Sunday, December 22, 2024

ಪ್ರವೀಣ್​​ ನೆಟ್ಟಾರು ಹತ್ಯೆಯ ಪ್ರಮುಖ ಆರೋಪಿಗಳು ಅಂದರ್​​​.!

ಮಂಗಳೂರು: ಜಿಲ್ಲೆಯ ಬೆಳ್ಳಾರಿಯಲ್ಲಿ ಪ್ರವೀಣ್​​ ಕುಮಾರ ನೆಟ್ಟಾರು ಹತ್ಯೆಗೈದ ಪ್ರಮುಖ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೇರಳ ಗಡಿಭಾಗ ತಲಪಾಡಿ ಚೆಕ್ ಪೋಸ್ಟ್ ಬಳಿ ಈ ಮೂವರನ್ನ ‌ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಸುಳ್ಯದ ಶಿಹಾಬುದ್ದೀನ್ (33), ರಿಯಾಜ್ ಅಂಕತ್ತಡ್ಕ (27), ಬಶೀರ್ ಎಲಿಮಲೆ (28) ಆಗಿದ್ದಾರೆ. ಶಿಹಾಬ್ ಕ್ಯಾಂಪ್ಕೋ ಸಂಸ್ಥೆಗೆ ಕೊಕ್ಕೋ ಪೂರೈಕೆ ಮಾಡುತ್ತಿದ್ದ ರಿಯಾಜ್, ಬೆಳ್ಳಾರೆ, ಸುಳ್ಯದಲ್ಲಿ ಚಿಕನ್ ಸಪ್ಲೈ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಬಶೀರ್ ಹೊಟೇಲ್ ಕೆಲಸ ಮಾಡುತ್ತಿದ್ದ, ಅನುಚೇತ್ ಎಸ್ಪಿ ಸಿಐಡಿ, ಹರಿರಾಮ್ ಶಂಕರ್ ಸೇರಿ ಚಿಕ್ಕಮಗಳೂರು, ಮಂಡ್ಯ, ಉಡುಪಿ ಪೊಲೀಸರು ಈ ಮೂವರನ್ನ ಬಂಧಿಸುವಲ್ಲಿ ಸಹಕಾರ ನೀಡಿದ್ದಾರೆ. ಆರೋಪಿಗಳಿಗೆ ಪಿಎಫ್ಐ-ಎಸ್ಡಿಪಿಐ ಲಿಂಕ್ ಇರುವ ಬಗ್ಗೆ ಶಂಕೆಯಿದೆ. ಸುಳ್ಯ ಇನ್ಸ್ ಪೆಕ್ಟರ್ ನವೀನಚಂದ್ರ ಜೋಗಿ ಅವರ ತಂಡವು ನಿಗಾ ಇಟ್ಟು ಬಂಧಿಸಿದ್ದಾರೆ.

ಆರೋಪಿಗಳು ಮೊದಲು ಕಾಸರಗೋಡಿನ ಮಾಲಿಕುದ್ದೀನಾರ್ ಮಸೀದಿ ಬಳಿಗೆ ಹೋಗಿದ್ದರು, ಬೇರೆ ಬೇರೆ ಜಾಗದಲ್ಲಿ ಯಾರು ಸಹಾಯ ಮಾಡಿದ್ದಾರೆ ಅವರ ಮೇಲೆ ಕ್ರಮ ಕೈಗೊಳ್ತೇವೆ. ಪ್ರವೀಣ್ ಯಾಕೆ ಟಾರ್ಗೆಟ್ ಆಗಿದ್ದ ಅನ್ನೋದು ತನಿಖೆಯ ಬಳಿಕ ತಿಳಿಯಬೇಕು ಸ್ಪ್ಲೆಂಡರ್ ವೆಹಿಕಲ್ ಬಳಕೆಯಾಗಿದೆ, ಐದಾರು ವಾಹನ ಬಳಕೆ ಮಾಡಿದ್ದಾರೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES