Wednesday, January 8, 2025

ಅಗಸ್ಟ್ 15 ರಂದು ಪೊಲೀಸ್ ಇಲಾಖೆಗೆ ಚಾಲೆಂಜಿಗ್ ಡೇ

ಬೆಂಗಳೂರು : ಆಗಸ್ಟ್ 15 ರಂದು ಬೆಂಗಳೂರಿನಲ್ಲಿ ನಡೆಯಲಿದೆ ಐದು ಮಹತ್ವದ ಕಾರ್ಯಕ್ರಮಗಳು ನಡೆಯಲಿದ್ದು, ಆದರೆ ಪೊಲೀಸ್ ಇಲಾಖೆಗೆ ಚಾಲೆಂಜಿಗ್ ಡೇ ಆಗಿದೆ.

ನಗರದಲ್ಲಿ, ಬಹುಮುಖ್ಯವಾಗಿ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಿದ್ದು, ಈಗಾಗಲೇ ಸಾಕಷ್ಟು ಸಂದಿಗ್ಧತೆ ತಂದಿಟ್ಟಿದೆ. ಈಗಾಗಲೇ ಪೊಲೀಸರು ಈ ಬಗ್ಗೆ ಸಾಕಷ್ಟು ಸಭೆಗಳನ್ನ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮ ಕೆಎಸ್ಆರ್ ರೈಲು ನಿಲ್ದಾಣದಿಂದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದವರೆಗೆ ರ್ಯಾಲಿ ಇದೆ.

ಅದಲ್ಲದೇ, ಈ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನ ಸೇರೋ ನೀರಿಕ್ಷೆ ಇದ್ದು, ಕಾಂಗ್ರೆಸ್ ನಡಿಗೆಯಲ್ಲದೆ ಬಿಜೆಪಿ ಸ್ವಾತಂತ್ರ್ಯ ರ್ಯಾಲಿ ಕಾರ್ಪೊರೇಷನ್ ಸರ್ಕಲ್ ನಿಂದ ಕಂಠೀರವ ಸ್ಟೇಡಿಯಂವರೆಗೆ ಇದೆ. ನಂತರ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ. ಇದಲ್ಲದೆ ಲಾಲ್​​ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮ ಜರುಗಲಿದೆ.

ಇನ್ನು, ಆಗಸ್ಟ್ 15 ರಂದು ಒಂದೇ ದಿನ ನಗರದಲ್ಲಿ ನಡೆಯಲಿದೆ ಐದು ಕಾರ್ಯಕ್ರಮಗಳು ಜರುಗಲಿದ್ದು, ಇದಕ್ಕೆಲ್ಲ ಪೊಲೀಸ್ ಭದ್ರತೆ ನೀಡಬೇಕು. ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಯ ಪೊಲೀಸ್ ಪಡೆಗಳ ನಿಯೋಜನೆಗೆ ಪೊಲೀಸ್ ಅಯುಕ್ತರು ಚಿಂತನೆ ನಡೆಸಿದ್ದು, ಸಾರ್ವಜನಿಕರೆ ಅಂದು ರಸ್ತೆಗೆ ಇಳಿಯಬೇಕದ್ರೆ ಯೋಚನೆ ಮಾಡಿ, ಬೆಂಗಳೂರಿನ ಪ್ರಮುಖ ರಸ್ತೆಗಳು ಟ್ರಾಫಿಕ್ ಜಾಮ್ ಆಗಲಿವೆ.

RELATED ARTICLES

Related Articles

TRENDING ARTICLES