ಹಾಸನ : ಗುತ್ತಿಗೆದಾರನ ಅವೈಜ್ಞಾನಿಕ ಕಾಮಗಾರಿಯಿಂದ ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿತವಾದ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ದೋಣಿಗಾಲ್ ಸಮೀಪ ನಡೆದಿದೆ.
ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ನಡೆಯುತ್ತಿದ್ದ ಕಾಮಗಾರಿಗಾಗಿ ಸಾವಿರಾರು ಲೋಡ್ ಮಣ್ಣನ್ನು ಹೇರಲಾಗಿತ್ತು. ಭಾರೀ ಮಳೆಗೆ ಕೊಚ್ಚಿಹೋದ ಸಾವಿರಾರು ಲೋಡ್ ಮಣ್ಣು ಮಾಡಿದ್ದು, ಮಣ್ಣು ಕೊಚ್ಚಿಹೋಗಿ ಕೆರೆಯಂತಾಗಿ ಅಕ್ಕಪಕ್ಕದ ಜಮೀನುಗಳು ಸುಮಾರು 50 ಎಕರೆಗೂ ಅಧಿಕ ಕೃಷಿ ಭೂಮಿ ಹಾಳಾಗಿದೆ.
ಅದಲ್ಲದೇ, ಕಾಫಿ, ಭತ್ತ, ಅಡಿಕೆ ಮರಗಿಡಗಳು ಸಂಪೂರ್ಣ ಹಾನಿಗೊಂಡಿದ್ದು, ಮಣ್ಣು ಸಮೇತ ನೀರು ನುಗ್ಗಿ ಬಂದಿರೊದದ್ರಿಂದ ಬೆಳೆಗಳೆಲ್ಲಾ ಸಂಪೂರ್ಣ ಹಾಳಾಗಿದೆ. ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು, ರಾಜ್ ಕಮಾಲ್ ಕಂಪನಿಗೆ ಕಾಮಗಾರಿಯ ಗುತ್ತಿಗೆ ನೀಡಲಾಗಿತ್ತು. ಮಳೆನೀರು ಹೋಗಲು ತಳಭಾಗದಲ್ಲಿ ಪೈಪ್ ಅಳವಡಿಸದೇ ರಸ್ತೆ ನಿರ್ಮಾಣಕ್ಕೆ ಮಣ್ಣು ಹೇರಿದ್ದ ಗುತ್ತಿಗೆದಾರ ಸಾವಿರಾರು ಲೋಡ್ ಮಣ್ಣನ್ನು ಬೇರೆಡೆಯಿಂದ ತಂದು ರಸ್ತೆ ನಿರ್ಮಾಣ ಮಾಡಲಾಗುತ್ತಿತ್ತು. ಇದೇ ಜಾಗದಲ್ಲಿ ಭೂಕುಸಿತವಾಗಿ ಹೆದ್ದಾರಿ ಬಂದ್ ಆಗಿತ್ತು. ಆದರೆ ಇದೀಗ ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿದಿರೋದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.