Sunday, May 19, 2024

ರಾಜ್ಯಗಳಿಗೆ ಕೊವಿಡ್‌ ಮಾರ್ಗಸೂಚಿ ಕೊಟ್ಟ ಕೇಂದ್ರ ಸರ್ಕಾರ

ಬೆಂಗಳೂರು : ಇಡಿ ವಿಶ್ವವನ್ನೇ ತಲ್ಲಣಗೊಳಿಸಿದ್ದ ಕೊರೋನಾ ವೈರಸ್‌ ಇದೀಗ ಅಷ್ಟೇನು ಕಾಟ ಕೊಡ್ತಿಲ್ಲ. ಆದ್ರೆ, ರೂಪಾಂತರಿಗಳು ಮಾತ್ರ ಟೆನ್ಷನ್ ಕೊಡ್ತಾನೆ ಬಂದಿವೆ. ಸದ್ಯ ಈ ವರ್ಷವಾದ್ರೂ ಸ್ವಾತಂತ್ರ್ಯೋತ್ಸವ ಆಚರಣೆಯನ್ನು ಅದ್ದೂರಿಯಾಗಿ ಮಾಡಲು ಕೇಂದ್ರ ಸರ್ಕಾರ ಭರ್ಜರಿ ಸಿದ್ದತೆ ನಡೆಸಿದೆ. ಆದ್ರೂ, ನಮ್ಮ ಎಚ್ಚರಿಕೆ ತಪ್ಪದಂತೆ ನೋಡಿಕೊಳ್ಳಿ ಅನ್ನೋದು ಕೇಂದ್ರ ಸರ್ಕಾರದ ಮನವಿಯಾಗಿದೆ.

ಹೌದು, ದೇಶವು ಪ್ರತಿದಿನ ಸರಾಸರಿ 15,000 ಕ್ಕೂ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳನ್ನು ದಾಖಲಿಸುತ್ತಲೇ ಇರುವುದರಿಂದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಪ್ರಮುಖ ಸೂಚನೆಗಳನ್ನು ನೀಡಿದೆ. ಸ್ವಾತಂತ್ರ್ಯ ದಿನಾಚರಣೆಗೆ ಯಾವುದೇ ದೊಡ್ಡ ಕಾರ್ಯಕ್ರಮಗಳನ್ನು ನಡೆಸದಂತೆ ತಿಳಿಸಿದೆ. ಪ್ರತಿಯೊಬ್ಬರೂ ಕೋವಿಡ್ ಪ್ರೋಟೋಕಾಲ್‌ಗಳನ್ನು ಅನುಸರಿಸಬೇಕು ಎಂದು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ತಿಳಿಸಿದೆ.

ಇನ್ನು, ಕೇಂದ್ರ ಗೃಹ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪ್ರತಿ ಜಿಲ್ಲೆಯ ಪ್ರಮುಖ ಸ್ಥಳದಲ್ಲಿ ‘ಸ್ವಚ್ಛ ಭಾರತ’ ಅಭಿಯಾನವನ್ನು ಕೈಗೊಳ್ಳಲು ಸೂಚಿಸಿದೆ. ಸ್ವಯಂಪ್ರೇರಿತವಾಗಿ ಜನರು ಅದರಲ್ಲಿ ಭಾಗವಹಿಸುವಂತೆ ಹದಿನೈದು ದಿನ ಮತ್ತು ತಿಂಗಳ ಅವಧಿಯ ಅಭಿಯಾನವನ್ನು ಕೈಗೊಳ್ಳಲು ತಿಳಿಸಿದೆ.ಕೋವಿಡ್-19 ಸೋಂಕಿನ ಮುನ್ನೆಚ್ಚರಿಕೆಯಾಗಿ, ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ದೊಡ್ಡ ಸಭೆಗಳನ್ನು ತಪ್ಪಿಸಬೇಕು. ಕೋವಿಡ್ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರು ಅನುಸರಿಸುವುದು ಕಡ್ಡಾಯವಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಇತ್ತ, ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಈ ವರ್ಷ ದೇಶಕ್ಕೆ ಸ್ವಾತಂತ್ರ್ಯ ಬಂದು 75ನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆ ಈ ವರ್ಷವನ್ನು ಸಂಭ್ರಮದಿಂದ ಆಚರಿಸಲು ಹರ್ ಘರ್ ತಿರಂಗ ಅಭಿಯಾನ ಹಮ್ಮಿಕೊಂಡಿದೆ. ಈ ಅಭಿಯಾನವು ಯಶಸ್ವಿ ಮಾಡಲು ಭರದ ಸಿದ್ಧತೆ ನಡೆಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿಕೊಂಡು ಸಾರ್ವಜನಿಕರನ್ನು ಸೇರಲು ಉತ್ತೇಚಿಸುತ್ತಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ತಿರಂಗ ಯಾತ್ರೆಯನ್ನು ಆರಂಭಿಸಲಾಗಿದ್ದು, ಸಾವಿರಾರು ಜನರು ಭಾಗವಹಿಸುತ್ತಿದ್ದಾರೆ.

RELATED ARTICLES

Related Articles

TRENDING ARTICLES