Sunday, December 22, 2024

ನಮ್ಮ ದೇಶದ ಭವಿಷ್ಯ ನಮ್ಮ ಜನತೆಯ ಕೈಯಲ್ಲಿದೆ: ಸಿಎಂ ಬೊಮ್ಮಾಯಿ

ಮೈಸೂರು : 75ನೇ ಸ್ವಾತಂತ್ರ್ಯೋತ್ಸವವನ್ನು ರಾಜ್ಯಾದ್ಯಂತ ಸರ್ಕಾರ ಅದ್ಧೂರಿಯಾಗಿ ಆಚರಿಸಲಿದೆ ಎಂದು ಮೈಸೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯೋತ್ಸವಕ್ಕೆ ಶುಭಾಶಯ ಹೇಳೋದಕ್ಕೆ ಬಂದಿರುವೆ. ಆದರೆ ನೀವಿಷ್ಟು ಆತುರ ಮಾಡಬೇಡಿ. ನೀವು ಹೀಗೆ ಮಾಡಿದರೆ ನಾನು ಮಾತೇ ಆಡಲ್ಲ ಎಂದರು.

ಇನ್ನು, ಒಮಿಕ್ರಾನ್ ರೂಪಾಂತರ ತಳಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕೇಂದ್ರದಿಂದ ಸೂಚನೆ ಬರುವ ಮುನ್ನ ಎಚ್ಚೆತ್ತುಕೊಂಡಿದ್ದೇವೆ. ನಿರಂತರವಾಗಿ ಅದರ ಕುರಿತು ಸಂಶೋಧನೆ ನಡೆಯುತ್ತಿದೆ. ರಾಜ್ಯದಲ್ಲಿ ಸದ್ಯ ಯಾವುದೇ ಆತಂಕವಿಲ್ಲ ಎಂದು ಹೇಳಿದರು.

ಹರ್ ಘರ್ ತಿರಂಗ ಹಾರಿಸುವ ವಿಚಾರಕ್ಕೆ ಸಂಬಂಧ ಪಟ್ಟಂತೆ ಮಾತನಾಡಿದ ಅವರು, ರಾಜ್ಯಾದ್ಯಂತ ಸರ್ಕಾರ ಅದ್ಧೂರಿಯಾಗಿ ಆಚರಿಸಲಿದೆ. ಮುಂದಿನ‌ ನಮ್ಮ ದೇಶದ ಭವಿಷ್ಯದ ನಮ್ಮ ಜನತೆಯ ಕೈಯಲ್ಲಿದೆ. ತ್ರಿವರ್ಣ ಧ್ವಜ ತ್ಯಾಗ, ಬಲಿದಾನ‌,ಹೋರಾಟದಿಂದ ಸಿಕ್ಕಿರುವುದು. ಸ್ವತಂತ್ರ್ಯ ಪೂರ್ವದ ಹಿರಿಯರು ಹೋರಾಟ ಮಾಡಿರುವ ಫಲ. ಸ್ವತಂತ್ರ್ಯ ಹೋರಾಟವನ್ನ ತಿರುಚದೆ ಸತ್ಯಾಸತ್ಯತೆ ತಿಳಿಸಬೇಕಿದೆ. ತರಿಂಗ ಧ್ವಜದಲ್ಲಿ ಭಾರತದ ಏಕತೆ, ಸ್ವಾತಂತ್ರ್ಯತೆ ಎಲ್ಲ ಅಡಗಿದೆ. ಅಂತಹ ಕೀಳು ಮಟ್ಟದ ಮಾತಿಗೆ ಜನತೆ ಬೆಲೆ ಕೊಡಲ್ಲ. ಜನ ಮತ್ತಷ್ಟು ಸ್ಪೂರ್ತಿ ಪ್ರೇರಣೆಯಿಂದ ಆಚರಣೆ ಮಾಡ್ತಾರೆ. ಸ್ವತಂತ್ರ್ಯದ ಬಗ್ಗೆ ಕೆಲವರಿಗೆ ಇತಿಹಾಸ ಗೊತ್ತಿಲ್ಲ. ಕೆಲವರು ಅದನ್ನ ತಿರುಚುವ ಕೆಲಸ ಮಾಡ್ತಾ ಇದ್ದಾರೆ ಎಂದರು.

ಅದಲ್ಲದೇ, ಮಳೆಹಾನಿ ಸಂಬಂಧ ಪರಿಹಾರ ನೀಡಲಾಗುವುದು. ಮೊದಲ ಹಂತದಲ್ಲಿ ಪರಿಹಾರ ನೀಡುತ್ತಿದ್ದೇವೆ. ಇದಕ್ಕಾಗಿ ಎಲ್ಲ ರೀತಿಯ ಕಾರ್ಯ ಚಟುವಟಿಕೆ ಸಿದ್ಧವಾಗಿದೆ. ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

RELATED ARTICLES

Related Articles

TRENDING ARTICLES