Monday, December 23, 2024

ಚಾಮರಾಜಪೇಟೆ ಮೈದಾನ ಜಮೀರ್ ಅಪ್ಪನ ಆಸ್ತಿನಾ : ಸಿ.ಟಿ.ರವಿ

ಬೆಂಗಳೂರು : ಚಾಮರಾಜಪೇಟೆ ಮೈದಾನ ಫೈಟ್​ ನಿಲ್ಲುವಂತೆ ಕಾಣ್ತಿಲ್ಲ. ಬೆಂಕಿ ಹಾರಿದ್ರು ಹೊಗೆ ಮಾತ್ರ ಇನ್ನು ಅಡ್ತಾನೆ ಇದೆ. ಈಗಾಗಲೇ  ಬಿಬಿಎಂಪಿ ಕಂದಾಯ ಇಲಾಖೆ ಅಧೀನಕ್ಕೆ ಬರುತ್ತೆ ಅಂತ ಹೇಳಿತ್ತು. ಆದ್ರೆ, ಜಮೀರ್ ಗಣೇಶೋತ್ಸವಕ್ಕೆ ಅವಕಾಶ ಇಲ್ಲ ಎಂದಿದ್ದು ಬಿಜೆಪಿ ನಾಯಕರ ಕಣ್ಣು‌ ಕೆಂಪಾಗಿಸಿತ್ತು. ಜಮೀರ್ ವಿರುದ್ದ ಗುಡುಗಿದ ಸಿ.ಟಿ.ರವಿ ಚಾಮರಾಜಪೇಟೆ ಮೈದಾನ ಜಮೀರ್ ಅಪ್ಪನ ಆಸ್ತಿನಾ..? ನಾವು ಗಣೇಶ ಹಬ್ಬ ಅದ್ಧೂರಿಯಾಗಿ ಮಾಡೇ ಮಾಡ್ತೇವೆ. ಗಣೇಶ ಹಬ್ಬ ಮಾಡೋಕೆ ಬಿಡಲ್ಲ ಎನ್ನೋಕೆ‌ ಜಮೀರ್ ಯಾರು.? ಜಮೀರ್ ಯಾವ ಸೀಮೆ ದೊಣ್ಣೆ ನಾಯಕ ಎಂದು ಗುಡುಗಿದ್ರು.

ಇನ್ನು, ಜಮೀರ್​ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ಭಾರತ ದೇಶದ ಇಂಚಿಂಚು ಸ್ವತ್ತು ಹಿಂದೂಗಳದ್ದು.. ಇದೇನು ಪಾಕಿಸ್ತಾನವಾ ಅಥವಾ ಬಾಂಗ್ಲಾದೇಶನಾ..? ನೀನ್ಯಾರಯ್ಯಾ ಗುಜರಿ ಜಮೀರ್..? ಗಣೇಶೋತ್ಸವ ಮಾಡೋಕೆ ದೊಣ್ಣೆ ನಾಯಕನ ಅಪ್ಪಣೆ ಬೇಕಾ..? ಎಂದು ಗುಡುಗಿದ್ದಾರೆ.

ಚಾಮರಾಜಪೇಟೆ ಮೈದಾನ ಕಂದಾಯ ಇಲಾಖೆಯದ್ದು ಅಂತ ಆಗಿದೆ.. ಎಲ್ಲಾ ಇಲಾಖೆಗೂ ಜಾಗ ಮಂಜೂರು ಮಾಡುವ ಇಲಾಖೆ ಕಂದಾಯ ಇಲಾಖೆ. ಯಾರ್ಯಾರೋ ಬಂದು ಧ್ವಜ ಹಾರಿಸ್ತೀವಿ ಅಂದ್ರೆ ಆಗಲ್ಲ. ಕಂದಾಯ ಇಲಾಖೆ ಮೈದಾನದಲ್ಲಿ ಏನ್ ಮಾಡಬೇಕು ಅನ್ನೊ ನಿರ್ಧಾರ ಮಾಡುತ್ತೆ ಎಂದು ಜಮೀರ್​ಗೆ ಆರ್ ಅಶೋಕ್ ‌ಟಕ್ಕರ್ ನೀಡಿದ್ರು. ಒಟ್ಟಿನಲ್ಲಿ ಮಳೆ ನಿಂತರೂ ಮಳೆ ಹನಿ ನಿಂತಿಲ್ಲ ಎಂಬುವಂತೆ ಉಭಯ ನಾಯಕರ ನಡುವೆ ಈದ್ಗಾ ಫೈಟ್ ನಡೆಯುತ್ತಿದೆ.

ರಾಘವೇಂದ್ರ.ವಿ.ಎನ್​, ಪೊಲಿಟಿಕಲ್ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES