Sunday, December 22, 2024

ಪ್ರೊಮೋಷನಲ್​ ಸಾಂಗ್​​ನಲ್ಲಿ ರಚ್ಚು- ಡಾಲಿ ರೊಮ್ಯಾನ್ಸ್

ಮಾನ್ಸೂನ್ ಮಳೆಯಲ್ಲಿ ಡಾಲಿ ರಚ್ಚು ಡ್ಯಾನ್ಸ್​ ನೋಡೋದೆ ಚಂದ. ಮಾನ್ಸೂನ್ ರಾಗಕ್ಕೆ ಕೌಂಟ್​​ಡೌನ್ ಕೂಡ​ ಶುರುವಾಗಿದೆ. ಈ ನಡುವೆ ಪ್ರೊಮೋಷನಲ್​ ಮೇಕಿಂಗ್​ ಸಾಂಗ್ ಝಲಕ್​ ಟಾಪ್​ ಟ್ರೆಂಡಿಂಗ್​​ನಲ್ಲಿದೆ. ಸೀರೆಯಟ್ಟು ನವಿಲಿನಂತೆ ರಚ್ಚು ಮಿಂಚ್ತಾ ಇದ್ರೆ, ದೇಸಿ ಪಂಚೆಯುಟ್ಟು ಡಾಲಿ ಜಗಮಗಿಸ್ತಿದ್ದಾರೆ. ಡಾಲಿ, ರಚ್ಚು ಬಿಂದಾಸ್​ ಡ್ಯಾನ್ಸ್​​​ನ ನಾವ್​ ತೋರಿಸ್ತೀವಿ. ಹಾಗಾದರೆ ಈ ಸ್ಟೋರಿ ನೀವೇ ಓದಿ.

  • ಮಾನ್ಸೂನ್​ ಕಟೌಟ್​​ ಮುಂದೆ ಕ್ಯೂಟ್​ ಜೋಡಿ ಸ್ಟೆಪ್​​​​..!

ಡಾಲಿ, ರಚ್ಚು ಕಾಂಬಿನೇಷನ್​​ನಲ್ಲಿ ಮಾನ್ಸೂನ್​ ರಾಗ ಕಮಾಲ್​ ಮಾಡ್ತಿದೆ. ಟ್ರೈಲರ್​ ಕೊಟ್ಟ ಟಕ್ಕರ್​​ಗೆ ಫ್ಯಾನ್ಸ್​ ಕೂಡ ಥ್ರಿಲ್​ ಆಗಿದ್ದಾರೆ. ಮೊದಲ ಬಾರಿಗೆ ರಚ್ಚು ಡಬಲ್​ ಗ್ಲಾಮರಸ್​​ ಟಫ್​ ರೋಲ್​ ಲೀಡ್​ ಮಾಡ್ತಿದ್ದು, ಸಿನಿಮಾ ಮೇಲೆ ಕಾತರ ಹೆಚ್ಚಾಗಿದೆ. ಲೈಂಗಿಕ ಕಾರ್ಯಕರ್ತೆಯಾಗಿ ಡಾಲಿ ಪ್ರೇಮಪಾಶದ ಸುಳಿಯಲ್ಲಿ ರಚ್ಚು ಬೀಳಲಿದ್ದಾರೆ. ರಿಲೀಸ್​ ಡೇಟ್​​​ ಹತ್ತಿರ ಬರ್ತಿದ್ದಂತೆ ಪ್ರೊಮೋಷನ್ಸ್​​​​ ಕೂಡ ಜೋರಾಗಿದೆ. ​​

ರೆಟ್ರೋ ಫಾರ್ಮಾಟ್​​ನಲ್ಲಿ ಪ್ರೀತಿ ಸಂಬಂಧಗಳ ಸೆಳೆತಗಳನ್ನು ವಿಭನ್ನ ರೀತಿಯಲ್ಲಿ ಹೇಳೋ ಹೊಸ ಪ್ರಯತ್ನಕ್ಕೆ ಚಿತ್ರತಂಡ ಕೈಹಾಕಿದೆ. ಆಗಸ್ಟ್​ 19ಕ್ಕೆ ತೆರೆಗಪ್ಪಳಿಸಲಿರೋ ಮಾನ್ಸೂನ್​ ಆರ್ಭಟ ತುಸು ಜೋರಾಗಿರೋ ವಾತವಾರಣ ಕ್ರಿಯೇಟ್​ ಆಗಿದೆ. ಇನ್ನೂ ಚಿತ್ರದ ಪ್ರೋಮೋಷನಲ್​ ಸಾಂಗ್​ ಕೂಡ ತಯಾರಾಗಿದ್ದು, ಇದ್ರ ಮೇಕಿಂಗ್​ ತುಣುಕುಗಳು ಸಿಕ್ಕಾಪಟ್ಟೆ ವೈರಲ್​ ಆಗಿವೆ. ವಿಂಟೇಜ್​ ಬೆಂಜ್ ಕಾರ್​ನಲ್ಲಿ ರಚ್ಚು ಸ್ಯಾರಿ ತೊಟ್ಟು ಬರ್ತಿದ್ದಾರೆ. ಕರಾವಳಿ ಚಂಡೇ ಸಪ್ಪಳ, ವಯಲಿನ್​​ ರಾಗದ ನಡುವೆ ರಚ್ಚು ರೊಮ್ಯಾಂಟಿಕ್​ ಲುಕ್​​ ಪ್ಲಸ್​ ಆಗಿದೆ.

  • ರಚ್ಚು ಕೆನ್ನೆ ಹಿಡಿದು ಮುದ್ದು ಮಾಡಿದ ಡಾಲಿ ಧನಂಜಯ
  • ಪ್ರೀತಿ, ಪ್ರೇಮ, ಪ್ರಣಯಕ್ಕೆ ಕಣ್ಸನ್ನೆ ಮಾಡಿದ ಕಪಲ್​​​..!

ಡಿಂಪಲ್​ ಕ್ವೀನ್​ ರಚಿತಾ ರಾಮ್​ ಸ್ಯಾರಿ ತೊಟ್ಟು ಹಾಟ್​ ಆಗಿ ಕಾಣಿಸ್ತಿದ್ರು. ಇನ್ನೂ ಟಗರು ಡಾಲಿ ರಚ್ಚು ಕೆನ್ನೆ ಹಿಡಿದು ಮುದ್ದು ಮಾಡೋ ತವಕದಲ್ಲಿದ್ದರು. ಆದ್ರೇ ಈ ಜೋಡಿ ಕೊನೆಗೆ ಕಣ್ಸನ್ನೆ ಮಾಡಿ ರಿಲೀಸ್​ ಡೇಟ್ನ​​​ ತೋರಿಸಿದೆ. ಯೆಸ್​​. ಸಿನಿಮಾದಲ್ಲಿ ಪ್ರತಿಶತ 80 ರಷ್ಟು ವರುಣಾರ್ಭಟ ಇದೆ. ಜತೆಗೆ ಪ್ರೀತಿ, ಪ್ರೇಮ, ಪ್ರಣಯ, ಎಮೋಷನ್​ಗಳ ಎಫೆಕ್ಟ್​​ ಕೂಡ ದುಪ್ಪಟ್ಟಾಗಿದೆ. ಸದ್ಯ ಮೋಡ ಕವಿದ ವಾತಾವರಣ ಮಾತ್ರ ಇದ್ದು, ಕಂಪ್ಲೀಟ್​​ ಮನರಂಜನೆ ಬೇಕಾದ್ರೆ ತಪ್ಪದೆ ಆಗಸ್ಟ್​​ 19ಕ್ಕೆ ನೇರವಾಗಿ ಥಿಯೇಟರ್​ಗೆ ಬನ್ನಿ ಅಂತಿದ್ದಾರೆ.

ಮಾನ್ಸೂನ್​ ರಾಗ ಚಿತ್ರದ ಹಾಡುಗಳೆಲ್ಲಾ ಹಿಟ್​ ಲಿಸ್ಟ್ ಸೇರಿವೆ. ಇದೀಗ ಪ್ರೊಮೋಷನಲ್​ ಸಾಂಗ್​ ಸರದಿ. ಮೇಕಿಂಗ್​ ಸಾಂಗ್​ ಸದ್ಯ ಟಾಕ್​ ಆಫ್​ ದಿ ಟೌನ್​ ಆಗಿದ್ದು, ರಿಲೀಸ್​ ವೇಳೆಗೆ ಸಿಕ್ಕಾಪಟ್ಟೆ ಸದ್ದು ಮಾಡೋ ಗ್ರೀನ್​ ಸಿಗ್ನಲ್​ ಕೊಟ್ಟಿದೆ. ಸಿನಿಮಾದಲ್ಲಿ ಬೈರಾಗಿ ಖ್ಯಾತಿಯ ಯಶಾ ಶಿವಕುಮಾರ್​ ಕೂಡ ನಟಿಸಿದ್ದು ಆಟಿಟ್ಯೂಡ್​ ರೋಲ್​ ಲೀಡ್​ ಮಾಡಿದ್ದಾರೆ. ಒಟ್ಟಾರೆ ಮಾನ್ಸೂನ್​ ಎಫೆಕ್ಟ್​ ಎಲ್ಲರಿಗೂ ಜೋರಾಗಿ ತಟ್ಟಲಿದೆ. ರಚ್ಚು, ಡಾಲಿ ಚಿತ್ರಕ್ಕೆ ಸಿಗ್ತಿರೋ ರೆಸ್ಪಾನ್ಸ್​ ನೋಡಿ ಫುಲ್​ ಖುಷ್​ ಆಗಿದ್ದಾರೆ.

ಮನ್ಸು ಮರಕೋತಿ ಹಾಡಿನ ಮೂಲಕ ಅಚ್ಯುತ್ ಕುಮಾರ್​​​ ಇಂಪ್ರೆಸ್​ ಮಾಡಿದ್ರೆ, ಯಶಾ ಮ್ಯೂಸಿಕ್ ಡ್ಯಾನ್ಸ್ ಮೂಲಕ ಎಲ್ಲರ ಹೃದಯ ಗೆದ್ದಿದ್ದಾರೆ. ಇನ್ನೂ ರಚಿತಾ ಹಸಿ ಬಿಸಿ ದೃಶ್ಯಗಳಲ್ಲಿ ಪಡ್ಡೆ ಹೈಕಳ ನಿದ್ದೆ ಕದ್ದಿದ್ದಾರೆ. ವಿ. ಆರ್​ ವಿಖ್ಯಾತ್​​​ ನಿರ್ಮಾಣ, ಎಸ್​.ರವೀಂದ್ರನಾಥ್​ ನಿರ್ದೇಶನದಲ್ಲಿ ಸಿನಿಮಾ ಮೇಕಿಂಗ್​​ ಅದ್ಭುತವಾಗಿದೆಯಂತೆ. ಎಸ್​. ಕೆ ರಾವ್​ ಕ್ಯಾಮೆರಾ ಕೈ ಚಳಕ ಕಣ್ಣಿಗೆ ಒತ್ತಲಿದೆ. ಅನೂಪ್​ ಸೀಳಿನ್​ ಮ್ಯೂಸಿಕ್ ಕಂಪೋಸ್​ ಹೀಗಾಗ್ಲೇ ಸಿಕ್ಸರ್​ ಬಾರಿಸಿದೆ. ಎನಿವೇ ಆಗಸ್ಟ್​​ 19ಕ್ಕೆ ತೆರೆಗೆ ಬರಲಿರೋ ಮಾನ್ಸೂನ್​ ರಾಗ ಸಂಯೋಗಕ್ಕೆ ಪ್ರೊಮೋಷನಲ್​ ಸಾಂಗ್​ ಬೋಸ್ಟರ್​  ಡೋಸ್​ ಆಗಿದೆ.

ರಾಕೇಶ್​ ಆರುಂಡಿ, ಫಿಲ್ಮ್​​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES