Monday, December 23, 2024

ಪಕ್ಷದ ರಾಜ್ಯಾಧ್ಯಕ್ಷರ ಹುದ್ದೆಗೆ ಆಕಾಂಕ್ಷಿ ನಾನಲ್ಲ : ಶ್ರೀರಾಮುಲು

ಬಳ್ಳಾರಿ : ಕಾಂಗ್ರೆಸ್​​ನವರಿಗೆ ಮತಿಭ್ರಮಣೆಯಾಗಿ ತಲೆಕೆಡಿಸಿಕೊಂಡಿದ್ದಾರೆ ಎಂದು ಬಳ್ಳಾರಿಯಲ್ಲಿ ಸಾರಿಗೆ ಸಚಿವ ಬಿ,ಶ್ರೀರಾಮುಲು ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​​​ನವರಿಗೆ ಮತಿಭ್ರಮಣೆಯಾಗಿ ತಲೆಕೆಡಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಅನ್ನೋ ಹತಾಶೆ ಇದೆ. ನಮ್ಮ ಮುಖ್ಯಮಂತ್ರಿ ಬದಲಾವಣೆ ಆಗ್ತಾರೆ ಇವರು ಯಾಕೆ ಟ್ವೀಟ್ ಮಾಡ್ತಾರೆ. ಜನರಲ್ಲಿ ಗೊಂದಲ ಮಾಡುವುದನ್ನ ಬಿಡಿ. ಜನರ ಬಳಿ ಹೋಗಿ ಜನರ ವಿಶ್ವಾಸಗಳಿಸುವ ಶಕ್ತಿ ಇವರಿಗಿಲ್ಲ. ಎಂತಹದ್ದೇ ಪರಿಸ್ಥಿತಿಯಲ್ಲೂ ಮುಖ್ಯಮಂತ್ರಿ ಬದಲಾವಣೆ ಆಗುವುದಿಲ್ಲ ಎಂದರು.

ಇನ್ನು, ಪ್ರತಿ ಮೂರು ವರ್ಷಕ್ಕೊಮ್ಮೆ ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆ ಆಗುತ್ತದೆ. ಅದೊಂದು ರೊಟಿನ್ ಪ್ರಕ್ರಿಯೆ ಅದರಲ್ಲಿ ವಿಶೇಷ ಇಲ್ಲ. ಪಕ್ಷದ ರಾಜ್ಯಾಧ್ಯಕ್ಷರ ಹುದ್ದೆಗೆ ಆಕಾಂಕ್ಷಿ ನಾನಲ್ಲ. ಮೊದಲಿನಿಂದಲೂ ಹೋರಾಟದ ಮೂಲಕ ರಾಜಕೀಯಕ್ಕೆ ಬಂದಿದ್ದೇನೆ. ಪಕ್ಷ ಜವಾಬ್ದಾರಿ ವಹಿಸಿದ್ರೆ ನಿಭಾಯಿಸುವೆ. 2018 ರ ಚುನಾವಣೆಯಲ್ಲಿ ಸಿಎಂ ಅಭ್ಯರ್ಥಿ ಆಗಬಹುದು ಅನ್ನೋ ಕಾರಣಕ್ಕೆ ಡಾ,ಜಿ ಪರಮೇಶ್ವರ್ ಅವರನ್ನ ಸಿದ್ದರಾಮಯ್ಯ ಸೋಲಿಸಿದ್ದಾರೆ. ಈಗ 2023 ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನ ಡಿಕೆಶಿ ಸೋಲಿಸುತ್ತಾರೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES