ವಿಜಯಪುರ : ರಾಜ್ಯಾದ್ಯಂತ ವರುಣನಾರ್ಭಟ ಜೋರಾಗಿದ್ದು, ವಿಜಯಪುರ ಜಿಲ್ಲೆಯಲ್ಲಿ ಪ್ರವಾಹ ಮುಂದುವರೆದಿದೆ. ಪ್ರವಾಹದಲ್ಲಿ ತಾಳಿಕೋಟೆ ಬಳಿಯ ಹಳೆಯ ಸೇತುವೆ ಮುಳುಗಿದೆ. ಹಳೆಯ ಸೇತುವೆ ಮೇಲೆ 7 ರಿಂದ 8 ಅಡಿಯಷ್ಟು ನೀರು ಹರಿಯುತ್ತಿದೆ.
ತಾಳಿಕೋಟೆ ಪಟ್ಟಣದ ಹೊರ ಭಾಗದಲ್ಲಿನ ಸೇತುವೆಯು ಮುಳುಗಿದ್ದು, ಹಳೆಯ ಸೇತುವೆ ಮೇಲೆ 7 ರಿಂದ 8 ಅಡಿಯಷ್ಟು ನೀರು ಹರಿಯುತ್ತಿದೆ. ಇದರಿಂದಾಗಿ ವಿಜಯಪುರ, ತಾಳಿಕೋಟೆ ಹಾಗೂ ಇತರ ಭಾಗಗಳ ಸಂಪರ್ಕ ಕಡಿತಗೊಂಡಿದೆ. ರಾಜ್ಯ ಹೆದ್ದಾರಿ 61 ರಲ್ಲಿ ಸಂಚಾರ ಬಂದಾಗಿದ್ದು, 50 ಕ್ಕೂ ಆಧಿಕ ಕಿಲೋ ಮೀಟರ್ ಸುತ್ತು ಹಾಕೋ ಅನಿವಾರ್ಯತೆ ಉಂಟಾಗಿದೆ. ಹೊಸ ಸೇತುವೆ ಬಿರುಕು ಬಿಟ್ಟ ಕಾರಣ ಅದರ ಮೇಲೆ ಸಂಚಾರ ನಿಷೇಧ ಮಾಡಲಾಗಿದೆ. ಸಂಚಾರ ನಿಷೇಧವಿದ್ದರೂ ಅಪಾಯವನ್ನೂ ಲೆಕ್ಕಿಸದೇ ಸೇತುವೆ ಮೇಲೆ ಜನರು ಬೈಕ್ಗಳಲ್ಲಿ ಓಡಾಡುತ್ತಿದ್ದಾರೆ.