Wednesday, January 15, 2025

ಸಂಗೀತಾಗೆ ಮನಸೆಲ್ಲಾ ನೀನೇ ಎಂದ ಡಾರ್ಲಿಂಗ್ ಕೃಷ್ಣ

ಲಕ್ಕಿಮ್ಯಾನ್​​ ಸಿನಿಮಾ ಕನ್ನಡ ಸಿನಿಲೋಕಕ್ಕೆ ಅದೃಷ್ಠದ ಸಿನಿಮಾ ಎಂದೇ ಹೇಳಬೇಕು. ಅಪ್ಪು ಅವ್ರನ್ನ ದೇವರ ರೂಪದಲ್ಲಿ ನೋಡೋ ಬಂಪರ್​​​ ಭಾಗ್ಯದ ಬಾಗಿಲು ಈ ಚಿತ್ರದ ಮೂಲಕ ತೆರೆಯಲಿದೆ. ಇನ್ನೂ ತಾಜಾ ಸಮಾಚಾರ ಅಂದ್ರೆ, ಮನಸೆಲ್ಲಾ ನೀನೆ ಅಂತಾ ಕೃಷ್ಣ ತನ್ನ ಪ್ರೀತಿಯ ಡಾರ್ಲಿಂಗ್​​ಗೆ ಪ್ರೇಮ ನಿವೇದನೆ ಮಾಡ್ತಿದ್ದಾರೆ. ಅಸಲಿಗೆ ಈ ಲಿರಿಕಲ್​ ಸಾಂಗ್​​​ನ ಸ್ಪೆಷಾಲಿಟಿಯೇನು..? ಹಾಗಾದರೆ ಈ ಸ್ಟೋರಿ ಓದಿ.

  • ಅದ್ಭುತ ಸಾಲುಗಳ ಮೆಲೋಡಿ ಹಾಡಿಗೆ ಫುಲ್​ ಮಾರ್ಕ್ಸ್​​​​

ಲಕ್ಕಿಮ್ಯಾನ್​​ ಸಿನಿಮಾ ರಿಲೀಸ್​ಗೂ ಮುನ್ನವೇ ಬೇಜಾನ್​ ಹೈಪ್​ ಕ್ರಿಯೇಟ್​ ಮಾಡಿದೆ. ಅಪ್ಪು ಅವ್ರ ಗೆಸ್ಟ್​ ಅಪಿಯರೆನ್ಸ್​​ ಸಿನಿಮಾದಲ್ಲಿದೆ ಎಂಬ ಗುಡ್​​ ನ್ಯೂಸ್​​​ ಚಿತ್ರಕ್ಕೆ ಡಬಲ್​ ಪಬ್ಲಿಸಿಟಿ ಕೊಟ್ಟಿದೆ. ಡಾರ್ಲಿಂಗ್​ ಕೃಷ್ಣ ಲವ್​​ಮಾಕ್ಟೇಲ್​2 ನಂತ್ರ ಮತ್ತೊಮ್ಮೆ ಬಿಗ್​ಬ್ರೇಕ್​​ ಚಿತ್ರಕ್ಕಾಗಿ ವೆಯ್ಟ್​ ಮಾಡ್ತಿದ್ದಾರೆ. 777ಚಾರ್ಲಿ ಖ್ಯಾತಿಯ ಸಂಗೀತಾ ಶೃಂಗೇರಿ ಕೂಡ ಸಖತ್​ ಕ್ಯೂಟ್​​ ಆಗಿ ಕಾಣಿಸಿಕೊಂಡು ಚಿತ್ರದ ಕುತೂಹಲ ಹೆಚ್ಚಿಸಿದ್ದಾರೆ.

ಭಾರತದ ಮೈಕಲ್​ ಜಾಕ್ಸನ್​​ ಪ್ರಭುದೇವ, ಡ್ಯಾನ್ಸ್​​ ಕಿಂಗ್​ ಅಪ್ಪು ಜಂಟಿಯಾಗಿ ಮಸ್ತ್​ ಸ್ಟೆಪ್​​​ ಹಾಕಿರೋ ದೃಶ್ಯಗಳು ಈಗಾಗ್ಲೆ ವೈರಲ್​​ ಆಗಿವೆ. ಸೆನ್ಸೇಷನ್​ ಕ್ರಿಯೇಟ್​ ಮಾಡಿರೋ ಈ ಹಾಡನ್ನು ನೋಡೋಕೆ ಕೋಟ್ಯಂತರ ಅಭಿಮಾನಿಗಳು ಕನವರಿಸ್ತಿದ್ದಾರೆ. ಇದೀಗ ಈ ಚಿತ್ರದ ಲಿರಿಕಲ್​ ಸಾಂಗ್​ ರಿಲೀಸ್​ ಆಗಿದ್ದು ಯ್ಯೂಟ್ಯೂಬ್​​​ ಟಾಪ್​ ಟ್ರೆಂಡಿಂಗ್​ನಲ್ಲಿದೆ. ಬೈಕ್​ ಏರಿ ಪ್ರೇಯಸಿಯ ಜತೆ ಡಾರ್ಲಿಂಗ್​​ ಕೃಷ್ಣ ಜಾಲಿರೈಡ್​ ಮಾಡ್ತಿರೋ ದೃಶ್ಯಗಳು ಈ ಹಾಡಿನಲ್ಲಿವೆ. ನನಗೇನಾಗಿದೆ..? ನೀನೆ ಬೇಕು, ನೀನೆ ಸಾಕು ಅಂತಾ ಚಡಪಡಿಸ್ತಿದ್ದಾರೆ.

  • ಕಡಲ ಕಿನಾರೆಯಲ್ಲಿ ಕ್ಯಾಮೆರಾ ಹೊತ್ತು ಹೊರಟ ಜೋಡಿ
  • ರಾಜರತ್ನ ಅಪ್ಪು ದೇವರಾಗಿ ರಿಯಲ್​ ಅವತಾರ..!

ಮನಸೆಲ್ಲಾ ನೀನೆ ಲಿರಿಕಲ್​ ಸಾಂಗ್​ನಲ್ಲಿ ಕ್ಯಾಮೆರಾ ಹಿಡಿದು ಸುಂದರ ತಾಣಗಳನ್ನು ಕ್ಯೂಟ್​ ಕಪಲ್​​ ಎಂಜಾಯ್​ ಮಾಡ್ತಿದೆ. ಹಿಂದೆಂದೂ ಹೀಗೆ ಹಾಗಿಲ್ಲ. ನನಗೊಂದೇ ಬೇಡಿಕೆ, ಇದು ಪ್ರೀತಿ ಕೋರಿಕೆ. ಮನಸೆಲ್ಲಾ ನೀನೆ ಅಂತಾ ಡಾರ್ಲಿಂಗ್​ ಸಂಗಾತಿ ಜತೆ ಪ್ರೀತಿಯ ಅಲೆಯೊಳಗೆ ತೇಲ್ತಾ ಇದ್ದಾರೆ. ಸಂಚಿತ್​ ಹೆಗಡೆ ಸುಮಧುರ ಕಂಠದಲ್ಲಿ ಹಾಡು ಕೇಳಲು ಇಂಪಾಗಿದೆ. ವಿಜಯ್​ ವಿಕ್ಕಿ ಮ್ಯೂಸಿಕ್​ ಕಂಪೋಸ್​​ ಮಜಭೂತಾಗಿದೆ.

ನಿಮ್​ ಲೈಫ್​​​​​ನಲ್ಲಿ ಆಗಿರೋ ಮಿಸ್ಟೇಕ್ಸ್​ ಎಲ್ಲಾ ಸರಿ ಮಾಡ್ಕೋಳೋಕೆ ಯ್ಯೂತ್​​ ಐಕಾನ್​ ಅಪ್ಪು ಸೆಕೆಂಡ್​ ಚಾನ್ಸ್​ ಕೊಡಲಿದ್ದಾರೆ. ಯೆಸ್​​. ಲಕ್ಕಿ ಮ್ಯಾನ್​ ಟೀಸರ್​​ನಲ್ಲಿ ಅಪ್ಪು ಎಂಟ್ರಿ ಡೈಲಾಗ್​​ ಇದು. ಸಿನಿಮಾದಲ್ಲಿ ನೆಕ್ಸ್ಟ್​ ಲೆವೆಲ್​​​​ ಫನ್​​​ ಇರೋದು ಟೀಸರ್​​ನಲ್ಲಿ ಎದ್ದು ಕಾಣುತ್ತೆ. ನಾಯಕ ಡಾರ್ಲಿಂಗ್ ಕೃಷ್ಣ​ ಪೇಚಿಗೆ ಸಿಕ್ಕು ಲೈಫ್​ನಲ್ಲಿ ಒದ್ದಾಡೋ ಫನ್ನಿ ಸೀನ್​​ಗಳು ಚಿತ್ರದ ತುಂಬಾ ಇವೆ.

ಸಿನಿಮಾದಲ್ಲಿ ಅಪ್ಪು ಸೆಂಟರ್ ಆಫ್​ ಅಟ್ರ್ಯಾಕ್ಷನ್​ ಆದ್ರೆ, ಸಂಗೀತಾ ಶೃಂಗೇರಿ ನಾಯಕಿಯಾಗಿ ಮಿಂಚಿದ್ದಾರೆ. ರೋಶಿನಿ ಪ್ರಕಾಶ್​​​, ರಂಗಾಯಣ ರಘು, ಸಾಧು ಕೋಕಿಲ, ಸುಂದರ್​ ರಾಜ್​​​, ಪದ್ಮಾ ಶ್ರೀ ಸೇರಿ ಮುಂತಾದ ಕಲಾವಿದರ ಸಮಾಗಮವಿದೆ. ಎಸ್​​​.ನಾಗೇಂದ್ರ ಪ್ರಸಾದ್​ ನಿರ್ದೇಶನದಲ್ಲಿ ಸಿನಿಮಾ ಅದ್ಭುತವಾಗಿ ಮೂಡಿ ಬಂದಿದ್ದು, ಕಮಾಲ್​ ಮಾಡೋ ಗ್ರೀನ್​ ಸಿಗ್ನಲ್​ ಕೊಟ್ಟಿದೆ. ಮೀನಾಕ್ಷಿ ಸುಂದರಂ, ಸುಂದರ ಕಾಮರಾಜ್​ ನಿರ್ಮಾಣದಲ್ಲಿ ಅದ್ಧೂರಿ ಬಜೆಟ್​ನಲ್ಲಿ ಸಿನಿಮಾ ಮಾಡಲಾಗಿದೆ. ಜೀವ ಶಂಕರ್​ ಕ್ಯಾಮೆರಾ ಕಣ್ಣಿನಲ್ಲಿ ಪ್ರತಿ ಫ್ರೇಮು ಸುಂದರವಾಗಿ ಕಾಣಲಿದೆಯಂತೆ. ಒಟ್ನಲ್ಲಿ ಸದ್ಯದಲ್ಲೇ ಲಕ್ಕಿಮ್ಯಾನ್​​ ಕನ್ನಡದ ಹಿಟ್​​ ಸಿನಿಮಾಗಳ ಸಾಲಿಗೆ ಸೇರೋ ಸಾಧ್ಯತೆ ಇದೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES