Saturday, May 11, 2024

6 ಕೋಟಿ ಕೊಟ್ಟು ರಾಮೋಜಿ ಫಿಲ್ಮ್ ಸಿಟಿಲಿ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟರು ನಿಲ್ಲದ ಕಿರುಕುಳ.!

ಬೆಂಗಳೂರು: ಪ್ರತಿನಿತ್ಯ ಕುಡಿದ ಮತ್ತಿನಲ್ಲಿ ಪತ್ನಿಗೆ ದೈಹಿಕ ಹಲ್ಲೆ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಜೀವಬೆದರಿಕೆ ಅಡಿ ಪ್ರಕರಣ ದಾಖಲಾಗಿದೆ.

ದಿನ ನಿತ್ಯ ದೈಹಿಕ ಹಲ್ಲೆ ಮಾಡುತ್ತಿದ್ದ ಪತಿ ಸಂದೀಪ್ ಆಗಿದ್ದು, 2021 ರ ಜನವರಿಯಲ್ಲಿ ಹೈದ್ರಾಬಾದ್ ಮೂಲದ ಯುವತಿಯನ್ನ ಸಂದೀಪ್ಮ ಮದುವೆಯಾಗಿದ್ದ. ಸುಮಾರು 6 ಕೋಟಿ ರೂ ಖರ್ಚು ಮಾಡಿ ಕುಟುಂಬಸ್ಥರು ಅದ್ದೂರಿಯಾಗಿ ಮದುವೆ ಮಾಡಿ ಕೊಟ್ಟಿದ್ದರು.

ಸುಮಾರು 4 ಕೆ.ಜಿ ಚಿನ್ನ, 200 ಕೆ.ಜಿ ಬೆಳ್ಳಿ, 55 ಲಕ್ಷದ ಕೂಪರ್ ಕಾರು ಯುವತಿ ಕುಟುಂಬಸ್ಥರು ವರದಕ್ಷಿಣೆ ಕೊಟ್ಟಿದ್ದರು. ಅಲ್ಲದೇ ಹೈದ್ರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಲಿ ಅದ್ದೂರಿಯಾಗಿ ಮದುವೆ ಮಾಡಿದ್ದರು.

ಆದರೆ, ದಿನನಿತ್ಯ ಕುಡಿದು ಪತ್ನಿಗೆ ಸಂದೀಪ್ ದೈಹಿಕ ಹಲ್ಲೆ ಮಾಡುತ್ತಿದ್ದ ಎಂದು ಪತ್ನಿಯಿಂದ ಆರೋಪ ಕೇಳಿಬಂದಿದೆ. ಮನೆಯಲ್ಲಿ ಗೆಳೆಯರ ಜೊತೆ ಡ್ರಗ್ಸ್ ಪಾರ್ಟಿ ಮಾಡಿ ಪತ್ನಿಗೆ ಅಶ್ಲೀಲ ಪದಗಳಲ್ಲಿ ಬೈಯುತ್ತಿದ್ದ. ನಶೆ ಮತ್ತಲ್ಲಿ ಪತ್ನಿಯ ವಿಸರ್ಜನೆ ಮಾಡಿ ವಿಕೃತಿ ಮೆರೆಯುತ್ತಿದ್ದ ಎಂದು ನೊಂದ ಯುವತಿಯು ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಯುವತಿಯ ದೂರಿನನ್ವಯ ಬಸವನಗುಡಿ ಮಹಿಳಾ ಪೊಲೀಸ್​ರು ವರದಕ್ಷಿಣೆ ಕಿರುಕುಳ ಹಾಗೂ ಜೀವಬೆದರಿಕೆ ಅಡಿ ಪ್ರಕರಣ ದಾಖಲು ಮಾಡಿದ್ದಾರೆ.

RELATED ARTICLES

Related Articles

TRENDING ARTICLES