Sunday, January 19, 2025

ಧೀರೇನ್​ಗೆ ಅಪ್ಪು ಮಾಮನ ಬದಲು ಅಶ್ವಿನಿ ಅತ್ತೆ ಸಾಥ್..!

ನಟಸಾರ್ವಭೌಮ ಡಾ. ರಾಜ್​ಕುಮಾರ್ ಕುಟುಂಬದಿಂದ ಮತ್ತೊಬ್ಬ ನಾಯಕನಟ ಚಂದನವನಕ್ಕೆ ಕಾಲಿಡ್ತಿದ್ದಾನೆ. ಅಪ್ಪು ಇನ್ನಿಲ್ಲ ಅನ್ನೋ ಕೊರಗನ್ನ ನೀಗಿಸಿರೋ ಅಶ್ವಿನಿ ಪುನೀತ್ ರಾಜ್​ಕುಮಾರ್, ದೊಡ್ಮನೆ ಧೀರೇನ್​ಗಾಗಿ ಮೊದಲ ಬಾರಿ ಮೌನ ಮುರಿದಿದ್ದಾರೆ. ಇಷ್ಟಕ್ಕೂ ದೊಡ್ಮನೆ ಕುಡಿ ಹೇಳಿದ್ದೇನು..? ಸಿನಿಮಾ ಯಾವಾಗ ರಿಲೀಸ್ ಅನ್ನೋದ್ರ ಇಂಟರೆಸ್ಟಿಂಗ್ ಸ್ಟೋರಿ ನೀವೇ ಓದಿ.

  • ದೊಡ್ಮನೆ ಕುಡಿಗಾಗಿ ಮೌನ ಮುರಿದ ದೊಡ್ಮನೆ ಸೊಸೆ ಅಶ್ವಿನಿ
  • ಆ- 26ಕ್ಕೆ ಟಗರು ಪುಟ್ಟಿ ಜೊತೆ ಧೀರೇನ್ ಆನ್​ಸ್ಕ್ರೀನ್ ಧಮಾಕ
  • ರಾಜರತ್ನ ಅಪ್ಪು ಅವ್ರ ಶುಭನುಡಿ ನೆನೆದ ಅಣ್ಣಾವ್ರ ಮೊಮ್ಮಗ

ಯೆಸ್.. ಇದು ಇದೇ ಆಗಸ್ಟ್ 26ಕ್ಕೆ ತೆರೆಗಪ್ಪಳಿಸೋಕೆ ಸಜ್ಜಾಗಿರೋ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳ ಸಾಲಿನಲ್ಲಿರೋ ಶಿವ 143 ಚಿತ್ರದ ಹೀರೋ ಇಂಟ್ರಡಕ್ಷನ್ ಟೀಸರ್. ಇದನ್ನ ದೊಡ್ಮನೆಯ ಸೊಸೆ ಅಶ್ವಿನಿ ಪುನೀತ್ ರಾಜ್​ಕುಮಾರ್ ಲಾಂಚ್ ಮಾಡಿರೋದಲ್ಲದೆ, ಇದೇ ಮೊದಲ ಬಾರಿ ಬಹಿರಂಗವಾಗಿ ಮಾತನಾಡೋ ಮೂಲಕ ಅಚ್ಚರಿ ಮೂಡಿಸಿದ್ದಾರೆ. ದೊಡ್ಮನೆಯ ನ್ಯೂ ಜನರೇಷನ್ ಕುಡಿಗಾಗಿ ಮೌನ ಮುರಿದು, ತುಂಬು ಹೃದಯದಿಂದ ಹರಿಸಿದ್ದಾರೆ ಅಶ್ವಿನಿ ಪುನೀತ್ ರಾಜ್​ಕುಮಾರ್.

ಜಯಣ್ಣ ಫಿಲಂಸ್ ಬ್ಯಾನರ್​ನಡಿ ದಿಲ್​ವಾಲಾ ಅನಿಲ್ ನಿರ್ದೇಶನದಲ್ಲಿ ತಯಾರಾಗಿರೋ ಈ ಚಿತ್ರ ಸ್ಯಾಂಪಲ್ಸ್​ನಿಂದ ಭರವಸೆ ಮೂಡಿಸಿದೆ. ಅಣ್ಣಾವ್ರ ಮುದ್ದಿನ ಮೊಮ್ಮಗ ಹಾಗೂ ರಾಮ್​ಕುಮಾರ್- ಪೂರ್ಣಿಮಾ ದಂಪತಿಯ ಕುಡಿ ಧೀರೇನ್, ನಾಯಕನಟನಾಗಿ ಇಂಡಸ್ಟ್ರಿಗೆ ಕಾಲಿಡ್ತಿದ್ದಾರೆ. ಧೀರೇನ್ ಜೊತೆ ಟಗರು ಪುಟ್ಟಿ ಮಾನ್ವಿತಾ ಸಖತ್ ಬೋಲ್ಡ್ ರೋಲ್ ಮಾಡಿದ್ದು, ಇವ್ರ ಕೆಮಿಸ್ಟ್ರಿ ಯೂತ್ಸ್​ನ ಬಡಿದೆಬ್ಬಿಸೋ ರೇಂಜ್​ಗಿದೆ.

ಪುನೀತ್ ರಾಜ್​ಕುಮಾರ್ ಅವ್ರು ಒಮ್ಮೆ ಮೈಸೂರಿನಲ್ಲಿ ರವಿವರ್ಮಾ ಮಾಸ್ಟರ್ ಕಂಪೋಸ್ ಮಾಡಿದ್ದ ಸ್ಟಂಟ್ ಸೀಕ್ವೆನ್ಸ್​ನ ನೋಡಿ, ಧೀರೇನ್ ಕಣ್ಣು ಹಾಗೂ ಹಾರ್ಡ್​ ವರ್ಕ್​ ಬಗ್ಗೆ ಹೊಗಳಿದ್ದರಂತೆ. ಅವ್ರ ಆ ಒಂದು ಶುಭನುಡಿ ನನಗೆ ಸಾಕಷ್ಟು ಎನರ್ಜಿ ನೀಡಿದೆ ಅಂತ ಚಿತ್ರತಂಡದ ಜೊತೆ ಸಂಭ್ರಮ ಹಂಚಿಕೊಂಡ್ರು ಧೀರೇನ್.

ಫಿಸಿಕಲ್ ಟ್ರಾನ್ಸ್​ಫಾರ್ಮೆಷನ್ ಜೊತೆ ಚೊಚ್ಚಲ ಚಿತ್ರದಲ್ಲೇ ಚಾಲೆಂಜಿಂಗ್ ರೋಲ್ ಮಾಡಿರೋ ಧೀರೇನ್, ಒಬ್ಬ ಕಲಾವಿದನಾಗಿ ಪ್ರಯೋಗಾತ್ಮಕ ಪಾತ್ರಗಳನ್ನ ಮಾಡಬೇಕು ಅಂತ ಪಾಸಿಟಿವ್ ಆಗಿ ಮಾತನಾಡಿದ್ರು. ಪವರ್ ಟಿವಿ ಜೊತೆ ಮಾತಿಗಿಳಿದ ಧೀರೇನ್, ಸಾಕಷ್ಟು ಇನ್​ಸೈಡ್ ಸ್ಟೋರೀಸ್​​ನ ಮುಕ್ತವಾಗಿ ಹೊರಹಾಕಿದ್ರು.

ಒಟ್ಟಾರೆ ಇದೇ ತಿಂಗಳಾಂತ್ಯಕ್ಕೆ ತೆರೆಗೆ ಬರ್ತಿರೋ ಶಿವ 143, ಪಕ್ಕದ ತೆಲುಗಿನ ಬ್ಲಾಕ್ ಬಸ್ಟರ್ ಹಿಟ್ ಚಿತ್ರ ಆರ್​ಎಕ್ಸ್​​100 ರಿಮೇಕ್ ಆದ್ರೂ, ಇಲ್ಲಿನ ಜನರ ಟೇಸ್ಟ್​ಗೆ ತಕ್ಕನಾಗಿ ತಯಾರಾಗಿದೆ. ಯೂತ್ಸ್​ಗೆ ಹಾಟ್​​​ ಫೇವರಿಟ್ ಆಗಲಿರೋ ಈ ನೈಜ ಘಟನೆ ಆಧಾರಿತ ಕಥೆ, ಫ್ಯಾಮಿಲಿ ಆಡಿಯೆನ್ಸ್​ಗೂ ಇಷ್ಟವಾಗಲಿದೆಯಂತೆ. ಕನ್ನಡ ಕಲಾಭಿಮಾನಿಗಳ ಪ್ರೀತಿ, ಪ್ರೋತ್ಸಾಹ ಧೀರೇನ್ ಮೇಲಿರಲಿ ಅಂತ ನಾವೂ ಹಾರೈಸೋಣ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES