Monday, December 23, 2024

ಕಾಡಾನೆ ಸಮಸ್ಯೆ ಬಗೆಹರಿಸದಿದ್ದರೆ ರಾಜೀನಾಮೆ ನೀಡಲು ಸಿದ್ದ : ಹೆಚ್​.ಕೆ ಕುಮಾರಸ್ವಾಮಿ

ಹಾಸನ : ಸರ್ಕಾರ ಕಾಡಾನೆ ಸಮಸ್ಯೆ ಬಗೆಹರಿಸದಿದ್ದರೆ ರಾಜೀನಾಮೆ ನೀಡಲು ಸಿದ್ದನಿದ್ದೇನೆ ಎಂದು ಹಾಸನದ ಸಕಲೇಶಪುರದಲ್ಲಿ ಶಾಸಕ ಹೆಚ್.ಕೆ. ಕುಮಾರಸ್ವಾಮಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೂ ಕೂಡ ತೀವ್ರತರವಾಗಿ ಆಲೋಚನೆ ಮಾಡಿದ್ದೇನೆ. ಜನರು ಬಹಳ ಬೇಸರಗೊಂಡಿದ್ದಾರೆ. ಅಂತಿಮ ಹಂತಕ್ಕೆ ಬಂದರೆ ನಾನು ರಾಜೀನಾಮೆ ಕೊಡೋದಕ್ಕೂ ಸಿದ್ದನಿದ್ದೇನೆ ಎಂದು ಹೇಳಿದರು.

ಇನ್ನು, ನನಗೂ ಕೂಡಾ ಬಹಳ ನೋವಿದೆ, ಕಾಫಿಬೆಳೆಗಾರರು, ಹೋರಾಟಗಾರರು, ಜನಸಾಮಾನ್ಯರೂ ಕೂಡಾ ಹೋರಾಟ ಮಾಡುತ್ತಿದ್ದಾರೆ. ಕಾಡಾನೆ ಸಮಸ್ಯೆ ಬಗೆಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಇದರಲ್ಲಿ ರಾಜಕೀಯ ಮಾಡಬಾರದು. ರಾಜಕೀಯ ತೂರಿಸುವ ಮೂರ್ಖತನ ಬೇರೊಂದಿಲ್ಲ. ಹೋರಾಟ ಮಾಡುವುದು ನನಗೆ ಸದನದ ಒಳಗೂ ಹೋರಾಟ ಮಾಡುವುದು ಗೊತ್ತು ಹೊರಗೂ ಹೋರಾಟ ಮಾಡುವುದು ಗೊತ್ತು. ಜನರಿಗೆ ನ್ಯಾಯ ಸಿಕ್ಕಿಲ್ಲ ಅನ್ನೋದು ನನಗೂ ಗೊತ್ತಿದೆ. ಅದಕ್ಕಾಗಿ ಸಾಕಷ್ಟು ಹೋರಾಟಗಳು ನಡೆದಿವೆ. ಹೊರಗೆ ನಿಂತು ಮಾತನಾಡುವವರು ಹೋರಾಟ ಮಾಡಲಿ ನೋಡಣ ಎಂದು ಟೀಕಾಕಾರಿಗೆ ಸವಾಲು ಹಾಕಿದ್ದಾರೆ.

RELATED ARTICLES

Related Articles

TRENDING ARTICLES