Sunday, December 22, 2024

ಉತ್ತರಾಖಂಡನ ಬ್ರ್ಯಾಂಡ್​ ಅಂಬಾಸಿಡರ್ ಆಗಿ ರಿಷಬ್ ಪಂತ್ ನೇಮಕ.!

ಉತ್ತರಖಂಡ: ಉತ್ತರಾಖಂಡನ ಬ್ರ್ಯಾಂಡ್​ ಅಂಬಾಸಿಡರ್ ಆಗಿ ನೇಮಕವಾದ ಭಾರತೀಯ ಕ್ರಿಕೆಟಿಗ ರಿಷಬ್ ಪಂತ್ ಅವರನ್ನ ಉತ್ತರಖಂಡ ಸಿಎಂ ಪುಷ್ಕರ್​ ಸಿಂಗ್​ ಧಮಿ ಅವರು ಇಂದು ಸನ್ಮಾನಿಸಿದರು.

ನವದೆಹಲಿಯ ಉತ್ತರಾಖಂಡ ಸದನ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿಎಂ ಪಿಎಸ್ ಧಾಮಿ ಅವರು ಕ್ರಿಕೆಟಿಗ ರಿಷಬ್ ಪಂತ್ ಅವರನ್ನ ಸನ್ಮಾನಿಸಿ ನಂತರ ಮಾತನಾಡಿ, ರಾಜ್ಯದಲ್ಲಿ ಕ್ರೀಡೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರಿಷಬ್​ ಪಂತ್​ ಅವರನ್ನ ಬ್ರ್ಯಾಂಡ್​ ಅಂಬಾಸಿಡರ್​ ಆಗಿ ನೇಮಕ ಮಾಡಲಾಗಿದ್ದು, ರಾಜ್ಯದ ಕ್ರೀಡಾ ಕ್ಷೇತ್ರದಲ್ಲಿ ಯುವಕರಿಗೆ ಸ್ಫೂರ್ತಿ ನೀಡುತ್ತದೆ ಎಂದು ಹೇಳಿದ್ದಾರೆ.

ಟ್ವಿಟರ್‌ನಲ್ಲಿ ಪಂತ್ ಅವರನ್ನು “ದೇವಭೂಮಿಯ ಮಗ” ಎಂದು ಕರೆದ ಮುಖ್ಯಮಂತ್ರಿ, ಭಾರತೀಯ ಕ್ರಿಕೆಟ್ ತಂಡದ ಪ್ರತಿಭಾವಂತ ಕ್ರೀಕೆಟ್​ ಆಟಗಾರನನ್ನು ರಾಜ್ಯ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಲಾಗಿದೆ ಎಂದು ಹೇಳಿದ್ದಾರೆ. ಇದು ರಾಜ್ಯದ ಯುವಕರು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಮತ್ತು ಸಾರ್ವಜನಿಕ ಆರೋಗ್ಯದ ಕಡೆಗೆ ಪ್ರೋತ್ಸಾಹಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES