Wednesday, January 22, 2025

ಸಿಗರೇಟ್ ಹೊಗೆ ಬಿಡಬೇಡಿ ಎಂದಿದ್ದಕ್ಕೆ ಹಿಗ್ಗಾಮುಗ್ಗಾ ಥಳಿಸಿದ ಭೂಪ.!

ವಿಜಯಪುರ: ಸಿಗರೇಟ್ ಹೊಗೆ ಬಿಡಬೇಡಿ ಎಂದು ಹೇಳಿದ್ದಕ್ಕೆ ರಾಡ್​ನಿಂದ ಮಾರಣಾಂತಿಕ ಹಲ್ಲೆಗೈದ ಘಟನೆ ಜಿಲ್ಲೆಯ ಕನ್ನೂರು ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಮಲ್ಲಪ್ಪ ಬೆಳ್ಳುಂಡಗಿ ಎಂಬುವವನಿಗೆ ಆರೋಪಿ ಅಕ್ಷಯ ಹಲ್ಲೆಗೈದಿದ್ದಾನೆ ಎಂದು ತಿಳಿದು ಬಂದಿದ್ದು, ಹಲ್ಲೆಯ ವಿಡಿಯೋ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಅಕ್ಷಯ ಸಿಗರೇಟ್ ಸೇದಿ ಹೊಗೆ ಬಿಡುತ್ತಿದ್ದ ಈ ವೇಳೆ ಮಲ್ಲಪ್ಪ ಪ್ರಶ್ನಿಸಿದ್ದ, ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ವಾಗ್ವಾದ ವಿಕೋಪಕ್ಕೆ ಹೋಗಿ ಮಲ್ಲಪ್ಪನಿಗೆ ಅಕ್ಷಯ ಹಿಗ್ಗಾಮುಗ್ಗಾ ಹಲ್ಲೆ ಮಾಡಿದ್ದಾನೆ.

ಮಲ್ಲಪ್ಪನಿಗೆ ಆಗ ಅಕ್ಷಯ ನಿನ್ನನ್ನು ನೋಡಿ ಕೊಳ್ಳುವೆ ಎಂದು ಬೆದರಿಕೆ ಹಾಕಿದ್ದ. ಬಳಿಕ ಮಾರನೇ ದಿ‌ನ ಅಗಸ್ಟ 3 ರಂದು ಬೆಳ್ಳಂ ಬೆಳಿಗ್ಗೆ ಪಾನ್ ಶಾಪ್ ಒಂದರ ಮುಂದೆ ನಿಂತಾಗ ಬಂದು ಹಲ್ಲೆ ಮಾಡಿದ್ದಾನೆ. ಒಮ್ಮಿಂದೊಮ್ಮಲೆ ಹಲ್ಲೆ ಮಾಡುವದನ್ನು ಕಂಡು ಅಲ್ಲಿನ ಜನರು ಮೂಕ ವಿಸ್ಮಿತರಾಗಿ ನಿಂತಿದ್ದರು.

ಹಲ್ಲೆಗೈದು ಬಳಿಕ ಆರೋಪಿಗಳಾದ ಅಕ್ಷಯ, ಸುನೀಲ್‌, ಪ್ರಕಾಶ ಬೈಕ್ ಮೇಲೆ ಪರಾರಿಯಾಗಿದ್ದಾರೆ. ಈ ಬಗ್ಗೆ ಈಗ ಮೂವರ ವಿರುದ್ದ ವಿಜಯಪುರ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.

RELATED ARTICLES

Related Articles

TRENDING ARTICLES