ಮಂಗಳೂರು: ಅಗಸ್ಟ್ 15 ರಂದು 75ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಮಂಗಳೂರಿನ ಮೀನುಗಾರಿಕಾ ದಕ್ಕೆಯಲ್ಲಿ 75 ಬೋಟ್ಗಳು ಸ್ವಾತಂತ್ರ್ಯ ರ‍್ಯಾಲಿ ಹಮ್ಮಿಕೊಳ್ಳಲಾಗಿಯಿತು.
ಜಿಲ್ಲೆಯ ಬಂದರು ದಕ್ಕೆಯಲ್ಲಿ ಬೋಟ್ ರ್ಯಾಲಿಗೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆವಿ ಚಾಲನೆ ನೀಡಿದರು. ಈ ವೇಳೆ ತಿರಂಗಾ ಬಾವುಟ ಕಟ್ಟಿಕೊಂಡು ಬೋಟ್ಗಳು ಅಮೋಘ ಪ್ರದರ್ಶನ ನೀಡಲಾಯಿತು.
ನೇತ್ರಾವತಿ ಸಮುದ್ರ ಸೇರುವ ಜಾಗದಲ್ಲಿ ಬೋಟುಗಳ ರ್ಯಾಲಿ ನಡೆದಿದ್ದು ಮೀನುಗಾರ ಮುಖಂಡರು, ಮೀನು ವ್ಯಾಪಾರಸ್ಥರು ಪಾಲ್ಗೊಂಡಿದ್ದರು. ಮೀನುಗಾರಿಕೆ ನಡೆಸುವ ಬೋಟ್ ಗಳು ಹರ್ ಘರ್ ತಿರಂಗಾ ಯೋಜನೆಯ ಹೆಸರಲ್ಲಿ ಸ್ವಾತಂತ್ರ್ಯದ ಘೋಷಣೆ ಕೂಗುತ್ತಾ ಸಾಗಿದ್ದು ಆಕರ್ಷಕವಾಗಿತ್ತು.