಂದ್ರೆ, ಮಾಲಾಶ್ರೀ ಅಭಿನಯದ ಬೆಳ್ಳಿ ಕಾಲುಂಗುರ ಚಿತ್ರಕ್ಕೂ ಸಾ.ರಾ ಗೋವಿಂದು ಬಂಡವಾಳ ಹೂಡಿದ್ದರು. ಇದೀಗ ಧನ್ಯಾ ರಾಮ್​​ಕುಮಾರ್​​, ಸಮರ್ಥ್​​​ ಅಭಿನಯದ ಬೆಳ್ಳಿ ಕಾಲುಂಗುರ ಚಿತ್ರದ ಮುಹೂರ್ತ ಸ್ಯಾಂಡಲ್​​ವುಡ್​ ಕಲಾವಿದರ ಸಮ್ಮುಖದಲ್ಲಿ ಕಂಠೀರವ ಸ್ಟುಡೀಯೋದಲ್ಲಿ ನೆರವೇರಿತು. ಮಾಜಿ ಸಿಎಂ​ ಸಿದ್ಧರಾಮಯ್ಯ ಕ್ಲಾಪ್​ ಮಾಡುವ ಮೂಲಕ ಸಿನಿಮಾಗೆ ಅದ್ಧೂರಿ ಚಾಲನೆ ನೀಡಿದ್ರು.

  • ಪೋಸ್ಟರ್​​ ರಿಲೀಸ್​ ಮಾಡಿದ ಅಶ್ವಿನಿ ಪುನೀತ್​ ರಾಜ್​​ಕುಮಾರ್​​

ದೊಡ್ಮನೆಯ ಕುಡಿ ಧನ್ಯಾ ರಾಮ್​ಕುಮಾರ್​​​ ನಿನ್ನ ಸನಿಹಕೆ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡಿದ್ರು. ಇದೀಗ ಬೆಳ್ಳಿ ಕಾಲುಂಗುರದ ಮೂಲಕ ಮಿಂಚು ಹರಿಸೋಕೆ ಸಜ್ಜಾಗಿದ್ದಾರೆ. ಡೊಳ್ಳು, ವಾದ್ಯಗಳ ಮೂಲಕ ನಡೆದ ಮುಹೂರ್ತದಲ್ಲಿ ಅಶ್ವಿನಿ ಪುನೀತ್​ ರಾಜ್​​ಕುಮಾರ್​​ ಪೋಸ್ಟರ್​ ಲಾಂಚ್​ ಮಾಡಿದ್ರೆ, ರಾಘವೇಂದ್ರ ರಾಜ್​​ಕುಮಾರ್​​ ಕ್ಯಾಮರಾ ಸ್ವಿಚ್​ ಆನ್​ ಮಾಡಿ ಶುಭ ಹಾರೈಸಿದ್ರು.

ಧನ್ಯಾ ರಾಜ್ ಕುಮಾರ್ ಮನೆತನದ ಕುಡಿ ರಾಜ್​​​ಕುಮಾರ್ ಮೊಮ್ಮಗಗಳು. ರಾಜ್​​ಕುಮಾರ್ ಅವರ ರಕ್ತದಲ್ಲೇ ಕಲೆ ಇದೆ. ರಾಜ್ ಕುಮಾರ್ ಈ ದೇಶ ಕಂಡ ಅಪ್ರತಿಮ ನಟರು. ಅವರ ಮೊಮ್ಮಗಳು ಈ ಸಿನಿಮಾದಲ್ಲಿ ನಟಿಸ್ತಿದ್ದಾರೆ ಅವರಿಗೆ ಯಶಸ್ಸು ಸಿಗಲಿ ಎಂದು ಸಿದ್ಧರಾಮಯ್ಯ ಶುಭ ಕೋರಿದ್ರು.

ಸಾ.ರಾ ಗೋವಿಂದು , ಹೆಚ್​ ವಾಸು ಅವ್ರ ಜತೆ ಕೆಲಸ ಮಾಡ್ತಾ ಇರೋದು ಖುಷಿ ಇದೆ. ಇದು ಟ್ರಯಾಂಗಲ್​ ಲವ್​ ಸ್ಟೋರಿ. ಮನೆಯವ್ರು ಇಷ್ಟ ಪಟ್ಟರು. ಇನ್ನೂ ಹೆಚ್ಚು ಹೇಳಲ್ಲ ಎಂದ್ರು ಧನ್ಯಾ ರಾಮ್​​ಕುಮಾರ್​​.

ಸಿನಿಮಾಗೆ ಭರ್ಜರಿ ಕಿಕ್​ಸ್ಟಾರ್ಟ್​​ ಅಂತೂ ಸಿಕ್ಕಿದೆ. ಜತೆಗೆ ಗುರುಕಿರಣ್​​ ಮ್ಯೂಸಿಕ್​ ಚಿತ್ರಕ್ಕೆ ಪ್ಲಸ್​ ಆಗಿದೆ. ಸಿನಿಮಾದಲ್ಲಿ ಯಾರೆಲ್ಲಾ ನಟಿಸ್ತಾರೆ? ಯಾವಾಗ ತೆರೆಗೆ ಬರಲಿದೆ ಅನ್ನೋದು ಸದ್ಯದಲ್ಲೇ ಗೊತ್ತಾಗಲಿದೆ. ಎನಿವೇ ಬೆಳ್ಳಿ ಕಾಲುಂಗರ ಸಕ್ಸಸ್​​​​ ರಿಪೀಟ್​ ಆಗಲಿ ಎಂದು ಪವರ್​ ಟಿವಿ ಕಡೆಯಿಂದ ಶುಭ ಕೋರೋಣ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES