Wednesday, January 22, 2025

ಅರಮನೆ ನಗರಿಗೆ ಯಶ್​​​ ರಾಕಿಭಾಯ್​ ಫ್ಯಾನ್ಸ್​​ ಖುಷ್​​​​​

ಪ್ರಪಂಚದ ಮೂಲೆ ಮೂಲೆಯಲ್ಲೂ ಪ್ರಧಾನಿ ಮೋದಿ ಕೊಟ್ಟ ಕರೆಗೆ ಹರ್​ ಘರ್​ ತಿರಂಗಾ ಅಭಿಯಾನಕ್ಕೆ ಮನ್ನಣೆ ಸಿಕ್ಕಿದೆ. ಈ ಬಾರಿ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಡಗರ ಸಂಭ್ರಮ ಹಿಮ್ಮಡಿಯಾಗಿದೆ. ಇತ್ತ ಅರಮನೆ ನಗರಿಯಲ್ಲಿ ರಾಕಿಭಾಯ್​ ಫ್ಯಾನ್ಸ್​​​ಗೆ ಲಡ್ಡು ಬದ್ದು ಬಾಯಿಗೆ ಬಿದ್ದಿದೆ. ಡಬಲ್​ ಧಮಾಕ , ಡಬಲ್​ ಖುಷಿಯನ್ನು ಮೈಸೂರಿನ ಫ್ಯಾನ್ಸ್ ಸಂಭ್ರಮಿಸಲು ಸಜ್ಜಾಗಿದ್ದಾರೆ. ಯೆಸ್​​​​. ಆಗಸ್ಟ್​ 11ಕ್ಕೆ​ ಮೈಸೂರಲ್ಲಿ ಏನ್​ ವಿಶೇಷ ಅಂತೀರಾ..? ಈ ಸ್ಟೋರಿ ಓದಿ.

  • ಹರ್​ ಘರ್​ ತಿರಂಗಾ ಅಭಿಯಾನಕ್ಕೆ ಸುಲ್ತಾನನ ಸಾಥ್​​​..!

ಸಿಡಿದೆದ್ದು ಎಡೆಯೆತ್ತಿದ ಶೂರ, ರೋಷ ಬಿಚ್ಚಿಟ್ಟ ಎಂಡೆದೆ ಧೀರ, ಸ್ಯಾಂಡಲ್​ವುಡ್​ ಸುಲ್ತಾನ ನಮ್ ರಾಕಿಭಾಯ್​​. ರಾಕಿಭಾಯ್​​ ಎಲ್ಲಿದ್ದಾರೆ..? ಏನ್​ ಮಾಡ್ತಿದ್ದಾರೆ..? ಅವ್ರ ಕಾಲ್​ ಶೀಟ್​ ಸಿಗುತ್ತಾ..? ಇದು ಉತ್ತರ ಸಿಗದೇ ಇರೋ ಯಕ್ಷ ಪ್ರಶ್ನೆಗಳು. ಆದ್ರೆ, ರಾಕಿಭಾಯ್​​ ಬಗ್ಗೆ ನಾವ್​ ಹೊಸ ಅಪ್ಡೇಟ್​ ಕೊಡ್ತಾ ಇದ್ದೀವಿ. ಈ ಗುಡ್​ನ್ಯೂಸ್​​ ಕೇಳಿ ಅರಮನೆ ನಗರಿಯ ಅಭಿಮಾನಿಗಳಿಗೆ ಫುಲ್​ ದಿಲ್​ ಖುಷ್​ ಆಗಿದೆ. ರಾಕಿಂಗ್​ ಸ್ಟಾರ್​​​ನ ಹತ್ತಿರದಿಂದ ನೋಡೋ ಭಾಗ್ಯ ಎದುರಾಗಿದೆ.

ಇಟಲಿ, ರೋಮ್​, ಯುರೋಪ್​​  ಹೀಗೆ ಕಡಲ ದಾಟಿ ವಿಶ್ವ ಪರ್ಯಟನೆಯಲ್ಲಿರೋ ರಾಕಿಭಾಯ್​ ಸದ್ಯ ಕರ್ನಾಟಕದಲ್ಲಿದ್ದಾರಾ ಅನ್ನೋದೆ ಡೌಟ್​​​. ಇತ್ತೀಚೆಗೆ ಹರ್​ ಘರ್​ ತಿರಂಗಾ ಅಭಿಯಾನಕ್ಕೆ ಬೆಂಬಲ ಸೂಚಿಸಿ ದೇಶಪ್ರೇಮ ಮೆರೆದಿದ್ದ ರಾಕಿಂಗ್​ ಸ್ಟಾರ್​ ಮೈಸೂರಿಗೆ ಆಗಮಿಸ್ತಾ ಇದ್ದಾರೆ. 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಸೆಲೆಬ್ರೇಟ್​ ಮಾಡೋಕೆ ಅರಮನೆ ನಗರಿಗೆ ಆಗಸ್ಟ್​ 11ಕ್ಕೆ ಬರಲಿದ್ದಾರಂತೆ. ಆಂತೂ ತುಂಬಾ ದಿನಗಳ ನಂತ್ರ ಫ್ಯಾನ್ಸ್​​ ಎದುರು ಮಾಸ್ಟರ್​ ಪೀಸ್​ ಪ್ರತ್ಯಕ್ಷವಾಗ್ತಿದ್ದಾರೆ.

  • ಮೈಸೂರು ವಿವಿ ಹಬ್ಬಕ್ಕೆ ರಾಕಿಂಗ್​ ಸ್ಟಾರ್​ ಸ್ಪೆಷಲ್​ ಗೆಸ್ಟ್​​​
  • ಯುವಜನ ಮಹೋತ್ಸವಕ್ಕೆ ಯೂತ್​ ಐಕಾನ್​​ ಎಂಟ್ರಿ

ಕೆಜಿಎಫ್​​ 2 ಚಿತ್ರದ ನಂತ್ರ ರಾಕಿಭಾಯ್​​ ರಿಲ್ಯಾಕ್ಸ್​ ಮೂಡ್​ನಲ್ಲಿದ್ದಾರೆ. ಜಾಲಿಮೂಡ್​​​​​​​​ನಲ್ಲಿದ್ದ ರಾಕಿಭಾಯ್​ ಆಗಸ್ಟ್​ 11ರಂದು ಮೈಸೂರು ವಿವಿ ಯುವಜನಮಹೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಕರ್ನಾಟಕ ಸರ್ಕಾರ ಹಾಗೂ ಮೈಸೂರು ಯುನಿವರ್ಸಿಟಿ ಸಹಯೋಗದಲ್ಲಿ ನಡೆಯಲಿರುವ ಅದ್ಧೂರಿ ಉತ್ಸವಕ್ಕೆ ತೂಫಾನ್ ಎಂಟ್ರಿಯಿಂದ ಆನೆಬಲ ಸಿಕ್ಕಂತಾಗಿದೆ. ಯಶ್​ ಎಂಟ್ರಿ ಕೊಟ್ಟರೆ ಫ್ಯಾನ್ಸ್​ ಕಂಟ್ರೋಲ್​ ಮಾಡೋದು ಕಷ್ಟಸಾಧ್ಯ. ಟ್ರಾಫಿಕ್​ ಜಾಮ್​ ಸೇರಿ, ತುಂಬಿದ ಜನಸಾಗರ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ.

ಯಶ್​ ಬಾಸ್​ ಬರ್ತಾ ಇರೋ ಸುದ್ದಿ ತಿಳೀತಾ ಇದ್ದಂತೆ ಫ್ಯಾನ್ಸ್​ ಐ ಕಾಂಟ್​ ವೈಟ್​ ಅಂತಿದ್ದಾರೆ. ಮುಂದಿನ ಸಿನಿಮಾ ಬಗ್ಗೆ ಯಾವುದೇ ಗುಡ್​ ನ್ಯುಸ್​ ಕೊಡದ ಯಶ್​​​ ಈ ಕಾರ್ಯಕ್ರಮದಲ್ಲಿ ಸಸ್ಪೆನ್ಸ್​​ ರಿವೀಲ್​ ಮಾಡೋ ಸಾಧ್ಯತೆ ಇದೆ. ಇಡೀ ಇಂಡಿಯಾ ಮಾಸ್ಟರ್ ಪೀಸ್​​ ಹೊಸ ಅಪ್ಡೇಟ್​ಗಾಗಿ ಕಾಯ್ತಿದೆ. ಈ ಎಲ್ಲಾ ಕುತೂಹಲಗಳಿಗೆ ರಾಕಿಭಾಯ್​ ಉತ್ತರ ಕೊಡ್ತಾರಾ ಕಾದು ನೋಡ್ಬೇಕಾಗಿದೆ.

ಸ್ಯಾಂಡಲ್​ವುಡ್​ನಲ್ಲಿ ಕೆಜಿಎಫ್​ ಮಾರುತ ಬೀಸಿದ ಮೇಲೆ ಹೊಸ ಅಲೆ ಶುರುವಾಗಿದೆ. ಧೀರ, ಶೂರ, ಕೆಜಿಎಫ್​ ಸುಲ್ತಾನನ ಪ್ರತಿ ಕ್ಷಣದ ಅಪ್ಡೇಟ್​ಗಳು ಚಿತ್ರರಂಗದಲ್ಲಿ ಹೊಸ ಕ್ರಾಂತಿ ಶುರುವಾಗುತ್ತೆ. ಆಗಾಗಿ ಕೆಜಿಎಫ್​ ದಾಖಲೆ ಸರಿಗಟ್ಟೋ ಸಿನಿಮಾಗೆ ಯಶ್​ ನಾಂದಿ ಹಾಡ್ತಾರಾ ಅನ್ನೋ ಪ್ರಶ್ನೆ ಎಲ್ಲರಲ್ಲೂ ಇದೆ. ಅಂತೂ ಮೈಸೂರು ಮಹಾರಾಜ ಕಾಲೇಜಿನ ಮೈದಾನದಲ್ಲಿ ರಾಕಿಭಾಯ್​ ತೂಫಾನ್​​ಗೆ ಫ್ಯಾನ್ಸ್​ ಥ್ರಿಲ್​ ಅಗೋದು ಪಕ್ಕಾ ಆಗಿದೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES