Sunday, May 19, 2024

ಗುರಿ ತಪ್ಪದ ಲಕ್ಷ್ಯ: ಭಾರತಕ್ಕೆ ಮತ್ತೊಂದು ಚಿನ್ನ

ಬರ್ಮಿಂಗ್​ಹ್ಯಾಮ್​ನಲ್ಲಿ ನಡೆಯುತ್ತಿರುವ ಕಾಮನ್​ವೆಲ್ತ್ ಗೇಮ್ಸ್​ನ ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್​ ಭಾರತದ ಲಕ್ಷ್ಯ ಸೇನ್ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.

ಫೈನಲ್​ನಲ್ಲಿ ಮಲೇಷ್ಯಾದ ಎನ್‌ಜಿ ತ್ಸೆ ಯೋಂಗ್ ಅವರನ್ನು 21-191, 21-9, 21-16 ಸೆಟ್​ಗಳಿಂದ ಮಣಿಸುವ ಮೂಲಕ ಭಾರತೀಯ ಬ್ಯಾಡ್ಮಿಂಟನ್ ತಾರೆ ಈ ಸಾಧನೆ ಮಾಡಿದರು. ಆರಂಭದಿಂದಲೇ ಭರ್ಜರಿ ಪೈಪೋಟಿಗೆ ಕಾರಣವಾಗಿದ್ದ ಈ ಪಂದ್ಯದಲ್ಲಿ ಇಬ್ಬರು ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಮೊದಲ 7 ಪಾಯಿಂಟ್​ಗಳವರೆಗೆ ಸಮಬಲ ಸಾಧಿಸಿದ್ದ ಈ ಪಂದ್ಯದಲ್ಲಿ ಆ ಬಳಿಕ ಎನ್‌ಜಿ ತ್ಸೆ ಯೋಂಗ್ ಕಾಯ್ದುಕೊಂಡರು. ಇದಾಗ್ಯೂ ಕಂಬ್ಯಾಕ್ ಮಾಡಿದ ಲಕ್ಷ್ಯ ಸೇನ್ ಮೊದಲ ಸುತ್ತಿನ ಅಂತ್ಯದವರೆಗೆ ಪೈಪೋಟಿ ನೀಡಿದರು.

2ನೇ ಸುತ್ತಿನಲ್ಲಿ ಲಕ್ಷ್ಯ ಸೇನ್ ಆರಂಭದಲ್ಲಿ ಮುನ್ನಡೆ ಪಡೆದರೂ, ಮಲೇಷ್ಯಾ ಆಟಗಾರರಿಂದ ತೀವ್ರ ಪೈಪೋಟಿ ಎದುರಿಸಿದ್ದರು. ಆದರೆ ಈ ಹಂತದಲ್ಲಿ ತಮ್ಮ ಅನುಭವವನ್ನು ಧಾರೆಯೆರೆದ ಲಕ್ಷ್ಯ ಎನ್‌ಜಿ ತ್ಸೆ ಯೋಂಗ್ ವಿರುದ್ದ ಸಂಪೂರ್ಣ ಹಿಡಿತ ಸಾಧಿಸಿದರು. ಅಲ್ಲದೆ ಬ್ಯಾಕ್ ಟು ಬ್ಯಾಕ್ ಪಾಯಿಂಟ್​ಗಳನ್ನು ಕಲೆಹಾಕುವ ಮೂಲಕ ಒತ್ತಡ ಹೇರಿದರು. ಈ ಮೂಲಕ 2ನೇ ಸೆಟ್​ ಅನ್ನು 21-9 ಅಂತರದಿಂದ ಭರ್ಜರಿಯಾಗಿ ಗೆದ್ದುಕೊಂಡರು.

RELATED ARTICLES

Related Articles

TRENDING ARTICLES