Sunday, January 19, 2025

ಅಡ್ವಾನ್ಸ್​ ಟಿಕೆಟ್​​ ಬುಕಿಂಗ್​ ಶುರು.. ಗಾಳಿಪಟ ರಂಗು ಜೋರು

ಗಾಳಿಪಟ ಮುಗಿಲೆತ್ತರಕ್ಕೆ ಹಾರಾಡಲು ಕ್ಷಣಗಣನೆ ಶುರುವಾಗಿದೆ. ಪ್ರೇಕ್ಷಕನ ಎದೆಗೆ ಒತ್ತಿ, ಬಾನಿಗೆ ಮುತ್ತಿಕ್ಕಿ, ದೇಶ ವಿದೇಶಗಳಲ್ಲಿ ಹಾರಾಡಲಿದೆ ಕನ್ನಡದ ಗಾಳಿಪಟ. ಯೆಸ್​​​. ಭಟ್ರ ಲೇಖನಿಯಲ್ಲಿ ಮೂಡಿದ ಸೊಗಸಾದ ಗಾಳಿಪಟ 2 ಸಿನಿಮಾ ಈ ವಾರ ತೆರೆಗಪ್ಪಳಿಸಲಿದೆ. ಈಗಾಗ್ಲೇ ಅಡ್ವಾನ್ಸ್​ ಬುಕಿಂಗ್​ ಶುರುವಾಗಿದ್ದು, ಬುಕ್​ ಮೈ ಶೋನಲ್ಲಿ ಪ್ರೇಕ್ಷಕರ ಟಿಕೆಟ್​ ಭೇಟೆ ಭರ್ಜರಿಯಾಗಿದೆ.

  • ಮಿಸ್ಟರ್​ ಪರ್ಪೆಕ್ಟ್​​​, ಅಕ್ಷಯ್​ ಚಿತ್ರಗಳಿಗೆ ತೊಡೆ ತಟ್ಟಿದ ಸಿನಿಮಾ

ಭಟ್ರ ಉಲ್ಟಾ ಪಲ್ಟಾ ಸಿನಿಮಾಗಳು ಪ್ರೇಕ್ಷಕನ ತಲೆಗೆ ಬೇಗ ತಲುಪುತ್ತವೆ. ಭಟ್ರ ಮೇಕಿಂಗ್​ ಸ್ಟೈಲ್​​​, ಪ್ರೀತಿಯನು ಹೇಳುವ ಪರಿ ಎಲ್ಲರ ಹೃದಯಗಳನ್ನು ತಲ್ಲಣಗೊಳಿಸುತ್ತವೆ. ಇದೀಗ ಮತ್ತೊಮ್ಮೆ ಗಾಳಿಪಟ ಚಿತ್ರದ ಫ್ರೆಂಡ್ಶಿಪ್​ ಗ್ಯಾಂಗ್​ ಸ್ಯಾಂಡಲ್​ವುಡ್​​​​ನಲ್ಲಿ ಧೂಳೆಬ್ಬಿಸೋಕೆ ಸಜ್ಜಾಗಿದೆ. ಚಿತ್ರದ ಹಾಡುಗಳು ಎಲ್ಲರ ಎದೆ ಸೀಳಿ ಹೃದಯವನ್ನು ನಾಟಿದೆ. ಟ್ರೈಲರ್​​ ಕೂಡ ಮಿಕ್ಸ್​ ಮಸಾಲ ಮನರಂಜನೆಯ ಮೂಲಕ ಹುಚ್ಚು ಹಿಡಿಸಿದೆ.

ಸೂಪರ್​ ಹಿಟ್​​ ಸಿನಿಮಾಗಳ ಸಾಲಿಗೆ ಸೇರೋಕೆ ಭಟ್ರ ಗ್ಯಾಂಗ್​ ಸಜ್ಜಾಗಿದೆ. ಬುಕ್​ ಮೈ ಶೋನಲ್ಲಿ ಗಾಳಿಪಟ 2 ಚಿತ್ರದ ಟಿಕೆಟ್​ ಬುಕಿಂಗ್​ ಓಪನ್​ ಆಗಿದ್ದು, ಪ್ರೇಕ್ಷಕರು ಟಿಕೆಟ್​ ಭೇಟೆಗೆ ತಯಾರಾಗಿದ್ದಾರೆ. ಫ್ಯಾಮಿಲಿ ಸಮೇತ ಸಿನಿಮಾ ಎಂಜಾಯ್​​ ಮಾಡೋಕೆ ಮುಗಿಬಿದ್ದು ಟಿಕೆಟ್​​ ರಿಸರ್ವ್​ ಮಾಡ್ತಿದ್ದಾರೆ. ಈ ವಾರ ತೆರೆಗೆ ಬರಲಿರೋ ಆಮೀರ್​ ಖಾನ್​​ ಅಭಿನಯದ ಲಾಲ್​ ಸಿಂಗ್​ ಚಡ್ಡಾ ಹಾಗೂ ಅಕ್ಷಯ್​ ಕುಮಾರ್​ ಅಭಿನಯದ ರಕ್ಷಾ ಬಂಧನ್​ ಸಿನಿಮಾಗಳಿಗೆ ಸಡ್ಡು ಹೊಡೆಯಲಿದೆ ಗಾಳಿಪಟ ಚಿತ್ರ. ಈಗಾಗ್ಲೇ ಟಿಕೆಟ್​ ಖರೀಧಿಯಲ್ಲೂ ಗಾಳಿಪಟ 2 ಮುಂಚೂಣಿಯಲ್ಲಿದೆ.

  • ದೇಶ ವಿದೇಶಗಳಲ್ಲಿ ಗಾಳಿಪಟ ಮಿಂಚಿನ ಹಾರಾಟ
  • ಬುಕ್​ ಮೈ ಶೋನಲ್ಲಿ ಹೆಚ್ಚಿದ ವೋಟ್ಸ್​ ರೆಕಾರ್ಡ್​​​..!

ಕಾಲೇಜ್​ ವಿದ್ಯಾರ್ಥಿಗಳ ಫ್ರೆಂಡ್ಸ್​ ಗ್ಯಾಂಗ್​​ ಟಿಕೆಟ್​ ಭರಾಟೆಯಲ್ಲಿ ಮುಂಚೂಣಿಯಲ್ಲಿದ್ದು ವೀಕೆಂಡ್​ಗೆ ಮಸ್ತ್​ ಮಜಾ ಮಾಡೋ ತವಕದಲ್ಲಿದೆ. ಎಲ್ಲ ಅಂದುಕೊಂಡಂತೆ ಗಾಳಿಪಟ ಪ್ರಿಕ್ವೆಲ್​ ಚಿತ್ರದ ರೆಕಾರ್ಡ್​ ಬೀಟ್​ ಮಾಡೊ ಮನ್ಸೂಚನೆ ಸಿಕ್ಕಿದೆ. ಪರಭಾಷಾ ಚಿತ್ರಗಳಿಗೆ ಎದೆಯುಬ್ಬಿಸಿ ಸೆಡ್ಡು ಹೊಡೆದಿರೋ ಗಾಳಿಪಟ ವೋಟ್ಸ್​ ವಿಭಾಗದಲ್ಲೂ ಮೊದಲ ಸ್ಥಾನ ಗಿಟ್ಟಿಸಿದೆ. ಭಟ್ರ ಗ್ಯಾಂಗಿಗೆ ಪ್ರೇಕ್ಷಕ ಕೂಡ ಓಕೆ ಅಂದಿದ್ದು ಚಿತ್ರದ ಮೇಲಿನ ಉತ್ಸಾಹದ ಸ್ಪಿರಿಟ್​​ ಪ್ರೂವ್​ ಮಾಡಿದ್ದಾನೆ.

ಗಣಿ, ದಿಗ್ಗಿ, ಪವನ್​​ ಕುಮಾರ್​ ಅಭಿನಯದ ಗಾಳಿಪಟ 2 ಚಿತ್ರದ ಟ್ರೈಲರ್​​ ಯ್ಯೂಟ್ಯೂಬ್​ನಲ್ಲಿ ಹಿಟ್ಸ್​ ದಾಖಲಿಸಿದೆ. ಫನ್​ ವಿತ್​ ಎಮೋಷನ್​​​​​ ನಡುವೆ ರಸವತ್ತಾದ ಊಟ ಸವಿಯಬಹುದು ಅನ್ನೋ ಭರವಸೆ ಮೂಡಿಸಿದ್ದಾರೆ. ಚಿತ್ರದ ಪ್ರತಿ ಹಾಡುಗಳು ಕಿವಿಯಲ್ಲಿ ಗುನುಗುತ್ತಿದ್ದು, ಎದೆಯೊಳಗೆ ಝೇಂಕರಿಸುತ್ತಿವೆ. ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಸಂಯುಕ್ತ ಮೆನನ್ ನಾಯಕಿಯರಾಗಿ ಕಾಣಿಸಿದ್ದಾರೆ. ಇನ್ನೂ ಅನಂತ್​ನಾಗ್​​, ಗಣಿ ಕಾಂಬಿನೇಷನ್​​​ ಅಗೈನ್​ ಮೋಡಿ ಮಾಡಲಿದೆ. ರಂಗಾಯಣ ರಘು, ಸುಧಾ ಬೆಳವಾಡಿ ಪೋಷಕ ಪಾತ್ರದಲ್ಲಿ ನಕ್ಕು ನಗಿಸಲಿದ್ದಾರೆ.

ಈ ವಾರಕ್ಕೆ ಫ್ಯಾಮಿಲಿ ಸಮೇತ ಪಾಪ್​ ಕಾರ್ನ್​ ಸವಿಯುತ್ತಾ ಹದವಾದ, ಮಜವಾದ ಸಿನಿಮಾ ನೋಡಬಹುದು. ರಮೇಶ್​ ರೆಡ್ಡಿ ನಿರ್ಮಾಣದಲ್ಲಿ ಕಜಕಿಸ್ತಾನ ಸೇರಿ ಸುಂದರ ತಾಣಗಳಲ್ಲಿ ಸಿನಿಮಾ ತಯಾರಾಗಿದೆ. ಇನ್ನೂ ಭಟ್ರ ಲೇಖನಿಯಲ್ಲಿ ಪ್ರತಿ ಡೈಲಾಗ್​ಗಳು ಹೊಟ್ಟೆಯೊಳಗೆ ಚಿಟ್ಟೆ ಬಿಟ್ಟು ತತ್ವ ಹೇಳಲಿವೆ. ಸಂತೋಷ್​ ರೈ ಪತಾಜೆ ಕ್ಯಾಮೆರಾ ಕಣ್ಣು ನೋಡುಗರಿಗೆ ಮನಮೋಹಕ ಫೀಲ್​ ಕೊಡಲಿದೆಯಂತೆ. ಅಂತೂ ಮತ್ತೊಮ್ಮೆ ಮನೆಮಂದಿಯೆಲ್ಲಾ ಕೂತು ನಕ್ಕು, ಅತ್ತು ಬರಬಹುದಾದ ಸಿನಿಮಾ ಗಾಳಿಪಟ 2 ಆಗಲಿದೆ.

ರಾಕೇಶ್ ಆರುಂಡಿ, ಫಿಲ್ಮ್​​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES