Sunday, December 22, 2024

ಬಿಜೆಪಿ ಕೋಮು ಭಾವನೆ ಕೆರಳಿಸಿ, ಹೆಣದ ಮೇಲೆ ರಾಜಕೀಯ; ಮಾಜಿ ಸಚಿವ ಹೆಚ್. ಆಂಜನೇಯ ವಾಗ್ದಾಳಿ

ರಾಯಚೂರು: ರಾಜ್ಯ ಬಿಜೆಪಿ ಸರ್ಕಾರ ಕಳೆದ ಬಾರಿ ಕೋಮು ಭಾವನೆ ಕೆರಳಿಸಿ, ಹೆಣದ ಮೇಲೆ ಅಧಿಕಾರಕ್ಕೆ ಬಂದಿದೆ ಎಂದು ಮಾಜಿ ಸಚಿವ ಹೆಚ್ ಆಂಜನೇಯ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಂಡು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನ ಕುರಿತು ಕೋಮು‌ ಗಲಭೆ ಸೃಷ್ಟಿಸಲು ಹೊರಟಿದೆ. ಈದ್ಗಾ ಮೈದಾನ ಕಾರ್ಪೋರೇಷನ್ ಸೇರಿದೆ ಎಂದರು. ಇದೀಗ ಕಂದಾಯ ಇಲಾಖೆ ಜಾಗ ಎನ್ನುತಿದ್ದಾರೆ ಎಂದರು.

ಮಾಜಿ ಸಚಿವ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು ಸಿದ್ದರಾಮಯ್ಯ ಮೂರ್ಖತನದ ಪರಮಾವಧಿ ಹೇಳಿಕೆ ವಿಚಾರವಾಗಿ ಮಾತನಾಡಿ, ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಹರಿಕಾರ. ಸಿದ್ದರಾಮಯ್ಯ ಆರ್ಥಿಕ ತಜ್ಞ, ಸಿದ್ದರಾಮಯ್ಯ ಅಧಿಕಾರ ಸಿಕ್ಕಿದಕ್ಕೆ ಪ್ರಜಾಪ್ರಭುತ್ವವಾದಿಯಾಗಿದ್ದಾರೆ. ಇಲ್ಲದಿದ್ದರೆ ನಕ್ಸಲೈಟ್ ಆಗುತ್ತಿದ್ದರೂ ಎಂಬ ಸಿ.ಟಿ ರವಿ ಹೇಳಿಕೆಗೆ ಹೆಚ್. ಆಂಜನೇಯ ತಿರುಗೇಟು ನೀಡಿದರು.

RELATED ARTICLES

Related Articles

TRENDING ARTICLES