Wednesday, January 22, 2025

ಆದಾಯ ತೆರಿಗೆ ಅಧಿಕಾರಿಗಳ ಭರ್ಜರಿ ದಾಳಿ: 100 ಕೋಟಿ ರೂ ಬೇನಾಮಿ ಆಸ್ತಿ ಪತ್ತೆ.!

ಮಹಾರಾಷ್ಟ್ರ: ಇಲ್ಲಿನ ಜಲ್ನಾದಲ್ಲಿ ಉಕ್ಕು, ಬಟ್ಟೆ ವ್ಯಾಪಾರಿ ಮತ್ತು ರಿಯಲ್ ಎಸ್ಟೇಟ್ ಡೆವಲಪರ್‌ನ ಕಚೇರಿ ಹಾಗೂ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು, ಸುಮಾರು 100 ಕೋಟಿ ರೂ ವಶಪಡಿಸಿಕೊಂಡಿದ್ದಾರೆ.

ಅಗಷ್ಟ್​ 1 ರಿಂದ 8 ಅಧಿಕಾರಿಗಳು ದಾಳಿ ಮಾಡಿದ್ದು, 56 ಕೋಟಿ ರೂ ನಗದು, 32 ಕೆಜಿ ಚಿನ್ನ, ವಜ್ರಗಳು ಮತ್ತು ಆಸ್ತಿ ಪತ್ರಗಳು ಸೇರಿದಂತೆ ಒಟ್ಟು 100 ಕೋಟಿ ರೂ ಬೇನಾಮಿ ಆಸ್ತಿ ಕಂಡುಬಂದಿದೆ.

ಈ ಬೇನಾಮಿ ಆಸ್ತಿಯನ್ನ ಸದ್ಯ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ವಶಪಡಿಸಿಕೊಂಡ ಹಣವನ್ನು ಎಣಿಸಲು ಸುಮಾರು 13 ಗಂಟೆ ಬೇಕಾಯಿತು ಎಂದು ವರದಿ ತಿಳಿಸಿವೆ.

RELATED ARTICLES

Related Articles

TRENDING ARTICLES