Sunday, December 22, 2024

ರಕ್ಷಾ ಬಂಧನದಲ್ಲಿರೋ ರಾಕಿಭಾಯ್ ಸಂದೇಶವೇನು..?

ನ್ಯಾಷನಲ್​​​ ಸ್ಟಾರ್​ ಯಶ್​ಗೆ​ ರಾಕಿ ಹಬ್ಬ ಅಂದ್ರೆ ತುಂಬಾ ಸ್ಪೆಷಲ್​​​​. ಪ್ರಪಂಚದ ಯಾವ ಮೂಲೆಯಲ್ಲಿದ್ರೂ ರಕ್ಷಾ ಬಂಧನ ಹಬ್ಬ ಮಾತ್ರ ಮಿಸ್ ಮಾಡ್ಕೊಳಲ್ಲ. ಪ್ರತಿ ಬಾರಿಯೂ ಮುದ್ದಿನ ತಂಗಿಯ ಕೈಯಲ್ಲಿ ರಾಕಿ ಕಟ್ಟಿಸಿಕೊಳ್ಳೋ ಮಾಸ್ಟರ್​ ಪೀಸ್,​ ಈ ಬಾರಿಯೂ ಈ ಅದ್ಭುತ ಕ್ಷಣಗಳಿಗೆ ಸಾಕ್ಷಿ ಆದ್ರು. ಯೆಸ್​​.. ಹೇಗಿದೆ, ರಾಕಿಭಾಯ್ ರಾಕಿಹಬ್ಬ ಅಂತೀರಾ..? ನೀವೇ ಓದಿ.

  • ಎಷ್ಟೇ ಬ್ಯುಸಿ ಇರ್ಲಿ ಹಬ್ಬಕ್ಕೆ ತಂಗಿಯ ಎದುರು ಹಾಜರ್..!​​

ಭಾರತೀಯ ಸಂಸ್ಕೃತಿಯ ಹಬ್ಬಗಳಲ್ಲಿ ಅಣ್ಣ- ತಂಗಿಯ ಪ್ರೀತಿಯ ಸಂಬಂಧವನ್ನು ಸಾರುವ ಹಬ್ಬ ರಕ್ಷಾ ಬಂಧನ್​​. ತಂಗಿಗೆ ಕಾವಲಾಗಿ, ಸುಖ ದುಃಖಗಳಿಗೆ ಜತೆಯಾಗಿ ನಿಲ್ಲುವ ಅಣ್ಣನ ಪಾತ್ರ ತುಂಬಾ ದೊಡ್ಡದು. ಕರುಳ ಬಳ್ಳಿಯ ಈ ಸಂಬಂಧ ಜನುಮ- ಜನುಮಗಳ ಅನುಬಂಧವನ್ನು ಮೀರಿದೆ. ಈ ಹಬ್ಬ ಸೆಲೆಬ್ರೆಟಿಗಳಿಗೂ ತುಂಬಾ ವಿಶೇಷವಾದದ್ದು. ಇನ್ನೂ ನ್ಯಾಷನಲ್​ ಸ್ಟಾರ್​​ಗೆ ಈ ಹಬ್ಬ ಬಂತಂದ್ರೆ ಮನೆ ತುಂಬಾ ಸಡಗರ, ಸಂಭ್ರಮ. ಮಾಸ್ಟರ್​ ಪೀಸ್​ ಪ್ರಪಂಚದ ಯಾವ ಮೂಲೆಯಲ್ಲಿದ್ರೂ ಓಡೋಡಿಕೊಂಡು ಬಂದು ತಂಗಿಯ ಎದ್ರು ಹಾಜರಿರ್ತಾರೆ.

ಪ್ಯಾನ್​ ಇಂಡಿಯಾ ಸ್ಟಾರ್ ರಾಕಿಭಾಯ್​ ಬ್ಯುಸಿ ಶೆಡ್ಯೂಲ್​​​ ಎಲ್ಲರಿಗೂ ಗೊತ್ತು. ಆದ್ರೆ ಪ್ರೀತಿಯ ತಂಗಿ ನಂದಿನಿ ಕಂಡ್ರೆ ರಾಕಿಭಾಯ್​ಗೆ ಪಂಚಪ್ರಾಣ. ರಕ್ಷಾ ಬಂಧನ ಹಬ್ಬಕ್ಕೆ ತಂಗಿ ಕೈಯಲ್ಲಿ ರಾಖಿ ಕಟ್ಟಿಸ್ಕೊಳ್ಳೋದು ಮಾತ್ರ ಯಶ್​ ಮಿಸ್​ ಮಾಡಲ್ಲ. ಇದ್ರ ಜತೆಗೆ ಪ್ರೀತಿಯ ತಂಗಿಗೆ ಉಡುಗೊರೆ ಕೊಡೋದನ್ನು ಮರೆಯೋದಿಲ್ಲ. ಬೆಂಗಳೂರಿನಲ್ಲಿ ನೆಲೆಸಿರುವ ನಂದಿನಿಯ ಮದ್ವೆಯನ್ನು ಅದ್ಧೂರಿಯಾಗಿ ಮಾಡಿದ್ದ ರಾಕಿಭಾಯ್​ಗೆ ತಂಗಿಯ ಮೇಲಿನ ಪ್ರೀತಿ ಕಿಂಚಿತ್ತೂ ಕಡಿಮೆಯಾಗಿಲ್ಲ. ಇದೀಗ ರಾಕಿಭಾಯ್​ ರಕ್ಷಾ ಬಂಧನ ಹಬ್ಬದ ಪೋಟೋ ಶೇರ್ ಮಾಡಿದ್ದು, ಕೆಳಗೆ ಬರೆದುಕೊಂಡಿರುವ ಸಾಲುಗಳು ಭಾವನಾತ್ಮಕವಾಗಿವೆ.

  • ಒಂದು ಮಾಡಿದ ವಿಧಿಗೆ ಯಶ್​ ಪ್ರೀತಿಯ ಅಭಿನಂದನೆ
  • ಆರತಿ ಬೆಳಗಿ, ತಿಲಕ ಇಟ್ಟು ರಾಖಿ ಕಟ್ಟಿದ ಮುದ್ದಿನ ತಂಗಿ..!

ಯಶ್​ ಶೇರ್​ ಮಾಡಿರೋ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ. ಜತೆಗೆ ತಮ್ಮ ಟ್ವಿಟರ್ ಖಾತೆಯಲ್ಲಿ ವಿಧಿಯ ಬರಹ ನಮ್ಮಿಬ್ಬರನ್ನು ಒಂದು ಮಾಡುವಂತೆ ಮಾಡಿದೆ. ಆದ್ರೆ ಪ್ರೀತಿ, ಸಹಕಾರ ಈ ಸಂಬಂಧವನ್ನು ಇನ್ನಷ್ಟು ಗಟ್ಟಿ ಮಾಡಿದೆ ಎಂದು ಬರೆದುಕೊಂಡಿದ್ದಾರೆ. ಜತೆಗೆ ರಕ್ಷಾ ಬಂಧನ ಹಬ್ಬದ ಶುಭಾಷಯಗಳನ್ನು ಎಲ್ಲರಿಗೂ ತಿಳಿಸಿದ್ದಾರೆ ನ್ಯಾಷನಲ್ ಸ್ಟಾರ್.

ಸಹೋದರಿ ನಂದಿನಿ, ಅಣ್ಣನ ಹಣೆಗೆ ತಿಲಕ ಇಟ್ಟು ಜೀವನದ ಹಾದಿ ಸುಗಮವಾಗಿರಲಿ. ಅಣ್ಣನ ಕೀರ್ತಿ ಪತಾಕೆ ಉತ್ತುಂಗಕ್ಕೇರಲಿ ಎಂದು ಭಗವಂತನಲ್ಲಿ ಭೇಡಿಕೊಂಡಿದ್ದಾರೆ. ರಾಕಿಭಾಯ್​ ಈ ಸುಂದರ ಸಂಸ್ಕೃತಿಯ ಆಚರಣೆಗೆ ತಲೆ ಬಾಗಿ ನಮಿಸುವ ಪಟಗಳು ವಿನಯವಾಗಿವೆ. ಅಂತೂ ಕರೆಯದೆ ಬಂದು ತಂಗಿಯ ಕೈಯಿಂದ ರಾಖಿ ಕಟ್ಟಿಸಿಕೊಳ್ಳುವ ಈ ಸಂಬಂಧ ಅಗಾಧವಾದದ್ದು. ಪ್ರೀತಿ ಸಾಗರಕ್ಕಿಂತ ಆಳವಾದದ್ದು. ಸ್ಯಾಂಡಲ್​ವುಡ್​​ನಲ್ಲಿ ಶಿವಣ್ಣ- ರಾಧಿಕಾ ಕೂಡ ಪ್ರತಿ ವರ್ಷ ಇದೇ ರೀತಿ ರಜ್ಷಾ ಬಂಧನ್​ ಆಚರಿಸಿಕೊಳ್ಳೋದು ವಿಶೇಷ.

ಅಂತೂ ಇಟಲಿ, ಯುರೋಪ್​ ಪ್ರವಾಸದಲ್ಲಿ ಬ್ಯುಸಿ ಇದ್ದ ರಾಕಿಭಾಯ್,​ ಹಬ್ಬದ ಮೂಲಕ ಪ್ರತ್ಯಕ್ಷವಾಗಿದ್ದಾರೆ. ಹಬ್ಬ ಆಚರಣೆಯ ಜತೆಗೆ ಮೈಸೂರಿನಲ್ಲಿನ ಯುವಜನ ಮಹೋತ್ಸವದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿರೋ ಯಶ್,​ ಕೆಜಿಎಫ್-​2 ನಂತ್ರ ಮೊಟ್ಟ ಮೊದಲ ಬಾರಿಗೆ ಅಭಿಮಾನಿಗಳೆದ್ರು ಪ್ರತ್ಯಕ್ಷವಾಗಿದ್ದಾರೆ. 75ನೇ ಸ್ಯಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆ ನಡೆದ ಕಾರ್ಯಕ್ರಮಕ್ಕೆ ಗೆಸ್ಟ್​​​ ಆಗಿದ್ದ ಯಶ್​ರನ್ನ ಕಂಡ ಕನ್ನಡ ಕಲಾಭಿಮಾನಿಗಳು ಚಿಲ್​ ಆಗಿದ್ದಾರೆ. ಅಂತೂ ರಾಕಿಯ ರಾಖಿ ಹಬ್ಬ ಪ್ರತಿ ವರ್ಷದಂತೆ ಈ ವರ್ಷವೂ ಜೋರಾಗಿ ನಡೆದಿದೆ.

ರಾಕೇಶ್​ ಆರುಂಡಿ, ಫಿಲ್ಮ್​​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES