ಹಾಸನ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉದ್ಯೋಗ ನೀಡುವ ಮಹತ್ವಕಾಂಕ್ಷಿ ಯೋಜನೆಯಾದ ಅಗ್ನಿಪಥ್ ಯೋಧರ ನೇಮಕಕ್ಕೆ ಈಗಾಗಲೇ ದೇಶಾದ್ಯಂತ ಆಯ್ಕೆ ಪ್ರಕ್ರಿಯೆಗಳು ಕೂಡಾ ನಡೆಯುತ್ತಿವೆ. ಅದರಂತೆ ರಾಜ್ಯದ ಹಾಸನದಲ್ಲಿಯೂ ಕೂಡಾ ಕಳೆದ ಮೂರು ದಿನಗಳಿಂದ ಆರು ದಿನಗಳ ಅಗ್ನಿಪಥ್ ರ್ಯಾಲಿ ನಡೆಯುತ್ತಿದೆ. ಅಭ್ಯರ್ಥಿಗಳಿಗೆ ಸರಿಯಾದ ವ್ಯವಸ್ಥೆ ಮಾಡದೇ ಇರೋದು ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ಆಗಸ್ಟ್ 10 ರಿಂದ 22 ರ ವರೆಗೂ ಕಾಲ ಹಾಸನದಲ್ಲಿ ಅಗ್ನಿಪಥ್ ರ್ಯಾಲಿ ನಡೆಯುತ್ತಿದೆ. ಆದ್ರೆ ಜಿಲ್ಲಾಡಳಿತ ರಾಜ್ಯದ ಮೂಲೆ ಮೂಲೆಗಳಿಂದ ಬಂದಿರೋ ಅಭ್ಯರ್ಥಿಗಳಿಗೆ ಸರಿಯಾದ ವ್ಯವಸ್ಥೆ ಮಾಡದೇ ಇರೋದು ಭವಿಷ್ಯದ ಯೋಧರ ಇಡೀ ಶಾಪ ಹಾಕಿದ್ದಾರೆ.
ಅಗ್ನಿಪಥ್ ಆಯ್ಕೆಗೆ ಬಂದು ಸರಿಯಾದ ವ್ಯವಸ್ಥೆ ಇಲ್ಲದೇ ಬಿದಿಬದಿ ವಾಸ ಕಲ್ಪಿಸಲಾಗಿದೆ. ದೇಶ ಕಾಯಲು ಆಯ್ಕೆ ಬಯಸಿ ಬಂದ ಯುವಕರ ಸ್ಥಿತಿ ಕಂಡು ಸಾರ್ವಜನಿಕರ ಖಂಡಿಸಿದ್ದಾರೆ.
ಅಭ್ಯರ್ಥಿಗಳು ಸ್ಟೇಡಿಯಂನ ಅಕ್ಕಪಕ್ಕ ರಸ್ತೆ ಬದಿ, ಅಂಗಡಿಮುಂಗಟ್ಟುಗಳ ಮುಂದೆ, ಫುಡ್ ಸ್ಟ್ರೀಟ್ ಸೇರಿದಂತೆ ಅನೇಕ ಕಡೆಗಳಲ್ಲಿ ಅಭ್ಯರ್ಥಿಗಳು ಮಲಗಿದ್ದಾರೆ. ಜಿಲ್ಲಾದ್ಯಂತ ಗಾಳಿ ಸಹಿತ ಮಳೆ ಸುರಿಯುತ್ತಿದ್ದು, ಮಳೆಚಳಿಯ ನಡುವೆಯೂ ರಸ್ತೆ ಬದಿಗಳಲ್ಲಿ ಮಲಗಿಕೊಂಡಿದ್ದಾರೆ. ಅನೇಕ ಮಂದಿ ಹೊದ್ದುಕೊಳ್ಳಲು ಬೆಡ್ ಶೀಟ್ ಗಳಿಲ್ಲದೇ, ಚಳಿಯಲ್ಲಿಯೇ ನಡುಗುತ್ತಾ ಮಲಗಿಕೊಂಡಿದ್ದಾರೆ. ದೇಶ ಕಾಯೋದಕ್ಕೆ ಅಂತಾ ಆಯ್ಕೆ ಬಯಸಿ ಬಂದ ಅಭ್ಯರ್ಥಿಗಳ ಸ್ಥಿತಿಯನ್ನ ಖಂಡಿಸಿದ್ದಾರೆ.