Wednesday, January 22, 2025

ಉಗ್ರಂ ವೀರಂ ಫೇಕ್ ನ್ಯೂಸ್.. ‘ಬಘೀರ’ ಕಿಕ್ ಸ್ಟಾರ್ಟ್..!

ರೋರಿಂಗ್ ಸ್ಟಾರ್ ಶ್ರೀಮುರಳಿ ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸಿ ಮೂರು ವರ್ಷಗಳಾಯ್ತು. ಆದ್ರೆ ಅವ್ರ ಕ್ರೇಜ್ ಮಾತ್ರ ಕಿಂಚಿತ್ತೂ ಕುಗ್ಗಿಲ್ಲ. ಮಾಸ್​ಪ್ರಿಯರ ಮನದಲ್ಲಿ ಅವ್ರ ಅಬ್ಬರ, ಆರ್ಭಟ ಜೋರಿದೆ. ಬಘೀರನಾಗಿ ಮತ್ತೊಮ್ಮೆ ಉಗ್ರಾವತಾರ ತಾಳಿದ್ದಾರೆ. ಸೈಲೆಂಟ್ ಆಗಿ ಮೊದಲ ಶೆಡ್ಯೂಲ್ ಮುಗಿಸಿಬಂದಿರೋ ಬಘೀರ ಎಕ್ಸ್​ಕ್ಲೂಸಿವ್ ಸ್ಟೋರಿ ನೀವೇ ಓದಿ.

  • ಮೈಸೂರ್ ಶೆಡ್ಯೂಲ್ ಕಂಪ್ಲೀಟ್.. ಮಂಗಳೂರಿಗೆ ತಯಾರಿ
  • ಪ್ರಶಾಂತ್ ನೀಲ್ ಮಾಸ್ ಕಥೆಗೆ ಡಾಕ್ಟರ್ ಸೂರಿ ಡೈರೆಕ್ಷನ್
  • ಖಾಕಿ ಖದರ್​ನಲ್ಲಿ ಅಬ್ಬರಿಸಿ ಬೊಬ್ಬಿರಿಯಲಿರೋ ಮುರಳಿ

ಮದಗಜ ಚಿತ್ರದ ಬಳಿಕ ಸ್ಯಾಂಡಲ್​ವುಡ್​ನ ಮಾಸ್ ಮಹಾರಾಜ ಶ್ರೀಮುರಳಿ ಕೊಂಚ ಸೈಲೆಂಟ್ ಆಗಿಬಿಟ್ಟಿದ್ರು. ಆದ್ರೆ ಆ ಸೈಲೆನ್ಸ್​ನ ಬ್ರೇಕ್ ಮಾಡಿ, ವಯಲೆನ್ಸ್ ಕಥೆಯೊಂದಿಗೆ ಶೂಟಿಂಗ್ ಕಿಕ್​ಸ್ಟಾರ್ಟ್​ ಮಾಡೋ ಮನ್ಸೂಚನೆ ನೀಡಿದ್ದು ಮಾತ್ರ ಪ್ರತಿಷ್ಠಿತ ಹೊಂಬಾಳೆ ಫಿಲಂಸ್. ಹೌದು.. ಕೆಜಿಎಫ್ ನಿರ್ಮಾಪಕರು ಡಾಕ್ಟರ್ ಸೂರಿ ನಿರ್ದೇಶನದ ಬಘೀರ ಚಿತ್ರವನ್ನು ಮುಹೂರ್ತ ನೆರವೇರಿಸೋ ಮುಖೇನ ಚಿತ್ರಕ್ಕೆ ಚಾಲನೆ ನೀಡಿದ್ರು.

ಅಲ್ಲಿಗೆ ಮಫ್ತಿ ನಂತ್ರ ಮತ್ತೆ ಗೆಲುವಿನ ಲಯ ಮಿಸ್ ಮಾಡ್ಕೊಂಡಿದ್ದ ರೋರಿಂಗ್ ಸ್ಟಾರ್​ನ ರೈಟ್ ಟ್ರ್ಯಾಕ್​ಗೆ ತರಲು ಹೊಂಬಾಳೆ ಫಿಲಂಸ್ ಪ್ಲ್ಯಾನ್ ಮಾಡಿದೆ. ದೇವಸ್ಥಾನದಲ್ಲಿ ಸರಳವಾಗಿ ಬಘೀರ ಚಿತ್ರದ ಮುಹೂರ್ತ ನೆರವೇರಿತ್ತು. ಸದ್ಯದಲ್ಲೇ ಶೂಟಿಂಗ್ ಶುರು ಮಾಡೋ ಮನ್ಸೂಚನೆ ಕೂಡ ನಿರ್ದೇಶಕ ಡಾಕ್ಟರ್ ಸೂರಿ ಹಾಗೂ ವಿಜಯ್ ಕಿರಗಂದೂರು ನೀಡಿದ್ರು.

ಎಲ್ಲಕ್ಕಿಂತ ಮಿಗಿಲಾಗಿ ರೋರಿಂಗ್ ಸ್ಟಾರ್ ಶ್ರೀಮುರಳಿ, ಜಿಮ್​ನಲ್ಲಿ ಪಾತ್ರಕ್ಕಾಗಿ ಹಗಲಿರುಳು ದೇಹವನ್ನು ದಂಡಿಸಿ, ಹುರಿಗಟ್ಟಿಸುತ್ತಿದ್ದರು. ಅವ್ರ ಫಿಸಿಕ್ ಹಾಗೂ ಫಿಟ್ನೆಸ್ ನೋಡಿದ್ರೇನೇ ಗೊತ್ತಾಗೋ ರೇಂಜ್​ಗೆ ವರ್ಕೌಟ್ ಮಾಡ್ತಿದ್ರು. ಅದ್ರಂತೆ ರೀಸೆಂಟ್ ಆಗಿ ಬಘೀರ ಚಿತ್ರದ ಶೂಟಿಂಗ್ ಮೈಸೂರಿನಲ್ಲಿ ಆರಂಭವಾಗಿ, ನಾಲ್ಕೈದು ದಿನದ ಸಣ್ಣದೊಂದು ಶೆಡ್ಯೂಲ್​ನ ಮಾಡಿ ಮುಗಿಸಿದ್ದಾರೆ ಸೂರಿ.

ಇದೀಗ ಎರಡನೇ ಹಂತದ ಶೂಟಿಂಗ್​ಗೆ ಕಡಲೂರು ಮಂಗಳೂರಿಗೆ ತೆರಳಲು ಸಿದ್ಧತೆ ಕೂಡ ನಡೆಸ್ತಿದೆ ಟೀಂ. ಅಲ್ಲದೆ, ಈ ಸಿನಿಮಾಗೆ ಕಥೆಯನ್ನ ಹೆಣೆದಿರೋದು ಉಗ್ರಂ ಹಾಗೂ ಕೆಜಿಎಫ್ ಮಾಸ್ಟರ್​ಮೈಂಡ್ ಪ್ರಶಾಂತ್ ನೀಲ್ ಅನ್ನೋದು ಎಲ್ರಿಗೂ ಗೊತ್ತೇಯಿದೆ. ಖಾಕಿ ಖದರ್​ನಲ್ಲಿ ಔಟ್ ಅಂಡ್ ಔಟ್ ಹೈ ವೋಲ್ಟೇಜ್ ಮಾಸ್ ಮಸಾಲ ಎಂಟರ್​ಟೈನರ್​ನ ಕೊಡೋಕೆ ಸೂರಿ- ನೀಲ್ ಕಾಂಬೋ ರೋರಿಂಗ್ ಸ್ಟಾರ್ ಜೊತೆ ಕೈಜೋಡಿಸಿದೆ.

ಆದ್ರೀಗ ಬಘೀರ ಬದಿಗಿಟ್ಟು, ಉಗ್ರಂ ಸೀಕ್ವೆಲ್​ ಆದಂತಹ ಉಗ್ರಂ ವೀರಂನ ಕೈಗೆತ್ತಿಕೊಂಡಿದ್ದಾರೆ ಶ್ರೀಮುರಳಿ ಅನ್ನೋ ಗಾಸಿಪ್​ಗಳು ಜೋರಾಗಿ ಹರಿದಾಡ್ತಿವೆ. ಅರೇ.. ಉಗ್ರಂ ವೀರಂ ಚಿತ್ರ ಶ್ರೀಮುರಳಿ- ಪ್ರಶಾಂತ್ ನೀಲ್​ರ ಹಳೇ ಕಮಿಟ್ಮೆಂಟ್. ಸದ್ಯ ಸಲಾರ್​ನಲ್ಲಿ ಬ್ಯುಸಿಯಾಗಿದ್ದಾರೆ ನೀಲ್. ಹೀಗಿರುವಾಗ ಆ್ಯಕ್ಷನ್ ಕಟ್ ಹೇಳೋದು ಯಾರು..? ಪ್ರೊಡ್ಯೂಸ್ ಯಾರು ಮಾಡ್ತಾರೆ ಅನ್ನೋ ಪ್ರಶ್ನೆಗಳು ಮೂಡುತ್ತಿವೆ.

ಉಗ್ರಂ, ರಥಾವರ, ಮಫ್ತಿ ಅಂತಹ ಮಾಸ್ ಎಲಿಮೆಂಟ್ಸ್ ಇರೋ ಕ್ಲಾಸ್ ಸಿನಿಮಾಗಳನ್ನ ನೀಡಿರೋ ರೋರಿಂಗ್ ಸ್ಟಾರ್, ಬಘೀರನಾಗಿ ಅಬ್ಬರಿಸೋದು ಪಕ್ಕಾ ಆಗಿದೆ. ಆದ್ರೆ ಉಗ್ರಂ ವೀರಂ ಯಾಕೆ ಸದ್ದು ಮಾಡ್ತಿದೆ ಅನ್ನೋದು ಯಕ್ಷ ಪ್ರಶ್ನೆ. ಈ ಕುರಿತು ಬಘೀರ ಡೈರೆಕ್ಟರ್ ಸೂರಿ ಅವ್ರನ್ನ ಫಿಲ್ಮಿ ಪವರ್ ಟೀಂ ಕೇಳಿದ್ರೆ, ಅದೆಲ್ಲಾ ಫೇಕ್ ನ್ಯೂಸ್. ನಾವು ಮುಂದಿನ ಹಂತದ ಶೂಟಿಂಗ್​ನ ಮಂಗಳೂರಲ್ಲಿ ಮಾಡಲು ತಯಾರಿ ನಡೆಸ್ತಿದ್ದೇವೆ ಅಂತ ಸುಮ್ಮನಾದ್ರು.

ಅದೇನೇ ಇರಲಿ, ಒಬ್ಬ ಮಾಸ್ ಹೀರೋನ ಒಳ್ಳೆಯ ಗತ್ತು, ಗಮ್ಮತ್ತು ಇರೋ ಅಂತಹ ಪಾತ್ರದೊಂದಿಗೆ ಮಾಸ್ ಕಥಾನಕದೊಂದಿಗೆ ಪ್ರೆಸೆಂಟ್ ಮಾಡಿದ್ರೆ ವರ್ಕೌಟ್ ಆಗಲಿದೆ ಅನ್ನೋದು ಓಪನ್ ಟಾಕ್. ಶ್ರೀಮುರಳಿ ಕ್ಯಾಲಿಬರ್​ಗೆ ಪ್ಯಾನ್ ಇಂಡಿಯಾ ಚಿತ್ರಗಳು ಸೂಟ್ ಆಗಲಿದ್ದು, ಸದ್ಯ ಯಾವ ಸಿನಿಮಾ ಮೊದಲು ಟೇಕ್ ಆಫ್ ಆಗುತ್ತೆ ಅನ್ನೋದನ್ನ ನಿರೀಕ್ಷಿಸಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ 

RELATED ARTICLES

Related Articles

TRENDING ARTICLES