Thursday, January 23, 2025

ಮತ್ತೆ ಸುದ್ದಿಯಾದ ಕಿರುತೆರೆ ನಟ ಸುನಾಮಿ ಕಿಟ್ಟಿ

ಬೆಂಗಳೂರು :  ಅಂದ ಹಾಗೇ ಕಳೆದ ತಿಂಗಳು 24 ನೇ ತಾರೀಕು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಬರುವ ಮಿರಾಜ್ ಪಬ್ ಗೆ ಸ್ನೇಹಿತರ ಜೊತೆ ಸುನಾಮಿ ಕಿಟ್ಟಿ ಪಾರ್ಟಿ ಮಾಡಲು ಹೋಗಿದ್ದಾನೆ. ಕಂಠಪೂರ್ತಿ ಕುಡಿದ ಮತ್ತಿನಲ್ಲಿ ಶಾಂಪೇನ್ ಬಾಟಲ್ ಓಪನ್ ಮಾಡಿದ್ದಾರೆ. ಶಾಂಪೇನ್ ಬಾಟಲ್ ಓಪನ್ ಮಾಡಿದ ರಭಸಕ್ಕೆ ಪಕ್ಕದ ಟೇಬಲ್ ನಲ್ಲಿದ್ದ ಕೃಷ್ಣ ಹಾಗೂ ಪ್ರಶಾಂತ್ ಮೇಲೆ ಚೆಲ್ಲಿದೆ. ಇಷ್ಟೇ ನೋಡಿ ಆಗಿದ್ದು, ಸುನಾಮಿಕಿಟ್ಟಿ ಗ್ಯಾಂಗ್ ಗೂ ಪ್ರಶಾಂತ್ ಹಾಗೂ ಕೃಷ್ಣ ಗ್ಯಾಂಗ್ ನಡುವೆ ವಾರ್ ಶುರುವಾಗಿತ್ತು.

ಇನ್ನು ಇದೇ ವಿಚಾರಕ್ಕೆ ಸುನಾಮಿ ಕಿಟ್ಟಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ತಮಗೂ ಈ ಗಲಾಟೆಗೂ ಸಂಬಂಧ ಇಲ್ಲ..ಗಲಾಟೆ ನಡೆದಾಗ ವಾಶ್ ರೂಂಗೆ ಹೋಗಿದ್ದೆ ಅಂತ ಹೇಳಿದ್ದಾರೆ.

ಸದ್ಯ ಕಬ್ಬನ್ ಪಾರ್ಕ್ ಪೊಲೀಸರು ಸುನಾಮಿ ಕಿಟ್ಟಿ ಗ್ಯಾಂಗ್ ಹಾಗೂ ಪ್ರಶಾಂತ್ ಮೇಲೆ ಕೃಷ್ಣ ಕೊಟ್ಟ ದೂರುಗಳ ಆಧಾರದ ಮೇಲೆ ಕೇಸ್ ರಿಜಿಸ್ಟರ್ ಮಾಡಿದ್ದಾರೆ.. ಅದೇನೆ ಇರಲಿ ಕನ್ನಡ ಇಂಡಸ್ಟ್ರಿನಲ್ಲಿ ಬೆಳೆಯಬೇಕಾದ ಈ ಸುನಾಮಿಕಿಟ್ಟಿ ಹುಡುಗರ ಜೊತೆ ಸೇರಿಕೊಂಡು ಪಬ್, ಪಾರ್ಟಿ ಅಂತ ಹಾದಿ ಬೀದಿ ರಂಪಾಟ ಮಾಡಿಕೊಂಡು ಕೆರಿಯರ್ ಹಾಳು ಮಾಡಿಕೊಳ್ಳುತ್ತಿರುವುದು ಸರಿ ಅಲ್ಲ.

RELATED ARTICLES

Related Articles

TRENDING ARTICLES