ತುಮಕೂರು : ಸಿದ್ದಗಂಗೆ ಪವಿತ್ರ ತೀರ್ಥೊದ್ಭವ ಸ್ಥಳ ಸಂಪೂರ್ಣವಾಗಿ ಪುಣ್ಯ ಜಲದಿಂದ ಭರ್ತಿಯಾಗಿದ್ದು, ಇದೇ ಮೊದಲ ಬಾರಿಗೆ ಸಿದ್ದಗಂಗೆಯ ತೀರ್ಥೋದ್ಭವ ಜಲ ಉಕ್ಕಿ ಹರಿದಿದೆ.
ನಗರದ ಸಿದ್ದಗಂಗಾ ಮಠದ ಬೆಟ್ಟದ ಮೇಲಿರುವ ಪುಣ್ಯಕ್ಷೇತ್ರ ಇದಾಗಿದ್ದು, ತೀರ್ಥೋದ್ಭವನ್ನು ಕಣ್ತುಂಬಿಸಿಕೊಳ್ಳಲು ಭಕ್ತರು ಆಗಮಿಸುತ್ತಿದ್ದಾರೆ. ಗೋಸಲ ಸಿದ್ದೇಶ್ವರರು ತಮ್ಮ ಪಾದದಿಂದ ಬಂಡೆಗೆ ಗುದ್ದಿ ನೀರು ಹರಿಸಿದ್ದರು ಹೀಗಾಗಿ ಈ ನೀರು ಹರಿದ ಸ್ಥಳವನ್ನು ಸಿದ್ದಗಂಗೆ ಎಂದು ಕರೆಯಲಾಗುತ್ತಿದೆ ಎಂಬ ಪುರಾವೆ ಇದೆ.
1300 ರಿಂದ 1350 ಸಂದರ್ಭದಲ್ಲಿ ಸಿದ್ದಗಂಗೆ ಮಠಕ್ಕೆ ಭೇಟಿ ನೀಡಿದ್ದ ಗೋಸಲ ಸಿದ್ದೇಶ್ವರರು. ತಮ್ಮ 101 ಶಿಷ್ಯರೊಂದಿಗೆ ಇದೇ ಜಾಗದಲ್ಲಿ ತಪೋನುಷ್ಠಾನ ಮಾಡಿದ್ದರು. ಅಂದಿನಿಂದ ಇಂದಿನವರೆಗೂ ದೋಣೆಯಲ್ಲಿ ವರ್ಷವಿಡಿ ನೀರು ಇರುತ್ತಿತ್ತು. ಇದೀಗ ತುಮಕೂರಿನಲ್ಲಿ ಭರ್ಜರಿ ಮಳೆಯಾಗಿದ್ದರಿಂದ ಉಕ್ಕಿ ಹರಿದ ಪುಣ್ಯಗಂಗೆ ನೀರು ಉಕ್ಕಿ ಹರಿದಿದ್ದರಿಂದ ಮಹಿಳೆಯರು ಗಂಗೆ ಪೂಜೆ ಮಾಡಿದರು.